6:44 AM Tuesday30 - December 2025
ಬ್ರೇಕಿಂಗ್ ನ್ಯೂಸ್
ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:… ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್, ಹೋಂ ಸ್ಟೇ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಡಗಿನಲ್ಲಿ ಅರಣ್ಯ ರಕ್ಷಕರಿಂದಲೇ ಮರಗಳ ಲೂಟಿ: ಲೋಡರ್ ಬಂಧನ; ನಾಲ್ವರು ಪರಾರಿ ಖಾಸಗಿ ವಾಹನಕ್ಕೆ ನಾಮಫಲಕ | ಪೊಲೀಸಪ್ಪನಿಂದೇ ಕಾನೂನು ಉಲ್ಲಂಘನೆ: ದಂಡ ಯಾವತ್ತೇ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ: ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ

ಇತ್ತೀಚಿನ ಸುದ್ದಿ

ಬಂಗ್ರ ಕೂಳೂರು: ಚರಂಡಿ, ಫುಟ್ ಪಾತ್ ನಿರ್ಮಾಣಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಗುದ್ದಲಿ ಪೂಜೆ

18/03/2023, 17:16

ಮಂಗಳೂರು(reporterkarnataka.com): ಸುಮಾರು1.99 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಬಂಗ್ರಕೂಳೂರು 16ನೇ ವಾರ್ಡ್ ಹಾಗೂ ದೇರೆಬೈಲ್ ಉತ್ತರ ಕೋಡಿಕಲ್ ಮುಖ್ಯ ರಸ್ತೆಯಲ್ಲಿ ಚರಂಡಿ, ಫುಟ್‍ಪಾತ್ ನಿರ್ಮಾಣಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ. ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ 2 ವರ್ಷದಲ್ಲಿ ಕೇಂದ್ರ, ರಾಜ್ಯ ಸರಕಾರದ ಸಹಕಾರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ನೆರವಿನೊಂದಿಗೆ ಸುಮಾರು 2 ಸಾವಿರ ಕೋಟಿ ರೂ ಅನುದಾನವನ್ನು ಕ್ಷೇತ್ರದ ಮೂಲಸೌಕರ್ಯ ಆದ್ಯತೆ ನೀಡಿ ವಿನಿಯೋಗಿಸಲಾಗಿದೆ. ಬಹುತೇಕ ರಸ್ತೆಗಳು ಶಾಶ್ವತ ರೂಪ ಪಡೆದುಕೊಂಡಿದೆ. ನಗರ, ಹಳ್ಳಿಯ ಸಂಪರ್ಕವಾಗಿದೆ. ಗದ್ದೆ ಪುಣಿಗಳಲ್ಲಿ ಓಡಾಡುತ್ತಿದ್ದ ಕಡೆಗಳಲ್ಲಿ ಬೈಕು, ಕಾರು ಓಡಾಡುವ ರಸ್ತೆ ನಿರ್ಮಾಣವಾಗಿದೆ. ಜನರ ಸಹಕಾರದಲ್ಲಿ ಇದು ಸಾಧ್ಯವಾಗಿದೆ ಎಂದರು.

ಮನಪಾ ಸದಸ್ಯರುಗಳಾದ ಕಿರಣ್ ಕುಮಾರ್ ಕೋಡಿಕಲ್, ಮನೋಜ್ ಕುಮಾರ್, ಹಿರಿಯರಾದ ಗೋಪಾಲ್ ಕೋಟ್ಯಾನ್, ರಾಮದಾಸ್ ನಾಯಕ್, ಉದ್ಯಮಿ ದರ್ಶನ್ ಜೈನ್, ವಿದ್ಯಾಸಾಗರ್, ಲೋಕನಾಥ್ ಬಂಗೇರ, ಶರತ್ ಪಾಲ್ದಾಡಿ, ದಯಮಣಿ ಕೋಟ್ಯಾನ್, ಜಯಲಕ್ಷ್ಮಿ, ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು