8:15 AM Monday7 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಇತ್ತೀಚಿನ ಸುದ್ದಿ

ಸುರತ್ಕಲ್ ನಲ್ಲಿ 5 ಕೋಟಿ ವೆಚ್ಚದ ಟ್ರಾಫಿಕ್ ಐಲ್ಯಾಂಡ್, 2 ಕಡೆ ಫ್ರೀ ಟರ್ನ್: ಶಾಸಕ ಡಾ. ಭರತ್ ಶೆಟ್ಟಿ

27/02/2023, 22:59

ಸುರತ್ಕಲ್ (reporterkarnataka.com): 5 ಕೋಟಿ ರೂಪಾಯಿ ವೆಚ್ಚದಲ್ಲಿ ಟ್ರಾಫಿಕ್ ಐಲ್ಯಾಂಡ್ ಸಹಿತ ಫುಟ್‍ಪಾತ್ ನಿರ್ಮಿಸಲಾಗುತ್ತಿದ್ದು ಎರಡು ಕಡೆ ಫ್ರೀ ಟರ್ನ್
ಹಾಗೂ ಸರ್ವಿಸ್ ಏಕಮುಖ ಸಂಚಾರದ ಮೂಲಕ ಸುಗಮ ಸಂಚಾರಕ್ಕೆ ಒತ್ತು ನೀಡಲಾಗಿದೆ.

ಎಂಆರ್‍ ಪಿಎಲ್ – ಎಚ್‍ಪಿಸಿಎಲ್ ಸೇರಿದಂತೆ ಬೃಹತ್ ಕಂಪನಿಗಳು ಇರುವುದರಿಂದ ಸಾವಿರಾರು ಟ್ಯಾಂಕರ್ ,ಲಾರಿಗಳ ಓಡಾಟದಿಂದ ಸುರತ್ಕಲ್ ಮಾರ್ಗದಲ್ಲಿ ವಾಹನದ ಒತ್ತಡವನ್ನು ಹೆಚ್ಚಿಸಿದೆ . ಈ ನಿಟ್ಟಿನಲ್ಲಿ ಸುವ್ಯಸ್ಥಿತ ಯೋಜನೆ ರೂಪಿಸಲಾಗಿದೆ ಎಂದು ಶಾಸಕರ ಡಾ. ವೈ ಭರತ್ ಶೆಟ್ಟಿ ಹೇಳಿದ್ದಾರೆ.
ಅವರು ಸುರತ್ಕಲ್ ಜಂಕ್ಷನ್ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.
ರಿಕ್ಷಾ ಪಾರ್ಕ್ ನಿರ್ಮಾಣಕ್ಕೆ ಕಾಮಗಾರಿ ಮುಗಿದ ಬಳಿಕ ಆರ್ ಟಿ ಓ ಮುಖಾಂತರ ಪ್ರಮುಖ ಸ್ಥಳದಲ್ಲಿ ಮೂರು ಸ್ಥಳವನ್ನು ಗುರುತು ಮಾಡಲಾಗುವುದು. ರಿಕ್ಷಾ ಮಾಲಕರು,ಚಾಲಕರ ವಿನಂತಿಯ ಮೇರೆಗೆ ತಾತ್ಕಾಲಿಕವಾಗಿ ಇದೀಗ ಮೇಲ್ಸೇತುವೆ ಕೆಳಭಾಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಿಲ್ಲಿಸಲು ಅನುಮತಿ ನೀಡಲಾಗುವುದು. ಶಿಸ್ತುಬದ್ದವಾಗಿ ರಿಕ್ಷಾ ಚಾಲಕರು ಸಮಸ್ಯೆಯಾಗದಂತೆ ಸಹಕರಿಸಬೇಕು ಎಂದರು.
ಕೊಟ್ಟರ ಚೌಕಿ ಜಂಕ್ಷನ್ ನಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಟ್ರಾಫಿಕ್ ಜಾಮ್ ಆಗುತ್ತಿರುವದರ ಬಗ್ಗೆ ಗಮನಕ್ಕೆ ಬಂದಿದ್ದು, ಇಲ್ಲಿನ ಮೇಲ್ಸೇತುವೆಯಲ್ಲಿ ತಾತ್ಕಾಲಿಕವಾಗಿ ದ್ವಿಪಥ ರಸ್ತೆ ಮಾಡಿ ವಾಹನ ಓಡಾಟ ಕಾರ್ಯ ಸಾಧ್ಯವೇ ಎಂಬುದನ್ನು ಅವಲೋಕಿಸಿ ಸಂಚಾರಿ ವಿಭಾಗದ ಅಧಿಕಾರಿಗಳಿಗೆ ಮಹಾನಗರ ಪಾಲಿಕೆಯ ವತಿಯಿಂದ ಮನವಿ ಸಲ್ಲಿಸಲು ಸೂಚಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಓಡಾಟ ಹೆಚ್ಚಿರುವುದರಿಂದ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.


ಕುಳಾಯಿ ಜಂಕ್ಷನ್ ಪ್ರದೇಶದಲ್ಲಿಯೂ ಕೂಡ ವಿಸ್ತರಣೆ ಮಾಡಲಾಗಿದೆ. ಹೆದ್ದಾರಿಯಿಂದ ತಿರುವು ಪಡೆಯುವ ಸ್ಥಳ ಅಪಘಾತವಲಯವಾಗಿರುವುದನ್ನು ಮನಗಂಡ ಸುಗಮ ಸಂಚಾರಕ್ಕೆ ಆಂದಾಜು 3 ಕೋಟಿ ರೂ.ವೆಚ್ಚದಲ್ಲಿ ಕೆಲಸ ನಡೆಯುತ್ತಿದೆ ಎಂದರು.
ಮನಪಾ ಸದಸ್ಯರಾದ ವರುಣ್ ಚೌಟ, ನಯನ ಆರ್.ಕೋಟ್ಯಾನ್, ಸ್ಥಳೀಯ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಗುತ್ತಿಗೆದಾರ ಸುಧಾಕರ್ ಪೂಂಜ ಹಾಗೂ ಮನಪಾ ಎಂಜಿನಿಯರ್ ಕಾರ್ತಿಕ್ ಶಾಸಕರಿಗೆ ಅಭಿವೃದ್ಧಿ ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಸುರತ್ಕಲ್ ಪೊಲೀಸ್ ಸಿಐ ಮಹೇಶ್ ಕುಮಾರ್, ಟ್ರಾಫಿಕ್ ಸಿಐ ಸುರೇಶ್ ಕುಮಾರ್ ಸುಗಮ ಸಂಚಾರಕ್ಕೆ ಬೇಕಾದ ಸಲಹೆ ಸೂಚನೆ ನೀಡಿದರು.
ಬೋಂದೆಲ್ ನಲ್ಲಿ ನಿರ್ಮಾಣವಾಗುತ್ತಿರುವ ಸರ್ವಜ್ಞ ವೃತ್ತದ ಕುರಿತಾಗಿ ಮಾತನಾಡಿದ ಅವರು, ಕುಲಾಲ ಸಮುದಾಯವು ನನಗೆ ನೀಡಿದ ಮನವಿಯನ್ನ ಪರಿಗಣಿಸಿ, ವಿಮಾನ ನಿಲ್ದಾಣ ರಸ್ತೆಯ ಬೊಂದೆಲ್ ವೃತ್ತವನ್ನು ಸರ್ವಜ್ಞ ವೃತ್ತವೆಂದು ನಾಮಕರಣ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮಹಾನ್ ದಾರ್ಶನಿಕರ ಪ್ರತಿಮೆಯನ್ನ ಸ್ಥಾಪಿಸಿ , ಆದರ್ಶ ಬರಹಗಳನ್ನು ಇದರಲ್ಲಿ ಬರೆಯಲಾಗುವುದು ಎಂದರು.
ಕಾವೂರು ಕೆರೆ ಪೂರ್ಣಗೊಳ್ಳುತ್ತಿದ್ದು, ಮುಂದಿನ ಒಂದೆರಡು ವಾರಗಳಲ್ಲಿ ಉದ್ಘಾಟಿಸಲಾಗುವುದು. ಮಾದರಿ ಕೆರೆಯಾಗಿ ರೂಪುಗೊಂಡಿದ್ದು, ಬಗ್ಗುಂಡಿ ಕೆರೆಗೂ ಇದೇ ರೀತಿ ಕಾಯಕಲ್ಪ ಒದಗಿಸಲು ಯೋಜನೆಯಿದೆ ಎಂದು ಅವರು ನುಡಿದರು.
ಅಭಿವೃದ್ಧಿ ಕೆಲಸದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೆಲವೊಂದು ತೊಂದರೆಗಳು ಆಗುವುದು ಸಹಜ .ಜನತೆ ಸಹಕರಿಸಿದರೆ ಮುಂದಿನ ದಿನಗಳಲ್ಲಿ ಸುರಕ್ಷಿತ ಪ್ರಯಾಣಕ್ಕೆ ಸಹಕರಿಸಿದಂತಾಗುತ್ತದೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು