2:18 PM Thursday28 - November 2024
ಬ್ರೇಕಿಂಗ್ ನ್ಯೂಸ್
ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ…

ಇತ್ತೀಚಿನ ಸುದ್ದಿ

ಬಿಜೆಪಿ ಟಿಕೆಟ್ ಮಿಸ್: ಗಳಗಳನೆ ಅತ್ತ ಮಾಜಿ ಡಿಸಿಎಂ ಲಕ್ಷ್ಮಣ ಸವದಿ; ಮಂಜುನಾಥನ ಸನ್ನಧಿಗೆ ಆಣೆ, ಪ್ರಮಾಣಕ್ಕೆ ಆಹ್ವಾನ

12/04/2023, 10:50

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಬಿಜೆಪಿ ಸರಕಾರ ರಚನೆಯಲ್ಲಿ ಶಾಸಕ ಮಹೇಶ್ ಕುಮಠಳ್ಳಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರದಲ್ಲಿ ಅಥಣಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಣ್ಣಿರು ಹಾಕಿದ್ದಾರೆ. ಬರೇ ಕಣ್ಣೀರು ಮಾತ್ರವಲ್ಲ ಗಳಗಳನೆ ಅತ್ತು ಬಿಟ್ಟಿದ್ದಾರೆ. ನನ್ನನ್ನು ಮನೆಯಿಂದ ಹೊರಗೆ ದೂಡಬೇಡಿ ಅಂತ ಕೇಸರಿ ನಾಯಕರಲ್ಲಿ ಪರಿಪರಿಯಾಗಿ ವಿನಂತಿ ಮಾಡಿದ್ದಾರೆ. ಮಂಜುನಾಥನ ಸನ್ನಧಿಯಲ್ಲಿ ಅಣೆ, ಪ್ರಮಾಣಕ್ಕೆ ಬನ್ನಿ ಅಂತ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಆಹ್ವಾನ ನೀಡಿದ್ದಾರೆ.
ಲಕ್ಷ್ಮಣ ಸವದಿಗೆ ಟಿಕೆಟ್ ಇಲ್ಲ ಎಂದು ಅಪರೋಕ್ಷವಾಗಿ ಎಂದು ದೆಹಲಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಅಥಣಿಯಲ್ಲಿ ಲಕ್ಷ್ಮಣ್ ಸವದಿ ಕಣ್ಣಿರು ಹಾಕಿದ್ದಾರೆ.
ನನಗೆ ಟಿಕೆಟ್ ಇಲ್ಲಾ ಎಂದು ಸಿಎಂ ಹೇಳಿದ್ದಾರೆ. ೨೦೦೪ ರಂದು ನಾನು ಬಿಜೆಪಿ ಪಕ್ಷವನ್ನು ಸೇರಿದೆ. ಸುಮಾರು 20 ವರ್ಷಗಳಿಂದ ನಾನು ಪಕ್ಷವನ್ನು ಸಂಘಟನೆ ಮಾಡಿದ್ದೇನೆ. ನಾನು ಇವತ್ತು ಪಕ್ಷದ ವರಿಷ್ಠರಿಗೆ ಕೈ ಮುಗಿದು ಮನವಿ ಮಾಡುತ್ತೇನೆ ಮನೆಯಿಂದ ನನ್ನ ಹೊರಗೆ ದೂಡಬೇಡಿ. ನಾನು ನಿಷ್ಠಾವಂತ ಕಾರ್ಯಕರ್ತ. ನನಗೆ ಅನ್ಯಾಯ ಮಾಡಬೇಡಿ “ಯಡಿಯೂರಪ್ಪ, ಈಶ್ವರಪ್ಪ ಅವರು ನೀನೇ ಮುಂದಿನ ಸಿಎಂ ಎಂದು ಹೇಳಿದ್ದರು. ಯಡಿಯೂರಪ್ಪನವರ ನನ್ನ ಕರೆದು ನಿನಗೆ ನಾನು ತಂದೆ ಸ್ಥಾನದಲ್ಲಿ ಇದ್ದೇನೆ ಎಂದು ಹೇಳಿದ್ದರು. ನನಗೆ ಹೇಳಿದ ಮಾತು ನೀವು ಯಾರು ಈಡೇರಿಸಿಲ್ಲ, ಮಂಜುನಾಥನ ಸನ್ನಿಧಿಯಲ್ಲಿ ನೀವು ಬನ್ನಿ ಎನ್ನುವ ಮೂಲಕ ಲಕ್ಷ್ಮಣ ಸವದಿ ಸವಾಲು ಹಾಕಿದರು.
ಕುಮಾರಸ್ವಾಮಿ ಅವರಿಗೆ ವಚನ ಭ್ರಷ್ಟ ಎಂದು ಹೇಳುತ್ತಿರಿ ನೀವು. ಬನ್ನಿ ಮಂಜುನಾಥನ ಸನ್ನಿಧಿಗೆ, ನೀವು ನನ್ನಗೆ ಮಾತು ನೀಡಲ್ಲ ಎಂದರೆ ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ. ನನಗೆ ಟಿಕೆಟ್ ಇಲ್ಲ ಎಂದು ನನ್ನ ಗೆಳೆಯ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಭಲೇ ಬಸವರಾಜ್, ಒಳ್ಳೆಯ ಮಾತು ಹೇಳಿದ್ದೀರಿ ಎಂದು ಸಿಎಂ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮಾತು ಕೇಳಿ ನಾನು ಎಂಎಲ್ಸಿ ಆದೆ. ಆ ಚುನಾವಣೆಯನ್ನು ನನ್ನ ಹೆಸರು ಮೇಲೆ ಆರು ಜನ ಗುಂಡ್ಲೆ ಚಿನ್ನೆ ಹಾಕಿದರು. ಅವರು ಯಾರು ಎಂದು ಹೇಳುವುದಿಲ್ಲ. ನನ್ನಗೆ ಬೆಂಬಲ ನೀಡುವಂತೆ ಸವದಿ ಕೈಮುಗಿದು ಜನರಲ್ಲಿ ಮನವಿ ಮಾಡಿದರು. ನೀವು ಮನೆಯಲ್ಲಿ ಇರುವಂತೆ ಹೇಳಿದರೇ ನಾನು ಮನೆಯಲ್ಲಿ ಇರುತ್ತೇನೆ. ಒಂದು ವೇಳೆ ಚುನಾವಣೆ ಬನ್ನಿ ಎಂದರೆ ನಾನು ಚುನಾವಣೆ ಬರುತ್ತೇನೆ. ನಾನು ರಾಜಕೀಯ ಸಂಕಷ್ಟದಲ್ಲಿ ಇದ್ದೇನೆ ನನ್ನ ಕೈ ಬಿಡಬೇಡಿ ಎಂದು ಹೇಳಿದರು.
ಸಭೆಯಲ್ಲಿ ಲಕ್ಷ್ಮಣ ಸವದಿ ಗಳಗಳನೆ ಅತ್ತು ಕಣ್ಣಿರು ಹಾಕಿದರು. ಪಕ್ಷದ ಮೇಲೆ ನನಗೆ ಯಾವುದೇ ದ್ವೇಷ ಇಲ್ಲ. ನರೇಂದ್ರ ಮೋದಿ ಅತ್ಯುತ್ತಮ ನಾಯಕ. ಆದರೆ ಲಕ್ಷ್ಮಣ ಸವದಿ ಕೆಲಸಕ್ಕೆ ಬಾರದ ವ್ಯಕ್ತಿ ಎಂದು ತಿಳಿಸಿದ್ದಾರೆ. ಅವರ ಭಾವನೆಗಳಿಗೆ ನಾನು ತಲೆ ಭಾಗಿಸುತ್ತೇನೆ. ಬಿಜೆಪಿ ವರಿಷ್ಠರಿಗೆ ನಾನು ಕಿವಿ ಮಾತು ಹೇಳುತ್ತೇನೆ.

ಕೊನೆಯ ಬಾರಿಗೆ ಇನ್ನೂಂದು ಸಾರಿ ಪರಿಶೀಲನೆ ಮಾಡಿ. ಮನೆಯಿಂದ ನನ್ನ ಹೊರಗಡೆ ಹಾಕಬೇಡಿ. ರಾಜಕೀಯ ಗುರುಗಳಾದ ಅನಂತಕುಮಾರ್ ಹೆಗಡೆ ಅವರಲ್ಲಿ ಮಾದ್ಯಮ ಮುಖಾಂತರ ಕ್ಷಮೆ ಕೇಳುತ್ತೇನೆ ಎಂದು ಅಳುತ್ತಾ ಭಾಷಣ ಸವದಿ ಮುಗಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು