4:40 PM Sunday24 - November 2024
ಬ್ರೇಕಿಂಗ್ ನ್ಯೂಸ್
ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ… ಫೆಸ್ಟಿವಲ್ ಆಫ್ ಆಸ್ಟ್ರೇಲಿಯಾ: ಶಿಕ್ಷಣದ ಶ್ರೇಷ್ಠತೆ ಮತ್ತು ಪ್ರಿಮಿಯಂ ಎಫ್ & ಬಿ…

ಇತ್ತೀಚಿನ ಸುದ್ದಿ

ಮಂಗಳೂರು ವಿಶ್ವ ವಿದ್ಯಾ ನಿಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕೋವಿಡ್ ಲಸಿಕೆಯ ಕುರಿತು ಆನ್ಲೈನ್ ಕಾರ್ಯಗಾರ

14/05/2021, 21:11

ಮಂಗಳೂರು(reporterkarnatakanews):ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ನಾನು ಯಾಕೆ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕು.? ( Why should I Vaccinate for Covid?) ಎನ್ನುವ ಕಾರ್ಯಕ್ರಮ ಶುಕ್ರವಾರ ಆನ್ಲೈನ್ ಮೂಲಕ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಪಿ.ಎಸ್. ಯಡಪಾಡಿತ್ತಾಯ, ನಮಗೆ ನಾವೇ ಪ್ರಶ್ನೆ ಕೇಳಿಕೊಳ್ಳುವ ಮೂಲಕ ಆತ್ಮಶೋಧನೆ ಮಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದರು ಹಾಗೂ ಕೊರೊನಾದ ಸರಪಳಿಯನ್ನು ಮುರಿಯಲು 25 ಸಲಹೆಗಳನ್ನು ಅವರು ನೀಡಿದರು.

ಕಾರ್ಯಕ್ರಮದ ದಿಕ್ಸೂಚಿ ಮಾತುಗಳನ್ನಾಡಿದ ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಪ್ರತಾಪ್ ಲಿಂಗಯ್ಯ, ಲಸಿಕೆ ಬಗೆಗಿನ ಯಾವುದೇ ವದಂತಿಗೆ ಕಿವಿಗೊಡದೆ ಲಸಿಕೆ ಪಡೆಯಬೇಕು ಮತ್ತು ಇತರರಲ್ಲಿ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಬೇಕು, ಈ ನಿಟ್ಟಿನಲ್ಲಿ ಸ್ವಯಂಸೇವಕರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ತಿಳಿಸಿದರು.

ಗೌರವ ಉಪಸ್ಥಿತಿ ನೆಲೆಯಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಿನ್ಸಿಪಾಲರಾದ ಡಾ.ಅನಸೂಯಾ ರೈ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಡಾ.ಸುಮಲತಾ ಆರ್.ಶೆಟ್ಟಿ ಮತ್ತು ಡಾ.ನಂಜೇಶ್ ಕುಮಾರ್ ವಿಶೇಷ ಉಪನ್ಯಾಸ ನೀಡಿ ಲಸಿಕೆಗಳ ಕುರಿತಾದ ವಿವರವಾದ ಮಾಹಿತಿಯನ್ನು ಹಂಚಿಕೊಂಡರು.

ಮಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ, ಕಾರ್ಯಕ್ರಮ ಆಯೋಜಕರರಾದ ಡಾ.ನಾಗರತ್ನ ಕೆ.ಎ. ಊಹೆಗೂ ನಿಲುಕದೇ ಹರಡುತ್ತಿರುವ ಕೊರೋನಾದ ಎರಡನೆಯ ಅಲೆಯ ಸಂದರ್ಭದಲ್ಲಿ ಲಸಿಕೆ ಏಕೆ ಪಡೆಯಬೇಕು ಎನ್ನುವ ಕಾರ್ಯಕ್ರಮ ಹೇಗೆ ಪ್ರಯೋಜನಕಾರಿ ಎಂದು ತಿಳಿಸುವ ಮೂಲಕ ಪ್ರಾಸ್ತಾವಿಕ ಮಾತುಗಳನ್ನಾಡಿ ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

ಕಾರ್ಯಕ್ರಮ ಕೊಡಗು ಜಿಲ್ಲೆಯ ರಾ.ಸೇ.ಯೋ ಕೋವಿಡ್ ನೋಡಲ್ ಅಧಿಕಾರಿ ವನಿತ್ ವಂದಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ರಾ.ಸೆ.ಯೋ ಕೋವಿಡ್ ನೋಡಲ್ ಅಧಿಕಾರಿ ಡಾ. ಶೇಷಪ್ಪ ಕಾರ್ಯಕ್ರಮ ನಿರ್ವಹಿಸಿದರು.

ಸಂಪನ್ಮೂಲ ವ್ಯಕ್ತಿಗಳು ಹಂಚಿಕೊಂಡ ಮಾಹಿತಿ ಹೀಗಿದೆ :

ಅವುಗಳಲ್ಲಿ ಪ್ರಮುಖವಾದ ಕೆಲವು ವಿಷಯಗಳು ಪ್ರಸ್ತುತವಾಗಿ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎಂಬ ಎರಡು ಲಸಿಕೆಗಳು ಲಭ್ಯವಿದೆ.
ಕೋವಿಶೀಲ್ಡ್ ಲಸಿಕೆ, ಇದನ್ನು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದೆ, ಇದು ವೈರಲ್ ವೆಕ್ಟರ್ ಆಧಾರಿತ ತಂತ್ರಜ್ಞಾನವಾಗಿದೆ.

ಭಾರತ್ ಬಯೋಟೆಕ್ ತಯಾರಿಸಿದ ಕೊವ್ಯಾಕ್ಸಿನ್ ಲಸಿಕೆ, ಸಂಪೂರ್ಣ-ವೈರಿಯನ್ ನಿಷ್ಕ್ರಿಯಗೊಂಡ ಕರೋನಾ ವೈರಸ್ ಲಸಿಕೆ ಆಗಿದೆ.

ಕೋವಿಶೀಲ್ಡ್ ಕರೋನಾ ವೈರಸ್ನ ಭಾಗಗಳೊಂದಿಗೆ ನಿಷ್ಕ್ರಿಯಗೊಂಡ ಅಡೆನೊವೈರಸ್ ಅನ್ನು ಒಳಗೊಂಡಿದೆ.

ಕೊವ್ಯಾಕ್ಸಿನ್ ನಿಷ್ಕ್ರಿಯಗೊಂಡ ಕರೋನಾ ವೈರಸ್ ಅನ್ನು ಒಳಗೊಂಡಿದೆ.

ಲಸಿಕೆ ಹಾಕಿದ ವ್ಯಕ್ತಿಗಳಲ್ಲಿ ರೋಗನಿರೋಧಕ ಪ್ರತಿಕ್ರಿಯೆಯ ದೀರ್ಘಾಯುಷ್ಯವನ್ನು ಇನ್ನೂ ನಿರ್ಧರಿಸಿಲ್ಲ.

18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಮತ್ತು ದೀರ್ಘಕಾಲದ ಉಸಿರಾಟದ ಕಾಯಿಲೆ ಇರುವವರು ವ್ಯಾಕ್ಸಿನೇಷನ್ ತೆಗೆದುಕೊಳ್ಳಬಹುದು.

ಸೋಂಕಿನ ನಂತರವೂ ಲಸಿಕೆ ಸ್ವೀಕರಿಸಲು ಶಿಫಾರಸು ಮಾಡಲಾಗಿದೆ. ಲಸಿಕೆ ಪಡೆಯುವ ಮೊದಲು ಕೋವಿಡ್ ರೋಗಲಕ್ಷಣಗಳಿಂದ ಚೇತರಿಸಿಕೊಂಡ ನಂತರ 4-8 ವಾರಗಳವರೆಗೆ ಕಾಯಬೇಕು.

ಲಸಿಕೆ ಪಡೆಯಲು ತೆರಳುವ ಸಂದರ್ಭದಲ್ಲಿ ಆಧಾರಕ್ಕಾಗಿ ಸರ್ಕಾರದಿಂದ ಅನುಮೋದಿತ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಕಾರ್ಡ್, ರೇಷನ್ ಕಾರ್ಡ್ ಇದರಲ್ಲಿ ಯಾವುದಾದರೊಂದನ್ನು ಬಳಸಬಹುದು.

ಡ್ರಗ್ ಕಂಟ್ರೋಲರ್ ಜನರಲ್ (ಭಾರತ) ನೀಡಿದ ಅನುಮತಿಯ ಪ್ರಕಾರ
ಕೋವಿಶೀಲ್ಡ್ ನ ಮೊದಲ ಡೋಸ್ ನಂತರ 12 -16 ವಾರಗಳ ನಡುವೆ ಎರಡನೇ ಡೋಸೇಜ್ ಅನ್ನು ಪಡೆದುಕೊಳ್ಳಬೇಕು ಮತ್ತು ಕೊವ್ಯಾಕ್ಸಿನ್ ನ ಮೊದಲ ಡೋಸ್ ಪಡೆದ ನಂತರ 0 ಯಿಂದ 28 ನೇ ದಿನದ ನಡುವಿನಲ್ಲಿ ಎರಡನೇ ಡೋಸ್ ಪಡೆದುಕೊಳ್ಳಬೇಕು.
ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಇಂಜೆಕ್ಷನ್ ಪಡೆದ ಜಾಗ ಮೃದುತ್ವ ಮತ್ತು ನೋವು, ತಲೆನೋವು, ಆಯಾಸ, ಅಸ್ವಸ್ಥತೆ, ಪೈರೆಕ್ಸಿಯಾ, ಶೀತ ಮತ್ತು ವಾಕರಿಕೆ ಮುಂತಾದ ಕೆಲವು ಸೌಮ್ಯ ಲಕ್ಷಣಗಳು ಕಂಡುಬರಬಹುದು.ಕೊವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ ಇಂಜೆಕ್ಷನ್ ಪಡೆದ ಜಾಗ ನೋವು, ತಲೆನೋವು, ಆಯಾಸ, ಜ್ವರ, ದೇಹದ ನೋವು, ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿ, ತಲೆತಿರುಗುವಿಕೆ, ನಡುಕ, ಬೆವರುವಿಕೆ, ಶೀತ ಕೆಮ್ಮುವಿನಂತ ಕೆಲವು ಸೌಮ್ಯ ಲಕ್ಷಣಗಳು ಸಂಭವಿಸಬಹುದು. ಈ ಲಸಿಕೆಗೆ ಸಂಬಂಧಿಸಿದ ಯಾವುದೇ ಗಂಭೀರ ಪ್ರತಿಕೂಲ ಪರಿಣಾಮಗಳು ವರದಿಯಾಗಿಲ್ಲ.ಲಸಿಕೆ ಪಡೆದ ನಂತರ 30 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಬೇಕು.

ಕೋವಿಡ್ -19 ರೋಗಲಕ್ಷಣಗಳು, ಗರ್ಭಿಣಿ ಮಹಿಳೆ, ಹಾಲುಣಿಸುವ ತಾಯಿ ಮತ್ತು ರಕ್ತಸ್ರಾವದ ಕಾಯಿಲೆ ಇರುವವರು ಲಸಿಕೆ ತೆಗೆದುಕೊಳ್ಳಬಾರದು.ಲಸಿಕೆ ಪಡೆದ ನಂತರದಲ್ಲಿ ಕಂಡುಬರುವ ಯಾವುದೇ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬೇಕು ಹಾಗೆಯೇ ಲಸಿಕೆ ಪಡೆದ 48 ಗಂಟೆಗಳ ವರೆಗೆ ಧೂಮಪಾನ ಮತ್ತು ಮದ್ಯಪಾನ ಮಾಡಬಾರದು.ಲಸಿಕೆ ಪಡೆದ ನಂತರವೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಬೇಕು, ಸಂವಹನ ನಡೆಸುವಾಗ ಕನಿಷ್ಠ 2 ಮೀಟರ್ ನಷ್ಟು ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಸ್ಯಾನಿಟೈಸರ್ ಮೂಲಕ ಕೈಗಳನ್ನು ಆಗಾಗ ಶುಚಿಗೊಳಿಸುತ್ತಿರಬೇಕು.ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು