ಇತ್ತೀಚಿನ ಸುದ್ದಿ
ಜಾತ್ರೆಯಲ್ಲಿ ಕೈಹಿಡಿದು ಎಳೆದ ಯುವಕ: ಮನನೊಂದ ಯುವತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು
29/01/2023, 14:56

ರಾಹುಲ್ ಅಥಣಿ ಬೆಳಗಾವಿ
info.reporterkarnataka agnail.com
ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಜಾತ್ರೆಯಲ್ಲಿ ಯುವಕನೋರ್ವ ತನ್ನ ಕೈಹಿಡಿದು ಎಳೆದಾಡಿದ್ದಾನೆಂದು ಮನನೊಂದು ಖಿನ್ನತೆಗೆ ಒಳಗಾಗಿ ಯುವತಿಯೋರ್ವಳು ತೋಟದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸಂಕೋನಟ್ಟಿ ಗ್ರಾಮದ ಸ್ವಪ್ನಾ ಸುಭಾಷ ಹಿಪ್ಪರಗಿ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸಂಕೋನಟ್ಟಿ ಗ್ರಾಮದ ಸುನೀಲ ಅಣ್ಣಪ್ಪ ಧರಿಗೌಡ ಕೈ ಹಿಡಿದು ಎಳೆದಾಡಿದ ಯುವಕ ಎಂದು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ : ಸುನೀಲ ಧರಿಗೌಡರ ಜತೆ ಸ್ವಪ್ನಾಳನ್ನು ವಿವಾಹ ಮಾಡಿಕೊಡಿ ಎಂದು ಸುನೀಲ ತಂದೆ-ತಾಯಿ ಈಚೆಗೆ ಯುವತಿಯ ಮನೆಗೆ ಬಂದು ಕೇಳಿದ್ದರು. ಮಗಳಿಗೆ ಈಗಲೇ ಮದುವೆ ಮಾಡುವುದಿಲ್ಲ ಎಂದು ಸ್ವಪ್ನಾಳ ತಂದೆ ಸುಭಾಷ ಹೇಳಿದ್ದರು. ಅದೇ ಸಿಟ್ಟಿನಲ್ಲಿ ಜ.25 ರಂದು ಜಾತ್ರೆಯಲ್ಲಿ ಸುನೀಲನು ಸ್ವಪ್ನಾಳನ್ನು ಕೈ ಹಿಡಿದು ಎಳೆದಿದ್ದ. ಇದರಿಂದ ಮನನೊಂದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.