ಇತ್ತೀಚಿನ ಸುದ್ದಿ
ಥಾಯ್ಲೆಂಡ್‌ನಲ್ಲಿ ಸ್ಕ್ಯೂಬಾ ಡೈವಿಂಗ್: ಮಂಗಳೂರು ಯುವತಿ ದಾರುಣ ಸಾವು
11/04/2023, 23:42

ಮಂಗಳೂರು(reporterkarnataka.com): ಥಾಯ್ಲೆಂಡ್‌ನಲ್ಲಿ ಸ್ಕ್ಯೂಬಾ ಡೈವಿಂಗ್ ಮಾಡುವಾಗ ಮಂಗಳೂರಿನ ಯುವತಿಯೊಬ್ಬಳು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮೃತಪಟ್ಟ ಯುವತಿಯನ್ನು ನಗರದ ಗೋರಿಗುಡ್ಡೆ ನಿವಾಸಿ ಓಷಿನ್ ಪಿರೇರಾ (28) ಎಂದು ಗುರುತಿಸಲಾಗಿದೆ. ಗೋರಿಗುಡ್ಡೆ ‘ಹಿಲ್ ಸ್ಟೀಕ್’ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ವಾಸವಿದ್ದ ಓಷಿನ್ ಪಿರೇರ ಅವರು ಒಲಿವಿಯಾ ಪಿರೇರ- ದಿ. ಆಸ್ಕರ ಮಾರ್ಟಿನ್ ಪಿರೇರಾ ದಂಪತಿಯ ಪುತ್ರಿ.
ಓಷಿನ್ ಪಿರೇರಾ ಅವರು ರಜೆ ಕಳೆಯಲು ಎರಡು ದಿನಗಳ ಹಿಂದಷ್ಟೇ ಥಾಯ್ಲೆಂಡ್‌ಗೆ ತೆರಳಿದ್ದರು. ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಕೆಯ ತಾಯಿ ಒಲಿವಿಯಾ ಪಿರೇರಾ ಅವರು ಬಂಧುಗಳ ಜೊತೆ ಮಂಗಳವಾರ ಥಾಯ್ಲೆಂಡ್‌ಗೆ ಪ್ರಯಾಣ ಬೆಳೆಸಿದರು.
ನಗರದ ಸೇಂಟ್ ಆಗ್ನೆಸ್ ಕಾಲೇಜು ಬಳಿ ಇರುವ ‘ಮಂಗಳೂರು ಬೇಕಿಂಗ್ ಕಂಪನಿ’ ರೆಸ್ಟೋರಂಟ್ ಒಡತಿಯಾಗಿದ್ದ ಅವರು ಉದಯೋನ್ಮುಖ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.