ಇತ್ತೀಚಿನ ಸುದ್ದಿ
ಕಾಂಗ್ರೆಸಿಗರು ಜನ ಸೇರಿಸೋದು, ಮೋದಿಗೆ ಜನ ಸೇರೋದು: ಪ್ರಜಾಧ್ವನಿ ಯಾತ್ರೆಗೆ ಸಿ.ಟಿ. ರವಿ ಟೀಕೆ
21/01/2023, 21:18

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@ಜಿಮೈಲ್
ಕಾಂಗ್ರೆಸ್ಸಿಗರು ಜನ ಸೇರಿಸೋದು, ಪ್ರಧಾನಿ ಮೋದಿಗೆ ಜನ ಸೇರೋದು ಎಂದು ಕಾಂಗ್ರೆಸ್ಸಿನ ಪ್ರಜಾಧ್ವನಿ ಯಾತ್ರೆಗೆ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು,
ಮೋದಿ ಬರ್ತಾರೆ ಅಂದ್ರೆ ಲಕ್ಷ-ಲಕ್ಷ ಜನ ಸೇರುತ್ತಾರೆ, ಸೇರೋದಕ್ಕೂ, ಸೇರ್ಸೋದಕ್ಕೂ ವ್ಯತ್ಯಾಸವಿದೆ.
ಸೇರ್ಸೋದು ಹಲವು ಕಾರಣಕ್ಕೆ, ಸೇರೋದು ಪ್ರೀತಿಗೆ ಮಾತ್ರ ಎಂದರು.
ಪ್ರಜೆಗಳ ಬಲ ಮೋದಿಯವರ ಜೊತೆ ಇದೆ.
ಆದರೆ, ಕಾಂಗ್ರೆಸ್ ಪ್ರಜೆಗಳ ಧ್ವನಿಯನ್ನ ಅವರು ಕೇಳಬೇಕು, ಅವರ ಧ್ವನಿಯನ್ನ ಪ್ರಜೆಗಳಿಗೆ ಕೇಳಿಸುತ್ತಿದ್ದಾರೆ. ಪಿ.ಎಫ್.ಐ. ಕಾರ್ಯಕರ್ತರನ್ನ ಬಿಟ್ಟಿದ್ದು, ಅಮಾಯಕರ ಹತ್ಯೆಯಾಗಿದ್ದು, ರಿಡ್ಯೂ ಹೆಸರಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದದ್ದು ಜನ ಅವರ ಸಾಧನೆಯನ್ನ ಪಿಸುಗುಡುತ್ತಿಲ್ಲ, ಕೂಗಿ-ಕೂಗಿ ಹೇಳ್ತಿದ್ದಾರೆ ಎಂದರು.
ಪ್ರಜಾಧ್ವನಿ ಅಂದರೆ ಪ್ರಜೆಗಳ ಧ್ವನಿಯನ್ನ ಕೇಳಬೇಕು, ಇವರು ಮೈಕ್ ಹಿಡಿದು ಕೂಗೋದಲ್ಲ ನಮ್ಮ ಪ್ರಶ್ನೆಗೆ ನೇರವಾಗಿ ಉತ್ತರಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ಸಿಗರು ಇಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಧ್ವನಿ ಚುನಾವಣೆಯಲ್ಲಿ ಕೇಳುತ್ತದೆ ಎಂದು ಸಿ.ಟಿ.ರವಿ ಹೇಳಿದರು.