ಇತ್ತೀಚಿನ ಸುದ್ದಿ
ಬಂಟ್ವಾಳದ ಮೊಡಂಕಾಪು ಕಾರ್ಮೆಲ್ ಕಾಲೇಜಿನಿಂದ ಸ್ವಚ್ಛತಾ ಅಭಿಯಾನ
27/03/2023, 14:38
ಬಂಟ್ವಾಳ(reporterkarnataka.com): ಮೊಡಂಕಾಪು ಕಾರ್ಮೆಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಸಿಓಡಿಪಿ ಮಂಗಳೂರು, ಸಿಇಐ ಹಾಗೂ ಸ್ವಸಹಾಯ ಸಂಘಗಳ ಜಂಟಿ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಮೊಡಂಕಾಪು ಪರಿಸರದಲ್ಲಿ ಶನಿವಾರ ಜರುಗಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಲತಾ ಫೆರ್ನಾಂಡಿಸ್ ಎ. ಸಿ.,ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು,ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಕೀರ್ತನ್, 25 ರಾಷ್ಟ್ರೀಯ ಯೋಜನಾ ಸ್ವಯಂಸೇವಕರು ಪಾಲ್ಗೊಂಡ್ಡಿದ್ದರು.