5:08 PM Wednesday12 - November 2025
ಬ್ರೇಕಿಂಗ್ ನ್ಯೂಸ್
ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ… ಕೇಂದ್ರ ಸರ್ಕಾರದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ಲಕ್ಷಕ್ಕೂ ಅಧಿಕ ವಂಚನೆ: ಮಡಿಕೇರಿ ನಿವಾಸಿ… Sports | ಖೇಲೋ ಇಂಡಿಯಾ ಮಹಿಳಾ ಹಾಕಿ ಟೂರ್ನಿ: ಕುಶಾಲನಗರದ ದಿಶಾ ನಿಡ್ಯಮಲೆ… ಸದ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ ಕಬ್ಬು ಬೆಳೆಗಾರರ ಕಿವಿಗೆ ಹೂವು ಇಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಿಗೆ ಸಿಎಂ ಪತ್ರ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಯುವಕನ ಅನುಮಾನಾಸ್ಪದ ಸಾವು : ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆ

ಇತ್ತೀಚಿನ ಸುದ್ದಿ

ಬಸ್ ಸ್ಟಾಂಡ್ ಯಾಕೆ ಬೇಕು? ಏರ್ ಪೋರ್ಟ್ ಇದ್ರೆ ಸಾಕು!!: 30 ವರ್ಷಗಳಲ್ಲಿ ಒಂದು ಸರ್ವಿಸ್ ಬಸ್ ಸ್ಟಾಂಡ್ ಕಟ್ಟುವ ಯೋಗ್ಯತೆ ಇಲ್ಲದ ಸರಕಾರ, ಜನಪ್ರತಿನಿಧಿಗಳು!

02/04/2023, 13:06

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಆ 30 ವರ್ಷಗಳ ಅವಧಿಯಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಹಲವು ಸರಕಾರಗಳು ಬಂದು ಹೋಗಿವೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಲವು ಶಾಸಕರು ಬಂದು ಹೋಗಿದ್ದಾರೆ. ಸಾರಿಗೆ ಇಲಾಖೆ ಹಲವು ಸಚಿವರುಗಳನ್ನು ಕಂಡಿದೆ. ಆದರೆ ಆ ಬಸ್ ಸ್ಟಾಂಡ್ ಮಾತ್ರ 3 ದಶಕಗಳಿಂದ ಅಲ್ಲೇ ಪರ್ಮನೆಂಟ್ ಆಗಿ ಬೇರು ಬಿಟ್ಟಿದೆ.
ಇದು ಮಂಗಳೂರು ಸರ್ವಿಸ್ ಬಸ್ ನಿಲ್ದಾಣದ ವ್ಯಥೆಯ ಕಥೆ. 30 ವರ್ಷಗಳ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿಯ ಹಾಕಿ ಗ್ರೌಂಡ್ ನಲ್ಲಿ ನಿರ್ಮಿಸಿದ ಖಾಸಗಿ ಸರ್ವಿಸ್ ಬಸ್ ನಿಲ್ದಾಣದ ಕಣ್ಣೀರ ಕಥೆ. ಭರತ್ ಲಾಲ್ ಮೀನಾ ಅವರು ಹಂಪನಕಟ್ಟೆಯಲ್ಲಿದ್ದ ಗೂಡಿನ ತರಹದ ಬಸ್ ನಿಲ್ದಾಣವನ್ನು ತಾತ್ಕಾಲಿಕ ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಬಳಿಗೆ ಸ್ಥಳಾಂತರಿಸಿದ್ದರು.


ಅಲ್ ಇನ್ ವನ್: ಸ್ಟೇಟ್ ಬ್ಯಾಂಕ್ ಬಳಿಯ ಈ ಖಾಸಗಿ ಸರ್ವಿಸ್ ಬಸ್ ನಿಲ್ದಾಣ ಒಂದು ರೀತಿಯಲ್ಲಿ ಅಲ್ ಇನ್ ವನ್ ಬಸ್ ನಿಲ್ದಾಣ, ಖಾಸಗಿ ಸರ್ವಿಸ್ ಬಸ್ ಜತೆ ಕೆಎಸ್ಸಾರ್ಟಿಸಿ ಬಸ್ ಕೂಡ ಇಲ್ಲೇ ನಿಲ್ಲುತ್ತದೆ. ಇದೀಗ
ಏಪ್ರಿಲ್ 1ರಿಂದ ಸಿಟಿ ಬಸ್ ಗಳನ್ನು ಕೂಡ ಇಲ್ಲಿಗೆ ಶಿಫ್ಟ್ ಮಾಡಲಾಗಿದೆ. ಹಾಗೆ ಇದು ಬಸ್ ನಿಲ್ದಾಣವೂ ಹೌದು, ಗ್ಯಾರೇಜ್ ಕೂಡ ಹೌದು. ಇಲ್ಲೇ ಬಸ್ ರಿಪೇರಿ ಮಾಡಲಾಗುತ್ತದೆ. ಟಯರ್ ಬದಲಾಯಿಸಲಾಗುತ್ತದೆ. ಆಯಿಲ್ ಚೇಂಜ್ ಮಾಡಲಾಗುತ್ತದೆ. ಬೋಲ್ಟ್ ಟೈಟ್ ಮಾಡಲಾಗುತ್ತದೆ. ಡ್ರೈವರ್, ಕಂಡೆಕ್ಟರ್ ಗಳು ಬಾಟ್ಲಿ ನೀರು ಸುರುಗಿಕೊಂಡು ಇಲ್ಲೇ ಮುಖ ತೊಳೆಯುತ್ತಾರೆ. ಕತ್ತಲೆಯಾಗುತ್ತಿದ್ದಂತೆ ಮೈದಾನ ಕಡೆಯ ಗೋಡೆಗೆ ಮುಖ ಮಾಡಿ ದೇಹಬಾಧೆ ತೀರಿಸಿಕೊಳ್ಳುವವರೂ ಇದ್ದಾರೆ. ಟೀ ಸ್ಟಾಲ್, ತಿಂಡಿ ಸ್ಟಾಲ್ ಗಳಿವೆ. ಒಟ್ಟಿನಲ್ಲಿ ಗಿಜಿಗಿಜಿ ವಾತಾವರಣ.
ಪ್ರಯಾಣಿಕರ ಪರದಾಟ: ಈ ಬಸ್ ಸ್ಟಾಂಡ್ ನಲ್ಲಿ ಸಿಟಿ ಬಸ್ ಗಳು ಬರುವ ಮೊದಲೇ ಇಲ್ಲಿ ಪ್ರಯಾಣಿಕರು ಮೈಯೆಲ್ಲ ಕಣ್ಣಾಗಿಸಿ ಓಡಾಡ ಬೇಕು. ಯಾಕೆಂದರೆ ಸಣ್ಣ ಜಾಗದಲ್ಲಿ ಈ ಬಸ್ ನಿಲ್ದಾಣ ಇರುವುದರಿಂದ ಅಡ್ಡಾದಿಡ್ಡಿ ಬಸ್ ಗಳು ನಿಂತಿರುತ್ತವೆ. ಒಂದು ಕಡೆ ಬಸ್ ಸ್ಟಾಂಡ್ ಗೆ ಎಂಟ್ರಿ ಕೊಡುವ ಬಸ್ ಗಳ ಧಾವಂತ. ಇನ್ನೊಂದು ಕಡೆ ನಿರ್ಗಮಿಸುವ ಬಸ್ ಗಳ ಹಪಾಹಪಿ. ಇದರ ಮಧ್ಯೆ ಪ್ರಯಾಣಿಕರು ಪ್ರಾಣ ಉಳಿಸಿಕೊಳ್ಳಬೇಕು.

ಜನಪ್ರತಿನಿಧಿಗಳ ನಾಟಕ:
ಪ್ರತಿ 5 ವರ್ಷಕ್ಕೊಮ್ಮೆ ಹೊಸ ಖಾಸಗಿ ಸರ್ವಿಸ್ ಬಸ್ ನಿಲ್ದಾಣಕ್ಕೆ ಜಾಗ ಹುಡುಕುವ ನಾಟಕವನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡುತ್ತಲೇ ಬಂದಿದ್ದಾರೆ. ಒಮ್ಮೆ ಪಂಪ್ ವೆಲ್ ಬಳಿಯ ಜಾಗ ನೋಡುವುದು, ಇನ್ನೊಮ್ಮೆ ಕೂಳೂರು ಬಳಿ ಜಾಗ ನೋಡುವುದು. ಅಲ್ಲಿಗೆ ಎಲ್ಲವೂ ಮುಗಿಯಿತು. ಈ ನಾಟಕ ನೋಡಿ ನೋಡಿ ಕಡಲನಗರಿಯ ಜನರಿಗೆ ಅಭ್ಯಾಸವಾಗಿ ಹೋಗಿದೆ. ವಾಸ್ತವದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸರ್ವಿಸ್ ಬಸ್ ನಿಲ್ದಾಣಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಸ್ಮಾರ್ಟ್ ಸಿಟಿಯ ಹೆಚ್ಚಿನ ಹಣವನ್ನು ನಗರದ ರಸ್ತೆ, ಮಳೆ ನೀರು ತೋಡು, ಫುಟ್ ಪಾತ್ ನುಂಗಿ ಹಾಕಿವೆ. ಇಲ್ಲಿನ ಜನರು ಹೊಸ ಬಸ್ ನಿಲ್ದಾಣ ಕೇಳಬಾರದು ಎನ್ನುವ ರೀತಿಯಲ್ಲಿ ಹಾಕಿ ಗ್ರೌಂಡಿನ ಸರ್ವಿಸ್ ಬಸ್ ನಿಲ್ದಾಣವನ್ನು ಸ್ಮಾರ್ಟ್ ಸಿಟಿ ಹಣದಲ್ಲಿ ನವೀಕರಣ ಮಾಡಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು