10:56 PM Tuesday3 - December 2024
ಬ್ರೇಕಿಂಗ್ ನ್ಯೂಸ್
ಕೇರಳದಲ್ಲಿ ಭೀಕರ ರಸ್ತೆ ಅಪಘಾತ: 5 ಮಂದಿ ವೈದ್ಯಕೀಯ ವಿದ್ಯಾರ್ಥಿಗಳ ದಾರುಣ ಸಾವು ಫೆಂಗಲ್ ಎಫೆಕ್ಟ್: ಬೆಂಗಳೂರಿನಲ್ಲಿ ಸಾಧಾರಣ ಮಳೆ; ಎಂದಿನಂತೆ ತೆರೆದುಕೊಂಡ ಶಾಲಾ- ಕಾಲೇಜು ಕೂಡ್ಲಿಗಿ: ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಇಬ್ಬರ ಬಂಧನ; ಸಾಮಗ್ರಿ ಜಪ್ತಿ ಮಲೆನಾಡಲ್ಲಿ ಫೆಂಗಲ್ ಅಬ್ಬರ: ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆ; ಕಾಫಿ ಬೆಳೆಗಾರರು ಕಂಗಾಲು ತುಮಕೂರು: ಭೀಕರ ರಸ್ತೆ ಅಪಘಾತ; 3 ಮಂದಿ ಮಹಿಳೆಯರ ದಾರುಣ ಸಾವು ಜೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರಗೆ ಮುಖ್ಯಮಂತ್ರಿ ಮೆಚ್ಚುಗೆ ಫೆಂಗಲ್ ಚಂಡಮಾರುತ: ದ.ಕ., ಉಡುಪಿ ಜಿಲ್ಲೆಯ ಶಾಲೆ ಹಾಗೂ ಪಿಯು ಕಾಲೇಜಿಗಳಿಗೆ ನಾಳೆ… ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ವೈಭವದ ಲಕ್ಷದೀಪೋತ್ಸವ ಸಂಪನ್ನ: ದಾಖಲೆ ಸಂಖ್ಯೆಯಲ್ಲಿ ನೆರೆದ… ಸಂಘ ಪರಿವಾರದ ಕೈಗೊಂಬೆಯಂತೆ ವರ್ತಿಸುವ ಪೊಲೀಸ್ ಕಮಿಷನರ್ ವರ್ಗಾಯಿಸಿ: ಪ್ರತಿಭಟನೆಯಲ್ಲಿ ಮುನೀರ್ ಕಾಟಿಪಳ್ಳ… ನಿಡುವಾಳೆ ಶ್ರೀ ರಾಮೇಶ್ವರ ಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ: ಬೆಳಗಿದ 3 ಸಾವಿರಕ್ಕೂ ಹೆಚ್ಚು…

ಇತ್ತೀಚಿನ ಸುದ್ದಿ

ಸ್ಥಿರ ಠೇವಣಿ ಮತ್ತು ಜೀವವಿಮ ಯೋಜನೆ: ಏನಿದರ ಭಿನ್ನತೆ? ಯಾವುದರಲ್ಲಿ ಏನೇನು ಪ್ರಯೋಜನ?

07/02/2023, 00:39

Info.reporterkarnataka@gmail.com

ನಾವು ಯಾವಾಗಲೂ ಸರಿಯಾದ ಮೂಲದಲ್ಲಿ , ಸರಿಯಾದ ಹೂಡಿಕೆಯಲ್ಲಿ ಹೂಡಿಕೆ ಮಾಡಲು ಹುಡುಕುತಿರುತ್ತೇವೆ. ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವುದು ವಾಡಿಕೆ. ಅದು ಸ್ಥಿರ ಠೇವಣಿಗಳು (ಫಿಕ್ಸೆಡ್ ಡೆಪಾಸಿಟ್) .
ಅನೇಕ ಬಾರಿ ನಾವು ಇದ ರ ಪರ್ಯಾಯ ವಾಗಿ ಇನ್ಶೂರೆನ್ಸ್ ನಲ್ಲಿ ಹಾಕುವ ಮೊತ್ತವನ್ನು ಹೂಡಿಕೆ ಎಂದೇ ಪರಿಗಣಿಸಲಾಗಿದೆ.
ಆದರೆ ಹೂಡಿಕೆ ಮತ್ತು ಇನ್ಶೂರೆನ್ಸ್ ಎರಡು ಬೇರೆ ಬೇರೆ ಎನ್ನುವುದು ಅರಿತು ಕೊಳ್ಳಬೇಕು .

ಹೂಡಿಕೆ ಮಾಡಲು ಮತ್ತು ದೊಡ್ಡ ಆದಾಯವನ್ನು ಗಳಿಸಲು ನಿಮಗೆ ಅನುಮತಿಸುವ ಹಲವಾರು ಹಣಕಾಸು ಮತ್ತು ವಿಮಾ ಪರಿಹಾರಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಜೀವ ವಿಮೆ ಒಂದು ವಿಮಾ ಯೋಜನೆಯಾಗಿದ್ದರೂ, ಅನೇಕರು ಅದನ್ನು ಹೂಡಿಕೆಯಾಗಿ ಬಳಸಿಕೊಳ್ಳುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಸ್ಥಿರ ಠೇವಣಿಗಳು (FD) ಕೇವಲ ಹೂಡಿಕೆಯ ಉತ್ಪನ್ನವಾಗಿದ್ದು ಅದು ನಿಮಗೆ ವ್ಯಾಪಕ ಶ್ರೇಣಿಯ (time period) ಅವಧಿಗಳಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ.
ಇಂದು ಫಿಕ್ಸೆಡ್ ಡೆಪಾಸಿಟ್ ಮತ್ತು ಇನ್ಸುರೆನ್ಸಿನ ಅಂತರವನ್ನು ತಿಳಿದು ಕೊಳ್ಳೋಣ

ಸ್ಥಿರ ಠೇವಣಿ Fixed Deposits:
೧. ಸ್ಥಿರ ಠೇವಣಿಗಳು, ಬ್ಯಾಂಕುಗಳು, ಅಂಚೆ ಕಛೇರಿಗಳು ಮತ್ತು NBFC ಗಳಲ್ಲಿ ಲಭ್ಯವಿದೆ ನಿರ್ದಿಷ್ಟ ಅವಧಿಗೆ ನೀವು ನಿಗದಿತ ಮೊತ್ತದ ಹಣವನ್ನು ಹೂಡಿಕೆ ಮಾಡಬಹುದು. ನೀವು ನಿಗದಿಸಿದ ಸ್ಥಿರ ಠೇವಣಿ ಬಡ್ಡಿ ದರವನ್ನು ಗಳಿಸುವಿರಿ. ಮುಕ್ತಾಯದ ನಂತರ, ನೀವು ಗಳಿಸಿದ ಬಡ್ಡಿಯೊಂದಿಗೆ ಅಸಲು ಮೊತ್ತವನ್ನು ಸ್ವೀಕರಿಸುತ್ತೀರಿ.

೨. ಸ್ಥಿರ ಠೇವಣಿಗಳನ್ನು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಹೂಡಿಕೆ ಮಾಡಬಹುದು.ಅದರ ಅವಧಿ ಏಳು ದಿನಗಳಿಂದ ಹತ್ತು ವರ್ಷಗಳವರೆಗೆ ಇರಬಹುದು.

೩. ಸ್ಥಿರ ಠೇವಣಿಯ ಕನಿಷ್ಠ ಆರಂಭಿಕ ಹೂಡಿಕೆ ರೂ. 1000 ಗಳಾಗಿರುತ್ತದೆ. FD ಸ್ಥಿರ ಠೇವಣಿ ಹೂಡಿಕೆಯಲ್ಲಿ ಯಾವುದೇ ಗರಿಷ್ಟ ಮಿತಿ ಇರುವುದಿಲ್ಲ. ನಿಮ್ಮ ಹೂಡಿಕೆಯ ಮೊತ್ತವನ್ನು ಆಧರಿಸಿ, ಬ್ಯಾಂಕ್ ತ್ರೈಮಾಸಿಕ ಬಡ್ಡಿಯನ್ನು ಅಂದಾಜು ಮಾಡುತ್ತದೆ.

೪. ಸ್ಥಿರ ಠೇವಣಿ ಖಾತೆಯನ್ನು ತೆರೆದಾಗ , ಖಚಿತವಾದ ಆದಾಯವನ್ನು ನಿಮ್ಮ ಅವಧಿಗೆ ಅನುಸಾರವಾಗಿ ಆಯ್ಕೆ ಮಾಡಲಾಗುತ್ತದೆ.
ಇದು ಎಫ್‌ಡಿ (FD ) ಜೀವ ವಿಮೆ ಗಿಂತ ಇರುವ ಪ್ರಮುಖ ಪ್ರಯೋಜನವಾಗಿದೆ

೫.ನಿಶ್ಚಿತ ಠೇವಣಿ ಯೋಜನೆಗಳಲ್ಲಿ ಭಾಗಶಃ ಹಿಂಪಡೆಯುವಿಕೆ ಯ ಅವಕಾಶವಿರುತ್ತದೆ. ಆದರೆ FD ಯನ್ನು ಅವಧಿ ಗೆ ಮುನ್ನವೇ ಮುಕ್ತಾಯ ಗೊಳಿಸಿದರೆ ಬಡ್ಡಿದರದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ , ಬ್ಯಾಂಕುಗಳು ಮುಕ್ತಾಯದ ಅವಧಿಗೆ ಮುನ್ನವೇ ಹಿಂಪಡಿಕೆಯಾದರೆ ಶುಲ್ಕವನ್ನು ವಿಧಿಸುವ ಸಂಭವವಿರುತ್ತದೆ.

ಜೀವ ವಿಮೆ:
೧. ಜೀವ ವಿಮಾ ಯೋಜನೆ ಎಂದು ಕರೆಯಲ್ಪಡುವ ವಿಮಾ ಉತ್ಪನ್ನವು ಪಾಲಿಸಿದಾರರ ಅಕಾಲಿಕ ಮರಣದ ಸಂದರ್ಭದಲ್ಲಿ ವಿಮಾದಾರರ ಕುಟುಂಬಕ್ಕೆ ಆರ್ಥಿಕ ರಕ್ಷಣೆ ನೀಡುತ್ತದೆ.

೨. ಲೈಫ್ ಇನ್ಶೂರೆನ್ಸ್ ಯೋಜನೆಗಳು, 99 ವರ್ಷ ವಯಸ್ಸಿನವರೆಗೆ – ಅಂದರೆ ದೀರ್ಘಾವಧಿಯವರೆಗೆ ವಿಮೆ ಮತ್ತು ಸ್ಥಿರ ದರವನ್ನು ಒದಗಿಸುತ್ತದೆ.

೩. ಜೀವ ವಿಮಾ ಪಾಲಿಸಿಯ ವೆಚ್ಚವನ್ನು ಪಾಲಿಸಿಯ ಪ್ರಕಾರ ಮತ್ತು ವಿಮೆದಾರರ ವಯಸ್ಸು, ಪಾಲಿಸಿ ಮೌಲ್ಯ ಮತ್ತು ಒಟ್ಟಾರೆ ಆರೋಗ್ಯ ಸೇರಿದಂತೆ ಇತರ ಅಂಶಗಳಿಂದ ನಿರ್ಧರಿಸಲಾಗುತ್ತದೆ.

೪. ಮಾಸಿಕ ಆದಾಯ ಯೋಜನೆಯು , ನಿಮ್ಮ ಮಾಸಿಕ ವೆಚ್ಚಗಳನ್ನು ಸರಿದೂಗಿಸಲು ಮತ್ತು ನಿಮ್ಮ ತಕ್ಷಣದ ಹಣಕಾಸಿನ ಅವಶ್ಯಕತೆಗಳನ್ನು ಉದ್ದೇಶಿಸಲು , ಖಾತರಿಯ ಮತ್ತು ಸ್ಥಿರವಾದ ಆದಾಯವನ್ನು ಒದಗಿಸಿ ನಿಮಗೆ ಸಹಾಯ ಮಾಡುವುದು ಜೀವ ವಿಮಾ ಪಾಲಿಸಿಯಾಗಿದೆ.

೫. ಪಾಲಿಸಿಯ ಮೂರು ವರ್ಷಗಳ ಲಾಕ್-ಇನ್ ಅವಧಿಯ ನಂತರ, ಜೀವ ವಿಮಾ ಒಪ್ಪಂದಗಳ ಅಡಿಯಲ್ಲಿ ಹಿಂಪಡಿಯಲು ಅವಕಾಶವಿರುತ್ತದೆ.
೬. ಹಳೆಯ ತೆರಿಗೆ ಪದ್ಧತಿಯ (ಪ್ರಸ್ತುತ ಎರಡು ಪದ್ಧತಿಗಳಿವೆ), ಸೆಕ್ಷನ್ 80 C ಯ ಪ್ರಕಾರ, ಜೀವ ವಿಮಾ ಕಂತುಗಳಿಗೆ ತೆರಿಗೆ ಕಡಿತವನ್ನು ಅನುಮತಿಸುತ್ತದೆ. ಹೆಚ್ಚುವರಿಯಾಗಿ, ಸೆಕ್ಷನ್ 10 (10D) ಅಡಿಯಲ್ಲಿ ತೆರಿಗೆ ವಿನಾಯಿತಿಗಳು ಸಾಧ್ಯ, ಇದರಲ್ಲಿ ಜೀವ ವಿಮಾ ಪಾಲಿಸಿಯ ಮೆಚ್ಯೂರಿಟಿ ಮೊತ್ತವು ತೆರಿಗೆಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆಯಬಹುದು . ಆದರೆ , ವಿಮಾ ಮೊತ್ತದ 10% ಕ್ಕಿಂತ ಹೆಚ್ಚು ಪ್ರೀಮಿಯಂ ಮೊತ್ತವು ಆಗಿರಬಾರದು . ಆದಾಗ್ಯೂ, ಪ್ರೀಮಿಯಂ ವಿಮಾ ಮೊತ್ತದ 10% ಕ್ಕಿಂತ ಹೆಚ್ಚಿದ್ದರೆ, ಅವಧಿಯ ಮುಕ್ತಾಯದಲ್ಲಿ ಪಾಲಿಸಿದಾರರು ಪಡೆಯುವ ಮೊತ್ತವು ಪೂರ್ಣ ತೆರಿಗೆಗೆ ಒಳಪಟ್ಟಿರುತ್ತದೆ.

FD VS Life Insurance:
ಎಫ್‌ಡಿ ಯು ನೀವು ಭವಿಷ್ಯಕ್ಕಾಗಿ ಉಳಿಸಲು ಸಹಾಯ ಮಾಡಲು ಖರೀದಿಸಿದರೆ, ವಿಮೆಯು ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಕುಟುಂಬವನ್ನು ರಕ್ಷಿಸಲು ನೀವು ಖರೀದಿಸುವುದು.

ಜೀವ ವಿಮಾ ಯೋಜನೆಗಳು ದೀರ್ಘಾವಧಿಯ ಹೂಡಿಕೆಗಳಿಗೆ ಉದ್ದೇಶಿಸಿ್ ದರೆ, ಅಲ್ಪಾವಧಿಯ ಮತ್ತು ಮಧ್ಯಮ ಅವಧಿಯ ಹೂಡಿಕೆಗಳಿಗೆ ಸ್ಥಿರ ಠೇವಣಿಗಳು ಅತ್ಯುತ್ತಮ ಆಯ್ಕೆಯಾಗಿದೆ. ಸ್ಥಿರ ಠೇವಣಿ ಹೂಡಿಕೆಗಳನ್ನು ಏಳು ದಿನಗಳವರೆಗೆ ಮಾಡಬಹುದು, ಇದರ ವ್ಯತಿರಿಕ್ತವಾಗಿ ಜೀವ ವಿಮಾ ಯೋಜನೆಗಳಲ್ಲಿ, ಕನಿಷ್ಠ 10 ವರ್ಷಗಳ ಹೂಡಿಕೆಯ ಅಗತ್ಯವಿರುತ್ತದೆ.

ನೀವು ಸ್ಥಿರ ಠೇವಣಿ ಖಾತೆಯನ್ನು ತೆರೆದಾಗ, ಅದು ಹೂಡಿಕೆಯ ಮೇಲೆ ಸ್ಥಿರ ಆದಾಯವನ್ನು ನೀಡುತ್ತದೆ ಎಂದು ನಿಮಗೆ ತಿಳಿಸಲಾಗುತ್ತದೆ. ಆದರೆ ಯುನಿಟ್-ಲಿಂಕ್ಡ್ ಲೈಫ್ ಇನ್ಶುರೆನ್ಸ್ ಯೋಜನೆಗಳಲ್ಲಿನ ಹೂಡಿಕೆಗಳೊಂದಿಗೆ ಸಂಬಂಧಿಸಿದ ಮಾರುಕಟ್ಟೆ ಏರಿಳಿತದ ಅಪಾಯವಿದೆ.

ಜೀವ ವಿಮಾ ಪಾಲಿಸಿಗಳು ಮತ್ತು ಸ್ಥಿರ ಠೇವಣಿಗಳನ್ನು ಹಿಂಪಡೆಯಬಹುದು. ಯುಲಿಪ್ ಯೋಜನೆಗಳು ಮತ್ತು ಪ್ರಮಾಣಿತ standard ಜೀವ ವಿಮೆಗಳು ಮೂರು ಮತ್ತು ಐದು ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿರುತ್ತವೆ, ಸ್ಥಿರ ಠೇವಣಿಗಳನ್ನು, ಸಂಬಂಧಿತ ಬ್ಯಾಂಕ್‌ಗೆ ತಿಳಿಸುವ ಮೂಲಕ ಯಾವುದೇ ಹಂತದಲ್ಲಿ ಹಿಂಪಡೆಯಬಹುದು.

ಬ್ಯಾಂಕ್ ಸ್ಥಿರ ಠೇವಣಿಗಳಿಗೆ ಕನಿಷ್ಠ ರೂ. 1,000. ಆದರೆ , ಜೀವ ವಿಮೆಯ ಕನಿಷ್ಠ ಪ್ರೀಮಿಯಂ – ವ್ಯಕ್ತಿಯ ವಯಸ್ಸು, ಲಿಂಗ, ಪಾಲಿಸಿ ಅವಧಿ ಮತ್ತು ಪ್ರೀಮಿಯಂ ಪಾವತಿಯ ಅವಶ್ಯಕತೆಗಳನ್ನು ಅವಲಂಬಿತವಾಗಿರುತ್ತದೆ

ತೀರ್ಮಾನ :
ಸ್ಥಿರ ಠೇವಣಿ ಮತ್ತು ಜೀವ ವಿಮೆ ಯ ಆಯ್ದುಕೊಳ್ಳುವಾಗ ಮೇಲಿನ ಅಂಶಗಳನ್ನು ನೆನಪಿನಲ್ಲಿಡಿ.
ನಿಶ್ಚಿತ ಠೇವಣಿ ಅಥವಾ ಜೀವ ವಿಮೆ ನಿಮಗೆ ಉತ್ತಮವೇ ಎಂಬುದನ್ನು ನಿಮ್ಮ ಅಗತ್ಯತೆಗಳು ನಿರ್ಧರಿಸುತ್ತವೆ.

✍️ಕುಸುಮ ಪ್ರಸಾದ್ ವಿಶಾಖಪಟ್ಟಣ,ಆಂಧ್ರಪ್ರದೇಶ

ಇತ್ತೀಚಿನ ಸುದ್ದಿ

ಜಾಹೀರಾತು