ಇತ್ತೀಚಿನ ಸುದ್ದಿ
ರಾಜ್ಯ ಅಸೆಂಬ್ಲಿ ಎಲೆಕ್ಷನ್: ಶೇ. 48ರಷ್ಟು ಅಭ್ಯರ್ಥಿಗಳು 5ರಿಂದ 12ನೇ ತರಗತಿ ಪಾಸ್!
05/05/2023, 01:29
ಬೆಂಗಳೂರು(reporterkarnataka.com): ರಾಜ್ಯ ವಿಧಾನಸಭೆ ಚುನಾವಣೆಯ ಅಂತಿಮ ಕಣದಲ್ಲಿರುವ 2613 ಮಂದಿ ಅಭ್ಯರ್ಥಿ ಗಳ ಪೈಕಿ ಶೇ.48ರಷ್ಟು ಅಭ್ಯರ್ಥಿಗಳು 5ರಿಂದ ದ್ವಿತೀಯ ಪಿಯುಸಿ ವರೆಗೆ ಮಾತ್ರ ಶಿಕ್ಷಣ ಪಡೆದವರಾಗಿದ್ದಾರೆ. ಶೇ.43ರಷ್ಟು ಅಭ್ಯರ್ಥಿಗಳು ಪದವಿ ಅಥವಾ ಅದಕ್ಕಿಂತ ಹೆಚ್ಚು ವಿದ್ಯಾರ್ಹತೆ ಹೊಂದಿದವರಾಗಿದ್ದಾರೆ.
20ರಿಂದ 40 ವರ್ಷ ವಯಸ್ಸಿನೊಳಗಿನ 832 ಮಂದಿ ಅಭ್ಯರ್ಥಿ ಗಳು ಕಣದಲ್ಲಿದ್ದಾರೆ. 41ರಿಂದ 60 ವರ್ಷದೊಳಗಿನ 1356 ಮಂದಿ ಸ್ಪರ್ಧಿಸುತ್ತಿದ್ದಾರೆ. 61ರಿಂದ 80 ವರ್ಷದೊಳಗಿನ 389 ಮಂದಿ ಸ್ಪರ್ಧಿಗಳಿದ್ದಾರೆ. 81 ವರ್ಷ ಮೇಲ್ಪಟ್ಡ 9 ಮಂದಿ ಅಭ್ಯರ್ಥಿ ಗಳು ಜಯದ ನಿರೀಕ್ಷೆಯಲ್ಲಿದ್ದಾರೆ. ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಈ ಮಾಹಿತಿಯನ್ನು ಬಹಿರಂಗಪಡಿಸಿದೆ.