4:26 PM Monday10 - August 2026
ಬ್ರೇಕಿಂಗ್ ನ್ಯೂಸ್
ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ…

ಇತ್ತೀಚಿನ ಸುದ್ದಿ

ಕೈಕೊಟ್ಟ ಪ್ರೀತಿಸಿದ ಹುಡುಗ: ಮನನೊಂದ ಬಡ ಕುಟುಂಬದ ವಿದ್ಯಾರ್ಥಿನಿ ಸಾವಿಗೆ ಶರಣು

03/02/2023, 14:06

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ತಾಲೂಕಿನ ಸಂಬರಗಿಯಲ್ಲಿ ಅದೊಂದು ಬಡ ಕುಟುಂಬ. ಮನೆಗಳಲ್ಲಿ ಆಗುವ ತೊಂದರೆ, ಹಣದ ಅಭಾವ ಕಂಡು ತಾನೂ ಕೂಡ ಮನೆಗೆ ಆಸರೆಯಾಗಬೇಕೆಂದು ಕಾಲೇಜು ಜೊತೆಗೆ ಆಸ್ಪತ್ರೆ ಕೆಲಸಕ್ಕೆ ಸೇರ್ಕೊಂಡು ಮನೆ ನಡೆಸಲು ಸಹಾಯ ಮಾಡಲು ಮುಂದಾದ ವಿದ್ಯಾರ್ಥಿನಿ, ಆದರೆ, ಆ ವಿದ್ಯಾರ್ಥಿ ಅದೊಂದು ಮಾಡಿದ ತಪ್ಪಿನಿಂದ ಇಂದು ತನ್ನ ಪ್ರಾಣ ಕಳೆದುಕೊಂಡಿದ್ದಾಳೆ.

ಅಷ್ಟಕ್ಕೂ ಆ ವಿದ್ಯಾರ್ಥಿ ಮಾಡಿದ್ದಾದರೂ ಏನು ಗೊತ್ತಾ? ಹಾಗಾದರೆ ಈ ಸ್ಟೋರಿ ಓದಿ ನೋಡಿ..
ಹೀಗೆ ಮನೆಯಲ್ಲಿ ಕಣ್ಣೀರು ಹಾಕುತ್ತಿರುವ ಮಹಿಳೆಯರು, ನನ್ನ ಮಗಳಿಗೆ ನ್ಯಾಯ ಕೊಡಸಿ ಎಂದು ಚಿರಾಡುತ್ತಿರುವ ತಾಯಿ ಈ ಎಲ್ಲ ದೃಶ್ಯಗಳು ಕಂಡು ಬಂದದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ, ಸುಮಾರು 21 ವರ್ಷದ ತೇಜಸ್ವಿನಿ ಗಂಗಪ್ಪ ಗುಜ್ಜರ ವಿದ್ಯಾರ್ಥಿ ತಾನಾಯಿತು ತನ್ನ ಕಾಲೇಜಾಯತು ಎಂದು ದಿನಂಪ್ರತಿ ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿ. ಕಳೆದ ಎರಡು ವರ್ಷದ ಹಿಂದೆ ಅಥಣಿ ಪಟ್ಟಣದ ಆಶೀಪ ದೇಸಾಯಿ ಎಂಬ ಯುವಕನ ಜೊತೆ ಸ್ನೇಹಕ್ಕೆ ಮುಂದಾಗುತ್ತಾಳೆ, ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಪರಸ್ಪರ ಪ್ರೀತಿಸಲು ಮುಂದಾಗುತ್ತಾರೆ. ಪ್ರೀತಿ ಮದುವೆ ಹಂತಕ್ಕೆ ತಲುಪಿದಾಗ ಯುವಕ ಆಶೀಪ‌ ಮದುವೆ ನಿರಾಕರಿಸುತ್ತಾನೆ. ಮದುವೆ ನಿರಾಕರಣೆಯಾದ ಬಳಿಕ ತೇಜಸ್ವಿನಿ ತನ್ನ ಪ್ರೀತಿಯ ಬಗ್ಗೆ ತನ್ನ ತಾಯಿ ಶೋಭಾ ಬಳಿ ಹೇಳಿದಾಗ ಶೋಭಾ ಆಶೀಪ ಜೊತೆ ಮಾತನಾಡಲು ಮುಂದಾಗುತಾಳೆ. ಆದರೆ, ಶೋಭಾ ಮಾತಿಗೆ ಬೆಲೆ ಕೊಡದ ಆಶೀಪ ಬಾಯಿಗೆ ಬಂದ ಹಾಗೆ ಬೈತ್ತಾನಂತೆ. ಈ ವಿಚಾರವಾಗಿ ಶೋಭಾ ಖಾಸಗಿ ವಾಹಿನಿಗೆ ಹೇಳಿದ್ದು ಹೀಗೆ…
ಆರೋಪಿ ಆಸೀಫ್‌ ತೇಜಸ್ವಿನಿಯನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಇತ್ತೇನು ಸಾಚಾ ಅಲ್ಲ ಈಗಾಗಲೇ ಅಥಣಿ ಪೋಲಿಸ್ ಠಾಣೆಯಲ್ಲಿ ಇತನ ವಿರುದ್ದ ಎರಡು ಪ್ರಕರಣ ದಾಖಲಾಗಿದ್ದವು, ಇತನಿಗೆ ಮೊದಲಿನಿಂದಲೂ ಹುಡಗಿಯರ ಶೋಕಿ ಬೇರೆ ಇತ್ತಂತೆ, ತೇಜಸ್ವಿನ ಮರಳು ಮಾಡು ತನ್ನ ಬುಟ್ಟಿಗೆ ಹಾಕೊಂಡಿದ್ದ. ಈ ಕಿರಾತಕ ಆಶೀಪ ಜ.26 ರಂದು ಮದುವೆ ಆಗುವುದಿಲ್ಲ ಎಂದು ನಿರಾಕರಿಸಿದಾಗ ಮನನೊಂದ ತೇಜಸ್ವಿನಿ ಕೀಟನಾಶಕ ಸೇವಿಸಿದ್ದಳು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತಾದರೂ ಜ.27 ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.


ಈ ಬಗ್ಗೆ ತೇಜಸ್ವಿನಿ ತಂದೆ ಗಂಗಪ್ಪ ಹೇಳೊದು ಹೀಗೆ;
ಬಾಳಿ ಬಳಕಾಗಬೇಕಾದ ಮಗಳು ಪ್ರೀತಿಗೆ ಮರಳಾಗಿ ಇಂದು ಸಾವನಪ್ಪಿದ್ದು, ಪ್ರೀತಿಯ ಮೊಸಕ್ಕೆ ತನ್ನ ಪ್ರಾಣವನ್ನ ಕಳೆದುಕೊಂಡಿದ್ದಾಳೆ. ನನ್ನ ಮಗಳ ಸಾವಿಗೆ ಕಾರಣವಾದ ಆಶೀಪಗೆ ಕಠಿಣ ಶಿಕ್ಷೆ ಆಗಲೇ ಬೇಕು ನನ್ನ ಮಗಳಿಗೆ ನ್ಯಾಯ ಒದಗಿಸಬೇಕೆಂದು ಅಂಗಲಾಚುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು