ಇತ್ತೀಚಿನ ಸುದ್ದಿ
ವಿಜಯ ಸಂಕಲ್ಪ ಟ್ರೋಫಿ: ಶಾಸಕ ಡಾ. ಭರತ್ ಶೆಟ್ಟಿ ಉಪಸ್ಥಿತಿ; 48 ವಾಲಿಬಾಲ್ ತಂಡಗಳು ಭಾಗಿ
22/02/2023, 09:22
ಸುರತ್ಕಲ್(reporterkarnataka.com):
ಶಾಸಕ ಡಾ. ವೈ ಭರತ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಕೇಸರಿ ಸಾಗರದ ವಿರಾಟ್ ಶಕ್ತಿ ಪ್ರದರ್ಶನವಾದಂತೆ ಕಂಡ ವಿಜಯ ಸಂಕಲ್ಪ ಟ್ರೋಫಿ ನಭೂತೋ ನಭವಿಷ್ಯತಿ ಎಂಬಂತೆ ಅತ್ಯಂತ ಯಶಸ್ವಿಯಾಗಿ ಜರುಗಿತು.
ಪಂದ್ಯಾಕೂಟವನ್ನು ಪಕ್ಷದ ಹಿರಿಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
ಮಹಾಶಕ್ತಿ ಕೇಂದ್ರದ ಮುಖಂಡರ ಸಮರ್ಥ ಮುಂದಾಳತ್ವದಲ್ಲಿ ಇಂಟರ್ ಶಕ್ತಿ ಕೇಂದ್ರ ಮಟ್ಟದ 48 ವಾಲಿಬಾಲ್ ತಂಡಗಳು ಬಿರುಸಿನ ಸ್ಪರ್ಧೆಯನ್ನು ನೀಡಿದವು.
ನಾರಳಪದವಿನ ಆಳ್ವಾಸ್ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ನಡೆದ ಪಂದ್ಯಾಟಗಳು ಭಾಜಪಾ ಕಾರ್ಯಕರ್ತರಲ್ಲಿ ಕ್ರೀಡಾಸ್ಫೂರ್ತಿಯನ್ನು ತುಂಬಿದವು. ಭಾರತೀಯ ಜನತಾ ಪಾರ್ಟಿಯ ಹಿರಿಯರು, ಬೂತ್ ಅದ್ಯಕ್ಷರು, ಕಾರ್ಯದರ್ಶಿ,ಶಕ್ತಿ ಕೇಂದ್ರ ಪ್ರಮುಖ್, ಸಹ ಪ್ರಮುಖ್, ಮಂಡಲ ಪದಾಧಿಕಾರಿಗಳು, ಜನಪ್ರತಿನಿಧಿ ಗಳನ್ನು ಗೌರವಿಸಲಾಯಿತು.
ಉತ್ತರ ಮಂಡಲ ಅಧ್ಯಕ್ಷರಾದ ತಿಲಕರಾಜ್ ಕೃಷ್ಣಾಪುರ, ಪ್ರಮುಖರಾದ ಕಸ್ತೂರಿ ಪಂಜ, ಪಕ್ಷದ ವಿವಿಧ ಮೋರ್ಚಾಗಳ ಮುಖಂಡರು, ಗಣ್ಯರು, ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.