7:15 PM Friday3 - May 2024
ಬ್ರೇಕಿಂಗ್ ನ್ಯೂಸ್
ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:…

ಇತ್ತೀಚಿನ ಸುದ್ದಿ

ಕೇಂದ್ರ ಸಂಪುಟದಿಂದ ಸದಾನಂದ ಗೌಡರಿಗೆ ಕೊಕ್ : ಪನಿಶ್ ಮೆಂಟೋ? ಅಲ್ಲ, ಕೊಡ್ತರಾ ಪ್ರಮೋಶನ್? 

08/07/2021, 09:58

ನವದೆಹಲಿ(reporterkarnataka news): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದಲ್ಲಿ  ಸಚಿವ ಸಂಪುಟ ಕೊನೆಗೂ ಪುನರ್ ರಚನೆಯಾಗಿದೆ. ಹಲವರು ಸಂಪುಟದಿಂದ ಹೊರಗೆ ಬಿದ್ದಿದ್ದಾರೆ. ಹೊಸ ಮುಖಗಳು ಸೇರ್ಪಡೆಗೊಂಡಿವೆ. ಹೊರಬಿದ್ದ ಪ್ರಮುಖರಲ್ಲಿ ರಾಜ್ಯ ಬಿಜೆಪಿ ಹಿರಿಯ ನಾಯಕ ಡಿ.ವಿ.ಸದಾನಂದ ಗೌಡ ಅವರು ಕೂಡ ಸೇರಿದ್ದಾರೆ. ಹಾಗಾದರೆ ಡಿವಿಎಸ್ ಗೆ ಕೊಕ್ ನೀಡಲು ಕಾರಣವಾದರೂ ಏನು?

ಮೋದಿ ಅವರು ಅಸಮರ್ಥ, ಅದಕ್ಷ ಹಾಗೂ ಆರೋಗ್ಯ ಸಮಸ್ಯೆ ಇರುವ ಸಚಿವರಿಗೆ ಕ್ಯಾಬಿನೆಟ್ ನಿಂದ ಗೇಟ್ ಪಾಸ್ ನೀಡಿದ್ದಾರೆ. ಶಿಕ್ಷಣ, ಆರೋಗ್ಯ, ರಸಗೊಬ್ಬರ ಮುಂತಾದ ಖಾತೆಗಳು ಸಂಪೂರ್ಣ ಪುನರ್ ರಚನೆಯಾಗಲಿದೆ. ಆಡಳಿತವನ್ನು ಇನ್ನಷ್ಟು ಚುರುಕುಗೊಳಿಸುವ ಪ್ಲ್ಯಾನ್ ಇದಾಗಿದೆ. ಶಿಕ್ಷಣ, ಆರೋಗ್ಯ ಖಾತೆಯನ್ನು ಇನ್ನಷ್ಟು ಬಲಪಡಿಸುವ ಗುರಿಯನ್ನು ಪ್ರಧಾನಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ದೇಶದಲ್ಲಿ ಕೊರೊನಾದ 2ನೇ ಅಲೆ ಎದುರಿಸಲು ಕೇಂದ್ರ ಆರೋಗ್ಯ ಇಲಾಖೆ ತಕ್ಕದಾದ ಪೂರ್ವ ಸಿದ್ದತೆಯನ್ನು ಮಾಡಿಲ್ಲ ಎಂಬ ಆರೋಪಿಗಳ ದೇಶಾದ್ಯಂತ ಕೇಳಿ ಬಂದಿತ್ತು. ಅದಲ್ಲದೆ. 

ದೇಶಕ್ಕೆ ಮೆಡಿಕಲ್ ಆಕ್ಸಿಜನ್ ಕೊರತೆಯಾಗುತ್ತದೆ ಎಂಬ ಪೂರ್ವ ಮುನ್ಸೂಚನೆಯನ್ನು ಕೂಡ ನೀಡಿರಲಿಲ್ಲ. ಮೆಡಿಕಲ್ ಆಕ್ಸಿಜನ್ ಉತ್ಪಾದನೆ ಹೆಚ್ಚಳಕ್ಕೆ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಇದು ಪ್ರಧಾನಿ ಮೋದಿ ಕೋಪಕ್ಕೆ ಕಾರಣವಾಗಿತ್ತು. ಇದರಿಂದ ಆರೋಗ್ಯ ಸಚಿವ ಡಾ. ಹರ್ಷವರ್ಧನ ತಲೆದಂಡವಾಯಿತು. 

ಅದೇ ರೀತಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಡಿ.ವಿ.ಸದಾನಂದ ಗೌಡ ಅವರ ರಸಾಯನಿಕ, ರಸಗೊಬ್ಬರ ಖಾತೆಗೂ ಆರೋಗ್ಯ ಖಾತೆಗೂ ನಿಕಟ ಸಂಬಂಧವಿದೆ. ಅದಲ್ಲದೆ ಕೇಂದ್ರದ ಫಾರ್ಮಾಸೂಟಿಕಲ್ಸ್ ಇಲಾಖೆ ಕೂಡ ಸದಾನಂದ ಗೌಡರ ಬಳಿಯೇ ಇತ್ತು. ದೇಶದಲ್ಲಿ ಕೊರೊನಾ ರೋಗಿಗಳಿಗೆ ನೀಡುವ ರೆಮಿಡಿಸಿವಿರ್ ಇಂಜೆಕ್ಷನ್, ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ನೀಡುವ ಅಂಪೋಟೆರಿಸಿನ್ ಬಿ ಡ್ರಗ್ಸ್ ಕೊರತೆಯಾಗದಂತೆ ನೋಡಿಕೊಳ್ಳುವುದು ಗೌಡರ ಜವಾಬ್ದಾರಿಯಾಗಿತ್ತು. ಆದರೆ ಕೊರತೆ ತೀವ್ರವಾಗಿ ತಲೆದೋರಿತ್ತು. ಈ ಡ್ರಗ್ಸ್ ಗಳ ಉತ್ಪಾದನೆ ಹೆಚ್ಚಳಕ್ಕೆ ಸದಾನಂದ ಗೌಡ ಕ್ರಮ ಕೈಗೊಂಡಿದ್ದರೂ

ಪ್ರಾರಂಭದಲ್ಲಿ ರೆಮಿಡಿಸಿವಿರ್ ಇಂಜೆಕ್ಷನ್ ಹಾಗೂ ಅಂಪೋಟೆರಿಸಿನ್ ಬಿ ಡ್ರಗ್ಸ್ ಗೆ ತೀವ್ರ ಕೊರತೆ ಉಂಟಾಗಿತ್ತು. ಬೇಗ ಉತ್ಪಾದನೆ ಹೆಚ್ಚಳ ಮಾಡಲು ಸಾಧ್ಯವಾಗಲಿಲ್ಲ. ಇಷ್ಟೇ ಅಲ್ಲದೆ ರಸಗೊಬ್ಬರ ಇಲಾಖೆಯಲ್ಲಿ ಸದಾನಂದ ಗೌಡರ ಸಹಾಯಕ ಮಂತ್ರಿಯಾಗಿದ್ದ ಗುಜರಾತ್‌ನ ಮನುಸುಖ್ ಮಾಂಡವಿಯಾ ಅವರು ಹೆಚ್ಚು ಕ್ರಿಯಾಶೀಲರಾಗಿರುವುದು ಕೂಡ ಡಿವಿಎಸ್ ಗೆ ಮುಳುವಾಯಿತು ಎನ್ನಲಾಗಿದೆ.

ಇನ್ನು ಸದಾನಂದ ಗೌಡ ಅವರನ್ನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಮಾಡುತ್ತಾರೆ ಎಂಬ ಗುಸು ಗುಸು ಇದೆ. ಆದರೆ ಮುಖ್ಯಮಂತ್ರಿ ಸ್ಥಾನ ಖಾಲಿ ಇದ್ದರೆ ತಾನೆ ಸಿಎಂ ಆಗಲು ಸಾಧ್ಯ. ಸದ್ಯ ರಾಜ್ಯ ನಾಯಕತ್ವವನ್ನು ಬದಲಾಯಿಸುವ ಮನಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್ ಇಲ್ಲ ಎನ್ನಲಾಗಿದೆ. ಕೇಂದ್ರ ಸಂಪುಟದಲ್ಲಿ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಅವರಿಗೆ ಇದೇ ಕಾರಣಕ್ಕೆ ಮಂತ್ರಿ ಸ್ಥಾನ ನೀಡಲಿಲ್ಲ. ಮುಂದಿನ ಚುನಾವಣೆ ವರೆಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಾಧ್ಯತೆಯೇ ಹೆಚ್ಚು ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು