11:26 AM Tuesday8 - July 2025
ಬ್ರೇಕಿಂಗ್ ನ್ಯೂಸ್
ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಕದ್ರಿ ಶ್ರೀ ಕಾಲಭೈರವ ದೇವಸ್ಥಾನ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಸಂಪನ್ನ: ವಿವಿಧ ವರ್ಣದ ಶಿವಲಿಂಗ ಪ್ರತಿಷ್ಢಾಪನೆ

06/02/2023, 23:00

ಮಂಗಳೂರು(reporterkarnataka.com): ರಾಜರಾಜೇಶ್ವರ ತಪೋನಿಧಿ ಶ್ರೀ 1008_ ಶ್ರೀ ರಾಜಯೋಗಿ ನಿರ್ಮಲನಾಥಜೀ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇದವಿದ್ವಾನ್ ದೇರೆಬೈಲು ವಿಠಲ್‌ದಾಸ್ ತಂತ್ರಿಗಳ ನೇತೃತ್ವದಲ್ಲಿ ಕದಿರೆಯ ಪಟ್ಟದ ಸಿದ್ಧ ಪೀಠದೊಡೆಯ ಕದ್ರಿ ಸುವರ್ಣ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ಶ್ರೀ ಕಾಲಭೈರವ ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ನಾಥ ಪಂಥದ ಸಂಪ್ರದಾಯದಂತೆ ವೈಧಿಕ ವಿಧಿ ವಿಧಾನಗಳೊಂದಿಗೆ ಇಂದು ವಿದ್ಯುಕ್ತವಾಗಿ ನೆರವೇರಿತು.

ಇದೇ ವೇಳೆ ಶ್ರೀಕಾಲ ಭೈರವ ದೇವರಿಗೆ ರೋಟ್ ಪೂಜೆ, ಪ್ರಸನ್ನ ಪೂಜೆ ನಡೆಯಿತು. ಮಧ್ಯ ಪ್ರದೇಶ, ರಾಜಸ್ಥಾನಗಳಿಂದ ತರಿಸಲಾದ ಅಮೂಲ್ಯ ಶಿಲೆಗಳಲ್ಲಿ ರೂಪಿಸಲಾದ ವಿವಿಧ ವರ್ಣದ ಶಿವಲಿಂಗಗಳ ಪ್ರತಿಷ್ಠಾಪನೆಯೂ ಇದೇ ಸಂದರ್ಭ ನಡೆಯಿತು.

ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಗುಜರಾತ್, ಕರ್ನಾಟಕ ಸೇರಿದಂತೆ ವಿವಿದೆಡೆಗಳಿಂದ ಆಗಮಿಸಿದ ಸಾಧು ಸಂತರು ಕಾಲಭೈರವ ಭಕ್ತರು ಸಹಿತ ಸ್ಥಳೀಯರು, ಜೋಗಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರಾಜಸ್ಥಾನದ ಭಕ್ತರು ಢೋಲ್ ತಾಲಿ ನೃತ್ಯ ಮಾಡಿ ಸಂಭ್ರಮಿಸಿದರು. ಕರ್ನಾಟಕದ ಮಾರ್ವಾಡಿಗಳು ಶ್ವೇತಾಂಬರ ಜೈನರಾದರೂ ಅವರು ಭೈರವನ ಆರಾಧಕರು. ರಾಜಸ್ಥಾನದಲ್ಲಿರುವ ಭೈರೂನಾಥ ಇವರ ಮನೆದೈವ. ಕಾಲಭೈರವ ಬ್ರಹ್ಮಕಲಶೋತ್ಸವದಲ್ಲಿ ಅವರು ಸಂಭ್ರಮದಿಂದ ಪಾಲ್ಗೊಂಡು ನೃತ್ಯ ಮಾಡುತ್ತಿದ್ದುದಕ್ಕೆ ಇದು ಒಂದು ಕಾರಣ.
ಕದ್ರಿ ಮಠವು ಹಿಂದೆ ಮೋಹನನಾಥರ ಕಾಲದಲ್ಲಿ ಒಮ್ಮೆ ಜೀರ್ಣೋದ್ಧಾರಗೊಂಡಿತ್ತು. ಈಗ ಕಾಲಭೈರವ ದೇವಸ್ಥಾನ ಜೀರ್ಣೋದ್ಧಾರಗೊಂಡು ಹೊಸ ರೂಪ ಪಡೆದಿದೆ. ನಾಯಿಯೊಂದಿಗೆ ಭೈರವನಿರುವ ವಿಗ್ರಹವನ್ನು ಪ್ರತಿಷ್ಠೆಗಾಗಿ ಮಧ್ಯ ಪ್ರದೇಶದಲ್ಲಿ ರೂಪಿಸಿ ತರಿಸಲಾಗಿದೆ.

ಕದ್ರಿ ಮಠದ ಅಧಿಪತಿಯಾಗಿದ್ದ ಭವಾನಿ ನಾಥರು ಪ್ರಸಿದ್ದಿ ರಸ ವೈದ್ಯರಾಗಿದ್ದರು ಮತ್ತು ಅವರು ತಾಮ್ರದ ಕಾಸನ್ನು ಚಿನ್ನವಾಗಿಸುತ್ತಿದ್ದರೆಂಬ ಪ್ರತೀತಿ ಇದೆ. ಪ್ರಸ್ತುತ ಶ್ರೀ ರಾಜಯೋಗಿ ನಿರ್ಮಲ್ ನಾಥ ಜೀ ಮಹಾರಾಜ್ ಅವರು ಕದ್ರಿ ಮಠದ ಪೀಠಾಧಿಪತಿಯಾಗಿದ್ದಾರೆ.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ ಜೋಗಿ, ಪ್ರಧಾನ ಕಾರ್ಯದರ್ಶಿ ಸತೀಶ್ ಜೋಗಿ ಮಾಲೆಮಾರ್, ಪ್ರಧಾನ ಸಲಹೆಗಾರರಾದ ಹರಿನಾಥ್ ಜೋಗಿ, ಕಿರಣ್ ಕುಮಾರ್ ಜೋಗಿ, ಪ್ರಧಾನ ಆರ್ಚಕ ಉಮೇಶ್‌ನಾಥ್, ಡಾ. ಪಿ. ಕೇಶವನಾಥ್, ಗಂಗಾಧರ್ ಬಿ., ಶಿವರಾಮ ಜೋಗಿ ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು