10:11 AM Thursday28 - November 2024
ಬ್ರೇಕಿಂಗ್ ನ್ಯೂಸ್
ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ…

ಇತ್ತೀಚಿನ ಸುದ್ದಿ

ವೈಜ್ಞಾನಿಕ ಮನೋಭಾವನೆ ಬೆಳೆಸಲು ಭಾರತದುದ್ದಕ್ಕೂ ಪ್ರವಾಸ: ವಿಚಾರವಾದಿ ಹರೀಂದರ್ ಲಾಲಿ

12/04/2023, 10:17

ಮಂಗಳೂರು(reporterkarnataka.com): ಪ್ರಸಕ್ತ ಕಾಲಘಟ್ಟದಲ್ಲಿ ನಮ್ಮನ್ನಾಳುವ ಸರಕಾರಗಳು ದೇಶದ ಸಂವಿಧಾನದ ಆಶಯಗಳಲ್ಲೊಂದಾದ ಆರ್ಟಿಕಲ್ 51A(h) ವೈಜ್ಞಾನಿಕ ಮನೋಭಾವನೆ ಬೆಳೆಸುವ ಕಾರ್ಯಕ್ರಮಗಳನ್ನು ಉತ್ತೇಜಿಸುವ ಬದಲಾಗಿ ಮೂಡನಂಬಿಕೆಗಳನ್ನೇ ಅನಾಚಾರಗಳನ್ನೇ ಮಾತ್ರವಲ್ಲ ಒಟ್ಟು ದೇಶದ ಸಂವಿಧಾನದ ಎಲ್ಲಾ ಆಶಯಗಳನ್ನೇ ಬುಡಮೇಲು ಮಾಡಲೊರಟಿದೆ. ಇಂತಹ ಸಂದಿಗ್ಧ ವಿದ್ಯಮಾನದಲ್ಲಿ ದೇಶದ ಜನರನ್ನು ಮೂಡನಂಬಿಕೆಯಿಂದ ಹೊರತರುವ, ವೈಜ್ಞಾನಿಕ ಚಿಂತನೆ ಬೆಳೆಸುವ ನಿಟ್ಟಿನಲ್ಲಿ ನಾವು ದೇಶದಾದ್ಯಂತ ಪ್ರವಾಸಕೈಗೊಂಡಿದ್ದೇವೆ ಎಂದು ಖ್ಯಾತ ವಿಚಾರವಾದಿ, ವಕೀಲರು ಆದ ಹರಿಂದರ್ ಲಾಲಿ ಹೇಳಿದರು.
ಮಂಗಳೂರಿಗೆ ತಲುಪಿದ ಸಂದರ್ಭದಲ್ಲಿ ಪ್ರೊ. ನರೇಂದ್ರನಾಯಕ್ ಆಯೋಜಿಸಿದ ಸಮಾನ ಮನಸ್ಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೈಜ್ಞಾನಿಕ ಚಿಂತನೆಗಳನ್ನು ಹರಡಲು ಭಾರತ, ನೇಪಾಳ, ಭೂತಾನ್ ದೇಶದಾದ್ಯಂತ ಪ್ರವಾಸ ಕೈಗೊಂಡಿರುವ ಖ್ಯಾತ ವಿಚಾರವಾದಿ ಹರಿಂದರ್ ಲಾಲಿ ಮತ್ತವರ ಬಳಗದ ಡಾ ರಾಜಾ ರಾಮ್, ಡಾ ರಾಜೇಶ್ ನಗರದ ವಿಕಾಸದಲ್ಲಿ ಸಮಾನ ಮನಸ್ಕರೊಂದಿಗೆ ನಡೆದ ಸಂವಾದದಲ್ಲಿ ಚರ್ಚಿಸಿದರು.
ವಿಚಾರವಾದಿ ಡಾ ರಾಜಾರಾಮ್ ಮಾತನಾಡುತ್ತಾ ದೇಶದ ಯಾವುದೇ ರಾಜ್ಯಗಳಲ್ಲಿ ಪ್ರತೀ ಬಾರಿಯು ನಡೆಯುವ ಚುನಾವಣೆಯಲ್ಲಿ ಆಯಾ ರಾಜ್ಯದ ಮಠಾಧೀಶರುಗಳು, ಸ್ವಾಮೀಜಿಗಳು ಧರ್ಮ ಮತ್ತು ಜಾತಿಯ ಆಧಾರದಲ್ಲಿ ಯಾರಿಗೆ ಮತ ನೀಡಬೇಕೆಂದು ತೀರ್ಮಾನಿಸುತ್ತಾರೆ. ಧರ್ಮದ ಆಧಾರದಲ್ಲಿ ಮತೀಯ ರಾಜಕಾರಣ ನಡೆಸುವ, ಮೂಡನಂಬಿಕೆಗಳನ್ನು ಪೋಷಿಸುವ, ಭ್ರಷ್ಟಾಚಾರ ನಡೆಸುವಂತಹ ರಾಜಕೀಯ ಪಕ್ಷಗಳನ್ನು , ರಾಜಕಾರಣಿಗಳನ್ನು ಆಯ್ಕೆಮಾಡಿಕೊಳ್ಳಲು ಪ್ರಚೋದಿಸುತ್ತಾರೆ. ದೇವರ ಹೆಸರಲ್ಲಿ ದುಡ್ಡಿನ ದಂಧೆ ನಡೆಸುವ ಇಂತಹ ಕಪಟ ಮಠಾಧೀಶರುಗಳ ವಿರುದ್ಧ ಹೋರಾಟ ನಡೆಸಬೇಕು. ಅವರ ಕಪಟತನವನ್ನು ಬಯಲುಗೊಳಿಸಬೇಕೆಂದು ಹೇಳಿದರು.


ಧರ್ಮದ ಹೆಸರಲ್ಲಿ ಅನಾಚಾರ, ಅತ್ಯಾಚಾರ ನಡೆಸಿ ಜೈಲು ಪಾಲಾದ ಪಂಜಾಬಿನ ಸಂತ ಎಂದು ಕರೆಸಿಕೊಂಡ ಗುರ್ಮೀತ್ ರಾಮ್ ರಹಿಮ್ ವಿರುದ್ಧ ಹೋರಾಟ ನಡೆಸಿದ ನನ್ನ ಮೇಲೆ ಹಲವು ಬಾರಿ ಕೊಲೆಯತ್ನ ನಡೆದಿದೆ. ಪ್ರಮುಖ ಸಾಕ್ಷಿದಾರನಾಗಿದ್ದ ನನ್ನನ್ನು ಮುಗಿಸಲು ನಡೆಸಿದ ಪ್ರಯತ್ನದಿಂದ ನಾನೇನು ಕಂಗೆಡಲಿಲ್ಲ. ಇಂತಹ ಬಲಾಡ್ಯನ್ನು ಬಗ್ಗು ಬಡಿಯಲು ಧೈರ್ಯದಿಂದ ಮುನ್ನಡೆಯಬೇಕೆಂದರು.
ಈ ವೇಳೆ ಮತ್ತೋರ್ವ ವಿಚಾರವಾದಿ ಡಾ ರಾಜೇಶ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ವಹಿಸಿದ್ದರು.
ಸಂವಾದ ಕಾರ್ಯಕ್ರಮದಲ್ಲಿ ಪ್ರೊ. ರಾಜೇಂದ್ರ ಉಡುಪ, ದಲಿತ ಸಂಘಟನೆಯ ಹಿರಿಯ ಮುಖಂಡರಾದ ಎಂ.ದೇವದಾಸ್, ಮಾನವತಾವಾದಿ ಸಂಘಟನೆಯ ಡಾ ಕೃಷ್ಣಪ್ಪ ಕೊಂಚಾಡಿ, ಬರಹಗಾರರಾದ ಟಿ.ಆರ್ ಭಟ್, ಹಿರಿಯ ಕಲಾವಿದ ಪ್ರಭಾಕರ್ ಕಾಪಿಕಾಡ್, ಮೈಕಲ್ ಡಿಸೋಜ, ಮಾಜಿ ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್, ಸಮುದಾಯದ ವಾಸುದೇವ ಉಚ್ಚಿಲ, ಎಐವೈಎಫ್ ಪುಷ್ಪರಾಜ್ ಬೋಳೂರು, ಕರುಣಾಕರ್, ಜಗತ್ಪಾಲ್, ಎಸ್ಎಫ್ಐನ ಜಿಲ್ಲಾ ಕಾರ್ಯದರ್ಶಿ ರೇವಂತ್ ಕದ್ರಿ, ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಮಯೂರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು