ಇತ್ತೀಚಿನ ಸುದ್ದಿ
ಗ್ರಾಮ ದೇವತೆಯ ಚಿನ್ನಾಭರಣಕ್ಕೆ ಕನ್ನ ಹಾಕಿದ ಖದೀಮರು: ಚಂದ್ರಗಿರಿ ದೇವಿಯ ಒಡವೆ ಕಳ್ಳತನ; ಬೆಚ್ಚಿಬಿದ್ದ ಗ್ರಾಮಸ್ಥರು
25/01/2023, 22:31

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಗ್ರಾಮದೇವತೆ ಚಂದ್ರಗಿರಿ ದೇವಿ ಒಡವೆ ಕಳ್ಳತನ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಕಾಗವಾಡ- ಅಥಣಿ ಠಾಣಾ ವ್ಯಾಪ್ತಿಯಲ್ಲಿ ಪದೇ ಪದೇ ಕಳ್ಳತನ ನಡೆಯುತ್ತಿದ್ದು, ಇದೀಗ ಗ್ರಾಮದೇವತೆಯ ಚಿನ್ನಾಭರಣಕ್ಕೆ ಕಳ್ಳರು ಕೈ ಹಾಕಿದ್ದಾರೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ದೇವಸ್ಥಾನ ಸೇರಿದಂತೆ ಸರಣಿ ಮನೆ ಕಳ್ಳತನ ಈಗಾಗಲೇ ನಡೆದಿದೆ. ಗಡಿ ಗ್ರಾಮಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಐದು ತಾಳಿ ಸೇರಿದಂತೆ ಮನೆಯಲ್ಲಿರುವ ಹಣ ಒಡವೆ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಕಳ್ಳರ ಹೆಡೆಮುರಿ ಕಟ್ಟುವಂತೆ ಸ್ಥಳೀಯರ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಅಥಣಿ ಕ್ರೈಮ್ ಪಿ ಎಸ್ ಐ ರಾಕೇಶ್ ಬಗಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.