10:14 AM Wednesday1 - April 2026
ಬ್ರೇಕಿಂಗ್ ನ್ಯೂಸ್
ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕೆಂಜಾರು ದೇಗುಲದ ಹುಂಡಿ ಕಳ್ಳತನ: ಅಂತಾರಾಜ್ಯ ಕಳ್ಳನ ಬಂಧನ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಲಿಲ್ಲ: ಸಿಎಂ… ಸಿದ್ದರಾಮಯ್ಯ ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು: ಶ್ರೀರಾಮುಲು ಆರೋಪ ಯತ್ನಾಳ್‌ ಬಂದರೆ ಸ್ವಾಗತ: ರಾಜ್ಯ ಬಿಜೆಪಿಯಲ್ಲಿ ಕುತೂಹಲ ಮೂಡಿಸಿದ ಮಾಜಿ ಸಿಎಂ ಯಡಿಯೂರಪ್ಪ… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ಬಾಗಲಕೋಟೆ ಉಪ ಚುನಾವಣೆ: ಆಲಮಟ್ಟಿ ಬಳಿ ರಾತೋರಾತ್ರಿ ಸಿಎಂ ಭೇಟಿಯಾದ ಮುಸ್ಲಿಂ​ ಮುಖಂಡರು;… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ರಂಗೇರಿದ ಉಪ ಚುನಾವಣಾ ಕಣ: ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ, ವಿಜಯೇಂದ್ರ; ಕೈ, ಕಮಲ… ಕೌಟುಂಬಿಕ ಕಲಹ: ಭದ್ರಾ ಬಲದಂಡೆ ನಾಲೆ ಬ್ರಿಡ್ಜ್ ನಿಂದ ಹಾರಿ ಸೂಪರ್ ವೈಸರ್… ಗ್ಯಾಸ್ ಸಿಲಿಂಡರ್ ಗೆ ರೆಗ್ಯುಲೇಟರಿ ಅಳವಡಿಸುವಾಗ ಏಕಾಏಕಿ ಸ್ಫೋಟ: ಮನೆ ಛಿದ್ರಛಿದ್ರ; 4…

ಇತ್ತೀಚಿನ ಸುದ್ದಿ

ದೆಹಲಿಯಲ್ಲಿ ಮಿಂಚಿದ ಕೂಡ್ಲಿಗಿ ಶ್ರೀಪೇಟೆ ಬಸವೇಶ್ವರ ಸಂಗೀತ ಸಾಂಸ್ಕೃತಿಕ ಕಲಾ ತಂಡ: ರಾಜಧಾನಿಯಲ್ಲಿ ಹರಿದ ಸಂಗೀತ ಸುಧೆ!

02/03/2023, 12:42

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಶ್ರೀಪೇಟೆ ಬಸವೇಶ್ವರ ಸಾಂಸ್ಕೃತಿಕ ಹಾಗೂ ಸಂಗೀತ ಕಲಾ ಶಾಲೆ ದೆಹಲಿಯಲ್ಲಿನ ಕರ್ನಾಟಕ ಸಂಘ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ ಸಂಗೀತ ಹಾಗೂ ಕಲಾ ಪ್ರತಿಭೆಯನ್ನು ಪ್ರಸ್ತುತಪಡಿಸಿದೆ.

ದೆಹಲಿಯ ಕರ್ನಾಟಕ ಸಂಘದ ಅಮೃತ ಮಹೋತ್ಸವದ, ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಕಲಾ ಸಂಘದ ಸದಸ್ಯರು
ಪಾಲ್ಗೊಂಡಿದ್ದಾರೆ. ಈ ಮೂಲಕ ಕೂಡ್ಲಿಗಿ ಯ ಹೆಸರನ್ನು ನವ ದೆಹಲಿಯಲ್ಲಿ ಪರಿಚಯಿಸಿದ್ದು ಕಾರ್ಯಕ್ರಮದಲ್ಲಿ ನೆರೆದವರ ಮನದಲ್ಲಿ ಮನೆ ಮಾಡಿದ್ದಾರೆ. ಪ್ರತಿಯಾಗಿ ಕಾರ್ಯಕ್ರಮದ ಆಯೋಜಕರಿಂದ, ಪ್ರಶಂಸನಾ ಅಭಿನಂದನೆ ಪತ್ರ ಹಾಗೂ ಮೆಡಲ್ ಗಳನ್ನು ಪಡೆದಿದ್ದಾರೆ.


ನವದೆಹಲಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ, ಕೂಡ್ಲಿಗಿ ಪಟ್ಟಣದ ಶ್ರೀಪೇಟೆಬಸವೇಸ್ವರ ಸಂಗೀತ ಶಾಲೆ ಸಾಂಸ್ಕ್ರತಿಕ ಕಲಾ ಟ್ರಸ್ಟ್‌ ಪದಾಧಿಕಾರಿಗಳಾದ, ಸಂಗೀತ ಹಾಗೂ ರಂಗಕಲಾವಿದರಾದ ಅಗಸಗಟ್ಟೆ ತಿಂದಪ್ಪ, ತಬಲಾ ವಾದಕರಾದ ಬಾಣದ ನರಸಿಂಹಪ್ಪ, ಡಿ.ವೆಂಕಟೇಶ, ಕುಪ್ಪನಕೇರಿ ಕೆ.ಶಂಕರಪ್ಪ, ರಂಗಕಲಾವಿದರಾದ ಸಾಸಲವಾಡ ಚನ್ನವೀರಸ್ವಾಮಿ, ವಿಭೂತಿ ವೀರಣ್ಣ ನವರು. ಭಾಗವಹಿಸಿದ್ದರು. ತಮ್ಮ ಕಲೆಯ ಮೂಲಕ ನವದೆಹಲಿಯಲ್ಲಿ, ಕೂಡ್ಲಿಗಿ ಯ ಕಲೆಯ ಸುಧೆಯನ್ನು ಹರಿಸಿದ ಕಲಾವಿದರನ್ನು ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಕಲಾವಿದರು ಹಾಗೂ ನಾರೀಕರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸಮಾಜ ಮುಖಂಡರು. ಜನಪ್ರತಿನಿಧಿಗಳು, ಕಲಾವಿದರ ಸಂಘಟನೆಗಳ ಪದಾಧಿಕಾರಿಗಳು, ತಾಲೂಕಿನ ವಿವಿಧೆಡೆಯ ಕಲಾ ತಂಡದವರು, ಪತ್ರಕರ್ತರು ಅಭಿನಂದಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು