ಇತ್ತೀಚಿನ ಸುದ್ದಿ
ಮಂಗಳೂರು: ಜುವೆಲ್ಲರಿ ಸಿಬ್ಬಂದಿಗೆ ಚಾಕುವಿನಿಂದ ಇರಿತ; ಆಸ್ಪತ್ರೆಗೆ ದಾಖಲು
03/02/2023, 18:00

ಮಂಗಳೂರು(reporterkarnataka.com): ನಗರದ ಹಂಪನಕಟ್ಟೆ ಮಿಲಾಗ್ರಿಸ್ ಸಮೀಪದ ಜುವೆಲ್ಲರಿಯೊಂದರ ಸಿಬ್ಬಂದಿ ಮೇಲೆ ಹಾಡಹಗಲೇ ಚಾಕುವಿನಿಂದ ಇರಿದಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಕು ದಾಳಿ ನಡೆದಾಗ ಜುವೆಲ್ಲರಿಯಲ್ಲಿ ಒಬ್ಬರೇ ಸಿಬ್ಬಂದಿ ಇದ್ದರು ಎನ್ನಲಾಗಿದೆ. ವೈಯಕ್ತಿಕ ದ್ವೇಷದಿಂದ ಚಾಕುವಿನಿಂದ ಇರಿಯಲಾಗಿದೆಯೇ ಅಥವಾ ಚಿನ್ನಾಭರಣ ಅಪಹರಿಸುವ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತೇ ಎನ್ನುವುದು ತನಿಖೆಯಿಂದ ತಿಳಿಯಬೇಕಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.