ಇತ್ತೀಚಿನ ಸುದ್ದಿ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದೊಂದಿಗೆ ಸ್ಪಂದಿಸುವವರ ಜತೆ ಚುನಾವಣೋತ್ತರ ಹೊಂದಾಣಿಕೆ: ಜನಾರ್ಧನ ರೆಡ್ಡಿ
04/04/2023, 20:37
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಾವು ಸುಮಾರು 25 ಸೀಟುಗಳನ್ನು ಗೆಲ್ಲಬಹುದು, ನಾವಂತೂ ಸ್ವಂತ ಬಲದಲ್ಲಿ ರಾಜ್ಯದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ. ಯಾರೂ ನಮ್ಮ ಪಕ್ಷದ ಪ್ರಣಾಳಿಕೆಗಳಿಗೆ ಸ್ಪಂದಿಸುತ್ತಾರೋ ಅವರ ಜತೆ ನಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕೈ ಜೋಡಿಸುತ್ತದೆ ಎಂದು ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.
ಅವರು ಅಥಣಿ ಪಟ್ಟಣದ ಐಬಿ ರಸ್ತೆಗೆ ಹೊಂದಿಕೊಂಡು ಹಮ್ಮಿಕೊಂಡ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.
ಎಲ್ಲೆಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಬಹುದು ಅಲ್ಲಲ್ಲಿ ನಾನೇ ಖುದ್ದಾಗಿ ಹೋಗಿ ಪ್ರಚಾರ ಮಾಡುತ್ತಿದ್ದೇನೆ. ಇದೀಗ ಸುಮಾರು 30 ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಆರಂಭವಾಗಿದೆ. ನಾವು ಸುಮಾರು 25 ಕ್ಷೇತ್ರಗಳನ್ನು ಗೆಲ್ಲಬಹುದು. ಅನಂತರ ಬಹುಮತ ಬರದೇ ಇದ್ದಾಗ ನಮ್ಮ ವಿಚಾರಕ್ಕೆ ಸ್ಪಂದಿಸುವ ಯಾವ ಪಕ್ಷವಾದರೂ ಸರಿ, ಅದು ಕಾಂಗ್ರೇಸ್, ಬಿಜೆಪಿ ಯಾದರೂ ಸರಿ ನಾವು ಕೈಜೋಡಿಸುತ್ತೆವೆ ಎಂದರು.
ನನ್ನ ಮೇಲೆ ವಿಶ್ವಾಸವಿಟ್ಟು ದಲಿತರು, ಹಿಂದುಗಳು, ಮುಸ್ಲಿಮರು ಸೇರಿದಂತೆ ಅನೇಕರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಅವರೆಲ್ಲ ವಿಶ್ವಾಸ ಉಳಿಸಿಕೊಳ್ಳುವುದು ನನ್ನ ಕರ್ತವ್ಯ ಅಷ್ಟೆ, ಆದರೆ ನಮ್ಮದು ಕಾಂಗ್ರೇಸ್ಸಿನ ಬಿ ಟೀಮ್ ಅಥವಾ ಬಿಜೆಪಿಯ ಬೀ ಟೀಮ್ ಅಲ್ಲ, ಅದು ಮಾತನಾಡುವವರ ಕಲ್ಪನೆಗೆ ಬಿಟ್ಟಿದ್ದು. ಒಟ್ಟಿನಲ್ಲಿ ಜನಪರ ಆಡಳಿತ ನೀಡುವುದು ನನ್ನ ಗುರಿ ಮತ್ತು ಅಥಣಿಯಲ್ಲಿ ನಮ್ಮ ಅಭ್ಯರ್ಥಿ ಬಸವರಾಜ ಬೀಸನಕೊಪ್ಪ ಅವರ ಗೆಲುವು ಪಕ್ಕಾ ಎಂದರು.