ಇತ್ತೀಚಿನ ಸುದ್ದಿ
ಕೂಡ್ಲಿಗಿ ಹಾಗೂ ಕುಪ್ಪನಕೇರಿ: ಶ್ರೀಆಂಜನೇಯ ರಥೋತ್ಸವ; ಲಿಂಗದೀಕ್ಷೆ, ಲಿಂಗಧಾರಣೆ
01/04/2023, 10:06
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ರಾಮನವಮಿ ಪ್ರಯುಕ್ತ, ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಶ್ರೀಕೊತ್ತಲಾಂಜನೇಯ ರಥೋತ್ಸವ ಜರುಗಿತು.
ಕೂಡ್ಲಿಗಿ ಪಟ್ಟಣ ಸೇರಿದಂತೆ, ನೆರೆಹೊರೆ ಗ್ರಾಮಗಳಿಂದ ಆಗಮಿಸಿದ್ದರು. ಅಸಂಖ್ಯಾತ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು.
ಸಕಲ ವಾದ್ಯ ವೃಂದಗಳೊಂದಿಗೆ, ರಥೋತ್ಸವ ಬಹು ವಿಜೃಂಭಣೆಯಿಂದ ಜರುಗಿತು.
ಕಳೆದ ವರ್ಷದ ಶ್ರೀಕೊತ್ತಲಾಂಜನೇಯ ರಥೋತ್ಸವದಲ್ಲಿ, ದೇವರ ಪಟವನ್ನು ಪಡೆದಿದ್ದ ಬಂಗಾರು ಹನುಮಂತು ರವರು. ಪಟದ ಹರಾಜಿನ 1.80 ಲಕ್ಷ ರೂ. ಹಣವನ್ನು ದೇವಸ್ಥಾನಕ್ಕೆ ಅರ್ಪಿಸಿದರು. ಈ ಸಾರಿಯೂ ಕೂಡ ಹರಾಜಿನಲ್ಲಿ, ದೇವರ ಪಟವನ್ನು ಬಂಗಾರು ಹನುಮಂತು 2,61,101ರೂ. ಗಳಿಗೆ ಪಡೆದುಕೊಂಡರು. ಅವರು ಸತತವಾಗಿ ಒಂಬತ್ತನೇ ಬಾರಿ ರಥೋತ್ಸವದ,ಪಟದ ಹರಾಜು ಪಡೆಯುತ್ತಿರುವುದು ವಿಶೇಷವಾಗಿದೆ.
ಕುಪ್ಪಿನಕೇರಿಗ್ರಾಮದಲ್ಲಿ ರಥೋತ್ಸವ:ಕೂಡ್ಲಿಗಿ ತಾಲೂಕಿನ ಶ್ರಿಕ್ಷೇತ್ರ ಕುಪ್ಪಿಕೇರಿ ಗ್ರಾಮದಲ್ಲಿ,ಶ್ರೀಆಂಜನೇಯ ಸ್ವಾಮಿ ರಥೋತ್ಸವ ಬಹು ವಿಜೃಂಭಣೆಯಿಂದ ಜರುಗಿತು.
ಶ್ರೀ ಆಂಜನೇಯ ದೇವರಿಗೆ ಶಿವಸಂಭೂತರಾದ ಪಂಚಗಣಾದೀಶ್ವರರು, ಲಿಂಗಧಾರಣೆ ಮಾಡಿ ಲಿಂಗದೀಕ್ಷೆ ನೀಡಿದ್ದಾರೆಂಂಬ ಜಾನಪದೀಯ ಕಥೆಯಿದೆ. ಬೇಡಿದ ಕೊರಿಕೆಗಳ ಆಗು ಹೋಗುಗಳ ಫಲಾನು ಫಲ,ಶುಭ ಅಶುಭ,ಗಳನ್ನು ಸೂಚಿಸುವ ದೇವರ ಹೂ ಕೇಳೋ ಸಂಪ್ರದಾಯಕ್ಕೆ. ಕುಪ್ಪಿಕೇರಿ ಶ್ರೀಆಂಜನೇಯ ಹೆಸರುವಾಸಿಯಾಗಿದ್ದಾನೆ. ಈ ಭಾರಿಯ ಪಟ ಹರಾಜನ್ನು, ಸಂಡೂರು ತಾಲೂಕು ಕಲ್ಕಂಬ ಗ್ರಾಮದ ಷಣ್ಮುಖಪ್ಪನ ಮಗ ಹನುಮಂತಪ್ಪ ಎಂಬುವರು 1.61.101ರೂ ಗೆ ಪಡೆದಿದ್ದಾರೆ.ಕುಪ್ಪನಕೇರಿ ಗ್ರಾಮದ ಗ್ರಾಮಸ್ಥರು, ರಥೋತ್ಸವದಲ್ಲಿ ಕೂಡ್ಲಿಗಿ ಪಟ್ಟಣ ಸೇರಿದಂತೆ, ಕುಪ್ಪಿಕೇರಿಯ ನೆರೆ ಹೊರೆ ಗ್ರಾಮಗಳ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಸಕಲ ವಾಧ್ಯವೃಂಧಗಳೊಂದಿಗೆ, ರಥೋತ್ಸವ ಬಹು ವಿಜೃಂಭಣೆಯಿಂದ ಜರುಗಿತು.