12:20 PM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಕೋಲಾರ ಜಿಲ್ಲಾದ್ಯಂತ ಭಾರೀ ವರ್ಷಧಾರೆ : ಒಂದೇ ವಾರದಲ್ಲಿ ದಾಖಲೆಯಾಯಿತು 44.3 ಮಿಮೀ ಮಳೆ 

15/07/2021, 18:29

ಶಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ 

info.reporterkarnataka@gmail.com

ಜಿಲ್ಲೆಯಾದ್ಯಂತ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದ್ದು , ಇನ್ನೂ ಮುಂದುವರೆದಿದೆ. ನಿರಂತರ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ , ಕುಂಟೆಗಳು , ಹಳ್ಳಗಳಲ್ಲಿ ನೀರು ಹರಿಯುತ್ತಿದೆ . ಇಡೀ ವಾತಾವರಣ ಹಚ್ಚ ಹಸಿರಿನಿಂದ ಕೂಡಿದ್ದು , ಮಲೆನಾಡನ್ನೂ ಮೀರಿಸುವಂತಹ ಕಣ್ಮನ ಸೆಳೆಯುವ ವಾತಾವರಣ ನಿರ್ಮಾಣವಾಗಿದೆ . 2021 ರ ಜನವರಿ 1 ರಿಂದ ಜುಲೈ 15 ರವರೆಗೆ ವಾಡಿಕೆಯ 214.2 ಮಿಮೀ ಮಳೆಯ ಬದಲು 340.1 ಮಿಮೀ ಮಳೆ ಸುರಿದಿದ್ದು , ವಾಡಿಕೆಗಿಂತ 125 ಮಿಮೀ ಮಳೆ ಹೆಚ್ಚಿಗೆ ಸುರಿದಿದೆ . ಮಳೆಗಾಲ ಆರಂಭದ ಜೂನ್ 1 ರಿಂದ ಜುಲೈ 15 ರವರೆಗೆ ವಾಡಿಕೆಯ 97 ಮಿಮೀ ಮಳೆಯ ಬದಲು 180.5 ಮಿಮೀ ಮಳೆ ಸುರಿದಿದೆ . ಜುಲೈ 1 ರಿಂದ 15 ರವರೆಗೆ ಕಳೆದ 15 ದಿನಗಳಲ್ಲಿ ವಾಡಿಕೆಯ 31.5 ಮಿಮೀ ಮಳಯ ಬದಲಾಗಿ 107.4 ಮಿಮೀ ಮಳೆ ಸುರಿದಿದೆ . ಒಟ್ಟಿನಲ್ಲಿ ಈವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದೆ . ಬೆಳಗಳಿಗೆ ಆತಂಕ , ಜನಜೀವನ ಅಸ್ತವ್ಯಸ್ತ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಮುಂಗಾರಿನ ಬೆಳಗಳು ಹಳದಿ ಬಣ್ಣಕ್ಕೆ ತಿರುಗುವ ಆತಂಕ ಎದುರಾಗಿದೆ . ಜಿಲ್ಲೆಯ ಕೋಲಾರ , ಮಾಲೂರು , ಶ್ರೀನಿವಾಸಪುರ ತಾಲೂಕುಗಳಲ್ಲಿ ಯತೇಚ್ಚವಾಗಿ ಮಳೆಯಾಗಿದೆ . ದೇಶದಾದ್ಯಂತ ಮುಂಗಾರುಮಳ ಜುಲೈ 13 ರಿಂದ ಪ್ರಾರಂಭವಾಗಿದ್ದು ಮುಂದಿನ ಐದು ದಿನಗಳಲ್ಲಿ ಜಿಲ್ಲಾದ್ಯಂ ಹಗುರದಿಂದ ಸಾಧಾರಣ ಮಳೆಯಾಗುಮ್ಮ … ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ . ಈ ರೀತಿಯ ಮಳೆ ಇದೇ ರೀತಿ ಮುಂದುವರೆದರೆ ಬೆಳೆಗಳ ಎಲೆಗಳು ಹಳದಿ ರ್ವತಿ – ಕ್ಕೆ ತಿರುಗಿ , ಬೆಳೆಗಳಲ್ಲಿ ರೋಗ ಮತ್ತು ಕೀಟಗಳ ಹಾವಳಿ ಹೆಚ್ಚಾಗಿ ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ . ಮುಂದಿನ ದಿನಗಳಲ್ಲಿ ಮಳೆ ಸಂಭವಿಸುವುದರ ಪರಿಣಾಮವಾಗಿ ರೈತರು .. ತಮ್ಮ ಕೃಷಿ ಚಟುವಟಿಕೆಗಳಾದ , ಬಿತ್ತನೆ ಮಾಡುವುದು , ಗೊಬ್ಬರ ನೀಡುವುದು ಹಾಗು ರೋಗ ಹಾಗೂ ಕೀಟನಾಶಕಗಳ ಸಿಂಪರಣೆಯನ್ನು ಮುಂದೂಡಬೇಕೆಂದು ಕೃಷಿ ಹವಾಮಾನ ತಜ್ಞರಾದ ಸ್ವಾತಿ ಜಿ.ಆರ್‌ . ತಿಳಿಸಿದ್ದಾರೆ .

ಇತ್ತೀಚಿನ ಸುದ್ದಿ

ಜಾಹೀರಾತು