ಇತ್ತೀಚಿನ ಸುದ್ದಿ
ಬಿಎಚ್ ಎಂಎಸ್: ಸುಳ್ಯ ತಾಲೂಕಿನ ಅಮೃತಾ ಎಸ್.ಬೆಳಗಜೆಗೆ 4 ಬಹುಮಾನ
20/01/2023, 12:01

ಬೆಂಗಳೂರು(reporterkarnataka.com): ಬೆಂಗಳೂರಿನ ಸರಕಾರಿ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಅಮೃತಾ ಎಸ್.ಬೆಳಗಜೆ ಅವರಿಗೆ ಬಿ.ಎಚ್.ಎಂ.ಎಸ್ ಕೋರ್ಸಿನಲ್ಲಿ ನಾಲ್ಕು ಬಹುಮಾನಗಳು ಲಭಿಸಿವೆ.
ಸುಳ್ಯ ತಾಲ್ಲೂಕಿನ ಪಂಬೆತ್ತಾಡಿ ಗ್ರಾಮದ ಹಿರಿಯ ಪತ್ರಕರ್ತ ಸುರೇಶ್ ಬೆಳಗಜೆ- ಉಷಾ ಬೆಳಗಜೆ ಅವರ ಪುತ್ರಿಯಾದ ಅವರು, ಪ್ರಥಮ ವರ್ಷದಲ್ಲಿ ಫಿಸಿಯಾಲಜಿ ಮತ್ತು ಬಯೋಕೆಮಿಸ್ಟ್ರಿಯಲ್ಲಿ ಪ್ರಥಮ ರ್ಯಾಂಕ್, ಓವರ್ ಆಲ್ ಟಾಪರ್ 3ನೇ ರ್ಯಾಂಕ್, ಎರಡನೇ ವರ್ಷದಲ್ಲಿ ಫೊರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ 2ನೇ ರ್ಯಾಂಕ್ ಮತ್ತು ನಾಲ್ಕನೇ ವರ್ಷದಲ್ಲಿ ಮೆಟೀರಿಯಾ ಮೆಡಿಕಾದಲ್ಲಿ ಮೂರನೇ ರ್ಯಾಂಕ್ ಪಡೆದಿದ್ದಾರೆ. ಈ ಬಹುಮಾನಗಳನ್ನು ಜನವರಿ 18ರಂದು ಬೆಂಗಳೂರಿನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ವಿತರಿಸಲಾಯಿತು.