ಇತ್ತೀಚಿನ ಸುದ್ದಿ
ಬಣಕಲ್: ಕಾರು- ಸ್ಕೂಟರ್ ಡಿಕ್ಕಿ; ಸವಾರ ಗಂಭೀರ; ಆಸ್ಪತ್ರೆಗೆ ದಾಖಲು
25/04/2023, 19:00

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 73 ರ ಚಕ್ ಮಕ್ಕಿಯಲ್ಲಿ ಕಾರು ಮತ್ತು ಸ್ಕೂಟಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರನಿಗೆ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಧರ್ಮಸ್ಥಳದಿಂದ ಅಂಧ್ರ ಪ್ರದೇಶಕ್ಕೆ ಹೋಗುತ್ತಿದ್ದ ಕಾರು ಫಲ್ಗುಣಿಯಿಂದ ಚಕ್ ಮಕ್ಕಿ ಬರುತ್ತಿದ್ದ ಸ್ಕೂಟರ್ ಡಿಕ್ಕಿ ಹೊಡೆದಿತ್ತು.ಕಾರಿನ ಚಾಲಕನ ನಿಯಂತ್ರಣ ತಪ್ಪಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಬೊಮ್ಮಯ್ಯ ಸ್ಕೂಟರ್ ಸವಾರ ಫಲ್ಗುಣಿ ಮೂಲದವ ಎಂದು ತಿಳಿದು ಬಂದಿದೆ.