ಇತ್ತೀಚಿನ ಸುದ್ದಿ
ಉಳಿ: ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಮನೆ ಮನೆ ಭೇಟಿ; ಮತಯಾಚನೆ
28/04/2023, 14:18
ಬಂಟ್ವಾಳ(reporterkarnataka.com): ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಉಳಿ ಶಕ್ತಿ ಕೇಂದ್ರದಲ್ಲಿ ಕಾರ್ಯಕರ್ತರ ಜೊತೆ ಪ್ರಮುಖ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.
ಬಳಿಕ ಕಾರ್ಯಕರ್ತರ ಹಾಗೂ ಮತದಾರರಲ್ಲಿ ಮಾತನಾಡಿದರು.
ಈ ಬಾರಿಯ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವೆ ನಡೆಯುವ ಚುನಾವಣೆಯಾಗಿದ್ದು, ಧರ್ಮದ ಗೆಲುವಿಗಾಗಿ ಬಿಜೆಪಿಯಿಂದ ನನ್ನನ್ನು ಗೆಲ್ಲಿಸಿ ಎಂದು ಅವರು ಮನವಿ ಮಾಡಿದರು.
ಚುನಾವಣೆಯನ್ನು ಧರ್ಮ ಯುದ್ದ ಎಂದು ಭಾವಿಸಿ ರಾಷ್ಟ್ರೀಯತೆಯ ವಿಚಾರಧಾರೆ ಜೊತೆ ಅಭಿವೃದ್ಧಿಯನ್ನು ಅವಲೋವಕಿಸಿ ಮತದಾನ ಮಾಡುವ ಯೋಜನೆ ಸಿದ್ದಪಡಿಸಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಪಕ್ಷ ಪ್ರತಿಯೊಬ್ಬ ಕಾರ್ಯಕರ್ತನನ್ನು ಗುರುತಿಸಿ ಸ್ಥಾನ ನೀಡಿ ಎತ್ತರಕ್ಕೆ ಬೆಳೆಯಲು ಅವಕಾಶ ನೀಡುತ್ತದೆ ಎಂಬುದಕ್ಕೆ ಸುಳ್ಯ ಬಿಜೆಪಿ ಅಭ್ಯರ್ಥಿ ಸಾಕ್ಷಿಯಾಗಿದ್ದಾರೆ. ಹಾಗಾಗಿ ನಿಷ್ಠೆಯಿಂದ ಪಕ್ಷವನ್ನು ಸಂಘಟಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ವಿಶೇಷ ಪ್ರಯತ್ನ ಮಾಡಿ.ಕಾರ್ಯಕರ್ತರ ಕೆಲಸ ಇತರಿಗೆ ಪ್ರೇರಣೆಯಾಗಲಿದ್ದು, ಚುನಾವಣೆಯವರೆಗೆ ನಿದ್ರಿಸದೆ ಕ್ಷೇತ್ರದಲ್ಲಿ ಸಂಚರ ಮಾಡಿ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ದ.ಕ.ಜಿಲ್ಲೆಯಲ್ಲಿ ಭಯೋತ್ಪಾದಕರು ದಾಳಿಗೆ ಮಾಡಿದ ಸಂಚುಗಳು ನಾವು ನಂಬಿದ ದೈವ ದೇವರುಗಳ ಆಶ್ರೀರ್ವಾದದಿಂದ ವಿಫಲವಾಗಿದೆ ಎಂದು ತಿಳಿಸಿದರು.
ಭಯೋತ್ಪಾದಕರನ್ನು ಮಟ್ಟ ಹಾಕಲು ಬಿಜೆಪಿ ಆಡಳಿತದಿಂದ ಮಾತ್ರ ಸಾಧ್ಯವಾಗಬಹುದು ಬಿಟ್ಟರೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಭಯೋತ್ಪಾದಕ ಸಂಘಟನೆಗಳಿಗೆ ನೈತಿಕ ಬೆಂಬಲ ನೀಡುವ ಪಕ್ಷಗಳನ್ನು ಜನತೆ ಕೈ ಬಿಟ್ಟು ಪ್ರತಿಯೊಬ್ಬರೂ ಬಿಜೆಪಿಯನ್ನು ಬೆಂಬಲಿಸಿ ಎಂದು ಅವರು ಮನವಿ ಮಾಡಿದರು.
ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಉಳಿ ಗ್ರಾಮದ ಹಿರಿಯ ಕಾರ್ಯಕರ್ತ ಗಂಗಾಧರ ಪೂಜಾರಿ ಮತ್ತು ಅವರ ಧರ್ಮಪತ್ನಿ ಚಂದ್ರಾವತಿ ಅವರು ಕಜೆಕಾರು ಮಹಾದೇವಾದೇವಶ್ವರ ದೇವಸ್ಥಾನದಿಂದ ಕಾಲ್ನಡಿಗೆಯಲ್ಲಿ ಕೈಕಂಬ ಪೊಳಲಿ ದ್ವಾರದವರೆಗೆ ಬಂದಿರುವುದು ಯುವಕರಿಗೆ ಪ್ರೇರಣೆ, ಪಕ್ಷಕ್ಕೆ ಶಕ್ತಿ ನೀಡುವ ಕಾರ್ಯವನ್ನು ಅವರು ಮಾಡಿದ್ದಾರೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಸುರೇಶ್ ಮೈರ ಮಾತನಾಡಿ ದಾಖಲೆಯ ರೀತಿಯಲ್ಲಿ ಉಳಿ ಗ್ರಾಮಪಂಚಾಯತ್ ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ ರಾಜೇಶ್ ನಾಯ್ಕ್ ಅವರನ್ನು ಮುಂದಿನ ಅವಧಿಯಲ್ಲಿ ಅವರ ಗೆಲ್ಲಿಸುವ ಮೂಲಕ ಅವರ ಋಣವನ್ನು ತೀರಿಸುವ ಕೆಲಸ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಉಪಾಧ್ಯಕ್ಷ ಚಿದಾನಂದ ರೈ ಕಕ್ಯ,ಪ್ರಮುಖರಾದ ರಂಜಿತ್ ಮೈರ,ವಸಂತ ಸಾಲಿಯಾನ್,ವಸಂತ ಪೂಜಾರಿ ಮಜಲು, ಸನತ್ ಕುಮಾರ್, ಅಣ್ಣಿ ಕರುವಾರಗೋಳಿ, ಸೋಮಶೇಖರ್ ಕಕ್ಯೆ, ಶರ್ಮಿತ್ ಜೈನ್, ಗಂಗಾಧರ ಪೂಜಾರಿ, ಸತೀಶ್ ಬಂಗೇರ,ಸುರೇಶ್ ಬಾರ್ದೊಟ್ಟು, ರಾಜ್ ಕುಮಾರ್ ಉಳಿ, ಯಶವಂತ, ಶ್ರೀನಿವಾಸ, ರೋಹಿನಾಥ,ಶಿವಾನಂದ ಉಳಿ,ಪ್ರಕಾಶ್ ಕರ್ಲ, ಲೋಕೇಶ್ ಕೇಲ್ದಾಬೈಲು, ಗಂಗಾಧರ ಕಜೆಕಾರು, ಚೇತನ್ ಊರ್ದೊಟ್ಟು ಯಶವಂತ ಕೋಡ್ಯೆಲು, ಯತೀಶ್ ಅಗ್ಪಲ, ರಾಜ್ ಕುಮಾರ್ ಬಳ್ಳಿ,ಯಶವಂತ ಆನಂದಮಜಲು, ಶಾಂತಪ್ಪ ಗೌಡ ಪಿಲಿಬೈಲು, ಶಿವಾನಂದ ಕಜೆಕೋಡಿ, ಶಾರದ ಕೊಡಂಗೆ, ವಸಂತ ಗೌಡ ಅಗ್ಪಲ, ಅಣ್ಣಿ ಗೌಸ ಅಗ್ಪಲ,ಧರ್ಣಪ್ಪ ಉಡ್ಕುಂಜೆ, ಲತೀಶ್ ಕುಕ್ಕಾಜೆ, ಶೇಖರ್ ಕಂಚಲಪಲ್ಕೆ, ನಾರಾಯಣ ಪೂಜಾರಿ ಉಡ್ಕುಂಜೆ,ಕಾಸಿಂ ಬನತ್ತಪಲ್ಕೆ, ನಾರಾಯಣ ಗೌಡ ,ಅನ್ವೇಷ್ ಕಕ್ಯೆ,ಶಿವಪ್ಪ ಪೂಜಾರಿ ಜೇಡರಬೆಟ್ಟು, ಕೇಶವ ಅನಂದಮಜಲು ಮತ್ತಿತರರು ಉಪಸ್ಥಿತರಿದ್ದರು.