ಇತ್ತೀಚಿನ ಸುದ್ದಿ
ಅಂಬಾತನಯ ಮುದ್ರಾಡಿ, ಬಲಿಪ ನಾರಾಯಣ ಭಾಗವತ ಸಹಿತ ಅಗಲಿದ ಹಿರಿಯ ಸಾಧಕರಿಗೆ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ನುಡಿನಮನ
22/02/2023, 11:21
ಮಂಗಳೂರು (reporterKarnataka.com) ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಿರಿಯ ಭಾಗವತರಾದ ಬಲಿಪ ನಾರಾಯಣ ಭಾಗವತ, ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ವಿಜಯರಾಘವ ಪಡ್ವೆಟ್ನಾಯರು, ಸಿನಿಮಾ ನಿರ್ದೇಶಕ ಕೆ.ಎಸ್.ಭಗವಾನ್ ಹಾಗೂ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅವರಿಗೆ ನುಡಿನಮನ ಕಾರ್ಯಕ್ರಮ ನಂತೂರು ಪದವು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಮಂಗಳವಾರ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಗೌರವ ಕಾರ್ಯದರ್ಶಿ ವಿನಯ ಆಚಾರ್ಯ, ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಸಾಹಿತಿಗಳಾದ ರವಿ ಅಲೆಯೂರು, ಗಣೇಶ್ ಪ್ರಸಾದ ಪಾಂಡೇಲು, ಸುಬ್ರಾಯ ಭಟ್, ಸುರೇಶ ನೆಗಳಗುಳಿ, ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಗೌರವಾಧ್ಯಕ್ಷ ಕೆ.ಮಹಾಲಿಂಗ ಪಾಟಾಳಿ, ಭಾರತಿ ಪಿಯು ಶಾಲೆ ಪ್ರಿನ್ಸಿಪಾಲ್ ಗಂಗಾರತ್ನ, ಪದವಿ ಪ್ರಿನ್ಸಿಪಾಲ್ ಪ್ರೊ.ಜೀವನ್‌ದಾಸ್, ಅರುಣ ಕುಮಾರಿ, ಕಾಲೇಜ್ ಶಿಕ್ಷಕಿ ನಿಖಿತಾ, ದಯಾನಂದ ರಾವ್ ಕಾವೂರು ಮೊದಲಾದವರು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಅಗಲಿದ ಹಿರಿಯ ಸಾಧಕರ ಭಾವಚಿತ್ರಗಳಿಗೆ ಪುಷ್ಪನಮನವನ್ನು ಸಲ್ಲಿಸಲಾಯಿತು.