2:25 AM Wednesday5 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ನಾಗಮಂಗಲ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆರೋಪ ಸತ್ಯಕ್ಕೆ ದೂರವಾದ ಮಾತು

09/07/2021, 07:57

ದೇವಲಾಪುರ ಜಗದೀಶ್ ನಾಗಮಂಗಲ ಮಂಡ್ಯ

info.reporterkarnataka@gmail.com

ನಾಗಮಂಗಲ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಸಂಘದ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸಂಘದ ಅಧ್ಯಕ್ಷ ತಿಮ್ಮಪ್ಪ ಹೇಳಿದರು.

ನಾಗಮಂಗಲ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ನಮ್ಮ ಸಂಘದ ವಿರುದ್ಧ ಕೆಲವರು ನ್ಯಾಯಬೆಲೆ ಅಂಗಡಿ ಗಳಿಗೆ ತೂಕದಲ್ಲಿ ವಂಚನೆ ಮಾಡುತ್ತಿದ್ದಾರೆ ಹಾಗೂ ಆಹಾರ ಪಡಿತರ ಆಹಾರ ಪಡಿತರ ವಿತರಣೆಯಲ್ಲಿ ಅನ್ಯಾಯವಾಗಿದೆ ಎಂದು ಹೇಳಿದ್ದು ಸರಿಯಲ್ಲ. ಸಂಘವು ಉನ್ನತ ಮಟ್ಟದಲ್ಲಿ ಪ್ರಗತಿಯ ದಾಪುಗಾಲು ಹಾಕುತ್ತಿದೆ ಎಂದವರು ತಿಳಿಸಿದರು.

ಸಂಘವು 1949 ರಲ್ಲಿ ಆರಂಭಗೊಂಡು ಅಂದಿನಿಂದ ಇಂದಿನವರೆಗೂ ಯಾವುದೇ ಲೋಪವಿಲ್ಲದೆ ಆಹಾರದ ವ್ಯವಸ್ಥೆಯನ್ನು ಮಾಡುತ್ತಿದೆ. ಕೆಲವರು ಸಂಘದ ಬಗ್ಗೆ ವಿತರಣೆಯನ್ನು ಬೇರೊಂದು ಸಂಸ್ಥೆಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲು ಒತ್ತಾಯಿಸಿರುವುದು  ಅವರ ಅನುಕೂಲಕ್ಕಾಗಿ ಹೊರತು ಬೇರೆ ಯಾವುದೇ ದೃಷ್ಟಿಯಿಂದ ಅಲ್ಲ . ಇದುವರೆಗೂ ನ್ಯಾಯಬೆಲೆ ಅಂಗಡಿಗಳಿಂದ ಯಾವುದೇ ದೂರು ಬಂದಿಲ್ಲ ಹಾಗೂ ತಾಲೂಕಿನಲ್ಲಿ ನ್ಯಾಯಬೆಲೆ ಅಂಗಡಿಗಳು ಅಮಾನತುಗೊಂಡ ತಾತ್ಕಾಲಿಕವಾಗಿ ನಿರ್ವಹಣೆ ಮಾಡಲು ಆಹಾರ ಇಲಾಖೆಯಿಂದ ವಿತರಣೆ ಮಾಡಲು ಅವಕಾಶ ಕೊಟ್ಟಿರುತ್ತಾರೆ.  ಈ ರೀತಿ ಸಂಘವು ಮುನ್ನಡೆಯುತ್ತಿದ್ದು ಇದರ ಬಗ್ಗೆ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬಾರದೆಂದು ಸಹಕಾರಿ ಮಹಾಮಂಡಳದ ನಿರ್ದೇಶಕರಾದ ರಾಜೇ ಗೌಡ ಹೇಳಿದರು.

ಸಂಘದ ನಿರ್ದೇಶಕರುಗಳಾದ ದಿನೇಶ್,  ಕೃಷ್ಣೇಗೌಡ ಹಾಲತಿಗಿರೀಶ್, ಗೋವಿಂದ , ರಾಚಯ್ಯ, ಚೇತನ್ ಚಿಕ್ಕಣ್ಣ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು