8:03 AM Wednesday13 - August 2025
ಬ್ರೇಕಿಂಗ್ ನ್ಯೂಸ್
ಸ್ಮಶಾನ ಜಾಗ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ: ವಿಧಾನಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಬಂಡೀಪುರ: ಕಾಡಾನೆ ಜತೆ ಸೆಲ್ಫಿಗೆ ಹೋಗಿ ದಾಳಿಗೊಳಗಾಗಿದ್ದ ವ್ಯಕ್ತಿಗೆ 25 ಸಾವಿರ ರೂ.… ವಿಶ್ವ ವಿಖ್ಯಾತ ಮೈಸೂರು ದಸರಾ: ಗಜಪಡೆಯ ತೂಕ ಪರೀಕ್ಷೆ; ಯಾರ್ಯಾರು, ಎಷ್ಟೆಷ್ಟು ಕೆಜಿ? ವಿಧಾನ ಮಂಡಲ ಮುಂಗಾರು ಅಧಿವೇಶನ: ಧರ್ಮಸ್ಥಳ ಪ್ರಕರಣ ಪ್ರಸ್ತಾಪ; ಸನಾತನ ಧರ್ಮದ ಪಾವಿತ್ರ್ಯಕ್ಕೆ… ಬೆಂಗಳೂರು ಟೆಕ್ ಸಮ್ಮಿತ್-2025: 100ಕ್ಕೂ ಹೆಚ್ಚು ಕಂಪನಿಗಳ ಸಿಇಒಗಳ ಜತೆ ಮುಖ್ಯಮಂತ್ರಿ Breakfast… Kodagu | ವಿರಾಜಪೇಟೆ: ಚೆಂಬು ವ್ಯಾಪ್ತಿಯಲ್ಲಿ ಪುoಡಾನೆ ಸೆರೆಗೆ ಸರ್ಕಾರದ ಅನುಮತಿ; ತಂಡ… ಮೈಸೂರು -ಕೊಡಗು ಲೋಕಸಭೆ ಕ್ಷೇತ್ರದಲ್ಲೂ ಮತಗಳ್ಳತನ: ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪ Bangalore | ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರಕ್ಕೆ: ಬೆಂಗಳೂರು ಮೆಟ್ರೋ 2ರ ಹಳದಿ ಮಾರ್ಗ… ಧರ್ಮಸ್ಥಳ: ಯೂಟ್ಯೂಬರ್ ಗಳ ಮೇಲೆ ಹಲ್ಲೆ ಪ್ರಕರಣ; 6 ಮಂದಿಯ ಬಂಧನ Bangalore | ಪ್ರಧಾನಿ ಮೋದಿಯವರ ಬೆಂಗಳೂರು ಕಾರ್ಯಕ್ರಮ; ಪ್ರತಿಪಕ್ಷದ ನಾಯಕ ಆರ್. ಅಶೋಕ್…

ಇತ್ತೀಚಿನ ಸುದ್ದಿ

ವೇದವ್ಯಾಸ ಕಾಮತರು ತಂದಿರುವ ಅನುದಾನದ ದಾಖಲೆ ನೀಡಲಿ: ಮಾಜಿ ಶಾಸಕ ಲೋಬೊ ಸವಾಲು

19/01/2023, 17:02

ಮಂಗಳೂರು(reporterkarnataka.com): ಮಂಗಳೂರಿನ ಅಭಿವೃದ್ಧಿಗೆ 4750 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿಕೊಂಡಿದ್ದಾರೆ.

ಅವರು ಅನುದಾನ ತಂದಿರುವ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಸವಾಲು ಹಾಕಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಸಿರಿ ಯೋಜನೆಯಡಿ 750 ಕೋಟಿ ರೂ. ಮಂಜೂರು ಆಗಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಆಗಿರುವುದು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳನ್ನೂ ತಾವೇ ಮಂಜೂರು ಮಾಡಿಸಿರುವುದಾಗಿ ವೇದವ್ಯಾಸ ಕಾಮತ್ ಹೇಳಿಕೊಂಡಿದ್ದಾರೆ. ಈ ಕುರಿತು ನಾನು ದಾಖಲೆ ನೀಡಲು ಸಿದ್ಧ ಎಂದರು.

ಮೀನುಗಾರಿಕೆ ಹಾಗೂ ಹಳೆ ಬಂದರು ಪ್ರದೇಶ ಸಮಗ್ರ ಅಭಿವೃದ್ಧಿಯ ಆಶಯದೊಂದಿಗೆ ಸ್ಮಾರ್ಟ್ ಸಿಟಿ ಯೋಜನೆ ಮಂಜೂರಾಗಿದ್ದು. ಈ ಯೋಜನೆ ಅಡಿ ನೂರಾರು ವರ್ಷ ಬಾಳಿಕೆ ಬರುವ ಶಾಶ್ವತ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಅದನ್ನು ಬಿಟ್ಟು ಪಾಲಿಕೆ ವತಿಯಿಂದ ಕೈಗೊಳ್ಳಬೇಕಾದ ರಸ್ತೆ ಚರಂಡಿಯಂತಹ ಕಾಮಗಾರಿ ನಡೆಸುವುದು ಈ ಯೋಜನೆಯ ಮೂಲ ಆಶಯಕ್ಕೆ ಧಕ್ಕೆ ತಂದಿದೆ ಎಂದು ಮಾಜಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಸಂಪರ್ಕ ಸುಧಾರಣೆಗೆ ನಗರದಲ್ಲಿ 400 ಕೋಟಿ ಹೂಡಿಕೆ ಮಾಡಲು ಲಕ್ಷದ್ವಿಪದ ಆಡಳಿತಾಧಿಕಾರಿ ಒಪ್ಪಿದ್ದರು.
ಆದರೆ, ಈ ಯೋಜನೆ ದಿಕ್ಕು ತಪ್ಪಿದೆ. ಪಂಪ್ ವೆಲ್ ನಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಿಲ್ಲ. ಹಂಪನಕಟ್ಟೆಯ ವಾಹನ ನಿಲುಗಡೆಗಾಗಿ ಬಹುಹಂತಗಳ ಕಟ್ಟಡ ನಿರ್ಮಾಣ ಕಾಮಗಾರಿಯೂ ನನಗೆಗುದಿಗೆ ಬಿದ್ದಿದೆ ಎಂದು ಅವರು ನುಡಿದರು.

ಮಂಗಳೂರಿನ ಶಕ್ತಿನಗರದಲ್ಲಿ 935 ಮಂದಿಗೆ ವಸತಿ ನಿರ್ಮಿಸುವ ಯೋಜನೆಯನ್ನು ಅನುಷ್ಠಾನವೇ ಮಾಡಿಲ್ಲ. ಚುನಾವಣೆ ಹತ್ತಿರ ಬರುವಾಗ ಇದಕ್ಕೆ ಶಂಕುಸ್ಥಾಪನೆಗೆ ಮುಂದಾಗಿದ್ದಾರೆ. ಈ ಯೋಜನೆಗೆ ಗುರುತಿಸಲಾದ ಜಾಗವು ಪಾಲಿಕೆ ಹೆಸರಿನಲ್ಲಿ ನೋಂದಣಿಯಾಗಿತ್ತು. ಅದು ಡೀಮ್ಡ್ ಅರಣ್ಯ ಆಗಿರಲಿಲ್ಲ. ಈ ಬಗ್ಗೆ ಬಿಜೆಪಿಯವರೇ ತಕರಾರು ಮಾಡಿ ಅರಣ್ಯ ಇಲಾಖೆ ತಗಾದೆ ತೆಗೆಯುವಂತೆ ಮಾಡಿದ್ದರು. ನಾನು ಮತ್ತೆ ಶಾಸಕನಾದರೆ ಆರೇ ತಿಂಗಳಲ್ಲಿ ಅಲ್ಲಿ ವಸತಿ ನಿರ್ಮಿಸಿ ತೋರಿಸುತ್ತೇನೆ ಎಂದರು.
ತೋಟಬೆಂಗ್ರೆಯಿಂದ ಸುಲ್ತಾನ್ ಬತ್ತೆರಿ ನಡುವೆ 35 ಕೋಟಿ ರೂ. ವೆಚ್ಚದಲ್ಲಿ ತೂಗುಸೇತುವೆ ನಿರ್ಮಿಸುವ ಬದಲು 10 ಕೋಟಿ ಹೆಚ್ಚುವರಿ ಅನುದಾನ ಒದಗಿಸಿ ಕಾಂಕ್ರೀಟ್ ಸೇತುವೆ ನಿರ್ಮಿಸುವುದೇ ಸೂಕ್ತ. ತೂಗು ಸೇತುವೆಯಲ್ಲಿ ವಾಹನ ಬಳಸಲಾಗದು. ಸಮುದ್ರ ತಟದಲ್ಲಿ ನಿರ್ಮಿಸುವ ತೂಗುಸೇತುವೆಯ ನಿರ್ವಹಣೆಯನ್ನು ಸರಿಯಾಗಿ ಮಾಡದಿದ್ದರೆ, ಅದು ತುಕ್ಕು ಹಿಡಿದು ಹಾಳಾಗುತ್ತವೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು