4:25 PM Monday29 - June 2026
ಬ್ರೇಕಿಂಗ್ ನ್ಯೂಸ್
ಗೆಳೆಯ ವೈಶಾಖ್‌ ಆತ್ಮಹತ್ಯೆ ಪ್ರಕರಣ: ಫಸ್ಟ್‌ ರಿಯಾಕ್ಷನ್ ಕೊಟ್ಟ ನಟಿ ಕೃಷಿ ತಾಪಂಡ ರೆಸಾರ್ಟ್ ನ ಈಜುಕೊಳದಲ್ಲಿ ದುರಂತ | 10 ಅಡಿ ಎತ್ತರದಿಂದ 4 ಅಡಿ… 2 ದಿನಗಳ ರಾಜ್ಯ ಪ್ರವಾಸ ಮುಗಿಸಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ… ಆರೆಸ್ಸೆಸ್ ವಿರುದ್ಧ ಪೋಸ್ಟ್ : ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್… ಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ತೀರ್ಥಹಳ್ಳಿ ಕಾಲೇಜು ಪ್ರಾಧ್ಯಾಪಕ… ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ತೂರಿದ ಪ್ರಕರಣ | 4 ಮಂದಿ… ಮುಂಬೈ | ಮೊಹರಂ ವೇಳೆ ಸಾಮೂಹಿಕ ವಿಷಪ್ರಾಶನಕ್ಕೆ ಸಂಚು: 14,900 ಕ್ಯಾಪ್ಸುಲ್‌ ವಶಕ್ಕೆ;… ತೀರ್ಥಹಳ್ಳಿ: ಪಲ್ಸ್ ಪೋಲಿಯೋ ಅಭಿಯಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ಟ್ರೆಕ್ಕಿಂಗ್ ವೇಳೆ ದುರಂತ: ಹೃದಯಾಘಾತದಿಂದ ಚಿತ್ರ ನಿರ್ಮಾಪಕ ಭಾ ಮಾ ಹರೀಶ್ ಪುತ್ರ… ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು

ಇತ್ತೀಚಿನ ಸುದ್ದಿ

ಹೀಗೊಬ್ಬಳು.. ಬಾಲೆ ಶಬರಿ!!: ಪ್ರಧಾನಿ ಮೋದಿ ಆಗಮನಕ್ಕೆ ಕಾದು ಕೂತ 3ರ ಹರೆಯದ ಪುಟಾಣಿ!; ಪಿಎಂಗೆ ಪಾಯಸದೂಟ ತಿನ್ನಿಸುವ ಆಸೆ!!

29/01/2023, 15:32

ವಿಜಯನಗರ(reportrerkarnataka.com): ಪ್ರಧಾನಿ ನರೇಂದ್ರ ಮೋದಿ ನಮ್ಮ ಮನೆಗೆ ಬಂದು ಪಾಯಸ- ಅನ್ನ ಸಾರು ಉಂಡು ಟೀ ಕುಡಿದು ಹೋಗಬೇಕು. ಇದು ನನ್ನಾಸೆ….ಹೀಗೆಂತ ಹೇಳುತ್ತಿರುವುದು ಯಾವುದೇ ಸಚಿವ, ಶಾಸಕರು ಅಲ್ಲ, ಬದಲಿಗೆ 3ರ ಹರೆಯ ಪುಟ್ಟ ಹುಡ್ಗಿ. ವಿಜಯನಗರ ಜಿಲ್ಲೆಯ ಕೂಡ್ಲಗಿ ಪಟ್ಟಣದ ಮೂರು ವರ್ಷದ ಬಾಲೆ ಹೀಗೆ ಹೇಳುತ್ತಿರುವುದನ್ನು ಕೇಳಿದರೆ ಎಂಥವರಿಗೂ ಕೂಡ ಅಚ್ಚರಿಯಾಗಬಹುದು. ಯಾಕೆಂದರೆ ಆಕೆಗೆ ಪ್ರಧಾನಿ ಮೋದಿ ಯಾವ ಪಕ್ಷವರು ಎನ್ನುವುದು ಗೊತ್ತಿಲ್ಲ. ಅವರು ಬಾರತದ ಪ್ರಧಾನಿ ಅಂತಾನು ತಿಳಿದಿಲ್ಲ. ಆದ್ರೆ ಮೋದಿ ಅವಳಿಗೆ ಇಷ್ಟವಂತೆ. ತುಂಬಾನೆ ಇಷ್ಟವಂತೆ. ವಿಶೇಷವೆಂದರೆ ಈ ಬಾಲೆಯ ಮನೆಯಲ್ಲಿ ಟಿವಿ ಕೂಡ ಇಲ್ಲ, ಸ್ಮಾರ್ಟ್ ಫೋನ್ ಕೂಡ ಇಲ್ಲ. ಆದ್ರೆ ಪ್ರಧಾನಿ ನರೇಂದ್ರ ಮೋದಿ ಅವರ ಪರಿಚಯವಿದೆ ಆಕೆಗೆ. ನರೇಂದ್ರ ಮೋದಿ ಗೊತ್ತಾ.. ಅವರು ನಮ್ಮ ಮನಗೆ ಊಟಕ್ಕೆ ಬರಬೇಕು ಅಷ್ಟೇ.. ಮೋದಿ ಅವರೇ ನಮ್ಮ ಮನೆಗೆ ಬಂದು ಪ‍ಾಯಸ‍ಾ…ಅನ್ನ ಸಾರು ಉಂಡು ಟೀ ಕುಡಿದು ಹೋಗಬೇಕು..ಅದು ನನ್ನಿಷ್ಟ.. ಅವರು ಬಂದೇ ಬರುತ್ತಾರೆ ಎನ್ನುತ್ತಾಳೆ ಹರಣಿ. ದಿನಕ್ಕೊಮ್ಮೆಯಾದರೂ ಮೋದಿ ಬಗ್ಗೆ ತನ್ನ ತಾಯಿ ರೇಣುಕಮ್ಮಳೊಂದಿಗೆ ವಿಚಾರಿಸುತ್ತಿರುತ್ತಾಳೆ, ಆಕೆ ತನ್ನ ಸ್ನೇಹಿತರೊಂದಿಗೆ ಆಟವಾಡುವಾಗ ಕೂಡ ಸ್ನೇಹಿತರಲ್ಲಿ ಯಾರಾದರೂ ಒಬ್ಬ ಹುಡುಗನಿಗೆ ಮೋದಿ ಅವರ ಹೆಸರನ್ನಿಡುತ್ತಾಳೆ. ಇದನ್ನ ಕಂಡ ನೆರೆ ಹೊರೆಯವರು ಬೆರಗಾಗಿದ್ದಾರೆ. ಆಟ ಆಡುವಾಗಲೂ ಕೂಡ ನರೇಂದ್ರ ಮೋದಿ ಯ ಬಗ್ಗೆ ಗುನುಗುಡುತ್ತಾಳೆ ಈ ಬಾಲೆ. ಅವರು ತುಂಬಾ ಒಳ್ಳೆಯವರು ಅದಕ್ಕೇ ನನಗಿಷ್ಟ ಎನ್ನುತ್ತಾಳೆ.


ಬಾಲೆ ಹರಣಿಯ ತಂದೆ ಎರಡು ವರ್ಷದ ಹಿದೆಯಷ್ಟೇ, ಕೋವಿಡ್ ನಲ್ಲಿ ನಿಧನರಾಗಿದ್ದಾರೆ. ತಾಯಿ ರೇಣುಕಾ ಹಾಗೂ ಇವಳ ಸಹೋದರ ಬಾಲಕ ವಿನಾಯಕ ಸೇರಿದಂತೆ, ಮೂರೇ ಮೂರು ಜನರಿರುವ ಪುಟ್ಟ ಬಡ ಕುಟುಂಬದಲ್ಲಿ ವಾಸಿಸುತ್ತಿದ್ದಾಳೆ‌. ರಾಮಾಯಣದಲ್ಲಿ ಶಬರಿ ಮಾತೆ ಶ್ರೀರಾಮನ ಆತಿಥ್ಯಕ್ಕಾಗಿ ಕಾಯುತ್ತಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು