ಇತ್ತೀಚಿನ ಸುದ್ದಿ
2023ರ ಮೊದಲ ಬಿಜೆಪಿ ಗೆಲುವಿನ ಫಲಿತಾಂಶ ನಾಗಮಂಗಲ ವಿಧಾನಸಭಾ ಕ್ಷೇತ್ರ ನೀಡುತ್ತದೆ : ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ.
19/01/2023, 09:39

ಮಂಡ್ಯ(reporterkarnataka.com): ನಾಗಮಂಗಲ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಿಜೆಪಿ ಫಲಿತಾಂಶ ನೀಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹೇಳಿದರು.
ಅವರು ನಾಗಮಂಗಲದಲ್ಲಿ ಏರ್ಪಡಿಸಿದ್ದ ವಿಧಾನಸಭಾ ಕ್ಷೇತ್ರ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಪ್ರಧಾನಮಂತ್ರಿ ಮೋದಿಯವರು ಭಾರತದ ಸಾರ್ವಭೌಮತ್ವ ಪ್ರಪಂಚಕ್ಕೆ ಪರಿಚಯಿಸಿದ್ದಾರೆ. ಪ್ರತಿ ಬೂತ್ ಮಟ್ಟದಲ್ಲೂ ಕಾರ್ಯಕರ್ತರು ಮೋದಿಯವರು ನೀಡಿರುವ ರೈತರು, ಜನರಿಗೆ ಉಪಯುಕ್ತವಾದ ಯೋಜನೆ, ನೆರವಿನ ಬಗ್ಗೆ ಪ್ರತಿ ಮತದಾರರ ಮನ ಮುಟ್ಟುವಂತೆ ಮಾಡಬೇಕು ಎಂದು ಹೇಳಿದರು.
ನಾಗಮಂಗಲ ವಿಧಾನಸಭೆ ಕ್ಷೇತ್ರ ಫೈಟರ್ ರವಿ ಗೆಲುವಿನೊಂದಿಗೆ ಹೊಸ ಇತಿಹಾಸವನ್ನು ಬರೆಯಲಿದೆ. ನಾಗಮಂಗಲ ಬಿಜೆಪಿ ಗೆಲುವಿನ ಮೊದಲ ಕ್ಷೇತ್ರ ಆಗಲಿದೆ ಎಂದರು.
ಸಚಿವ ನಾರಾಯಣಗೌಡರು ಮಾತನಾಡಿ, ಕೆರೆ ಕಟ್ಟೆ ಗಳಿಗೆ ನೀರು ತುಂಬಿಸಲು ಆಡಳಿತರೂಢ ಭಾರತೀಯ ಜನತಾ ಪಾರ್ಟಿ ಯೋಜನೆಯು ಬಹು ಮುಖ್ಯವಾಗಿದ್ದು ಜನಸಾಮಾನ್ಯರಿಗೆ ಇಂದು ಜಲಜೀವನ್ ಮಿಷನ್ ಅಡಿಯಲ್ಲಿ ಮನೆಮನೆಗೆ ಕುಡಿಯುವ ನೀರಿನ ಯೋಜನೆ ಜಾರಿಗೆ ತರಲು ಬಿಜೆಪಿಯೇ ಬರಬೇಕಾಯಿತು. ಇಂದು ಮಂಡ್ಯ ಜಿಲ್ಲೆ ಬಿಜೆಪಿ ತಾಣವಾಗಿದೆ. ದಳ ಕಾಂಗ್ರೆಸ್ ನವರ ಭದ್ರಕೋಟೆ ಅನ್ನವ ಮಾತು ದೂರವಾಗಿದ್ದು. ಬೆಂಗಳೂರು ನಾಗಮಂಗಲ ನಿವಾಸಿಗಳು ಬಿಜೆಪಿ ಗೆಲುವಿನ ಬಗ್ಗೆ ಮಾತನಾಡುತ್ತಾರೆ. ಫೈಟರ್ ರವಿ ನಾಗಮಂಗಲ ಕ್ಷೇತ್ರದ ಅಭಿವೃದ್ಧಿಗೆ ತನು ಮನ ಧನ ಅರ್ಪಿಸುತ್ತಾರೆ ಅವರ ಗೆಲುವಿನಿಂದ ನಾಗಮಂಗಲ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಕಾರಣವಾಗಲಿದೆ ಎಂದರು.
ರಾಜ್ಯ ಉಪಾಧ್ಯಕ್ಷರಾದ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾನಾರವರು ಮಾತನಾಡಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಮತದಾರರಿಗೆ ಮೋದಿ ಅವರ ಸಾಧನೆಯನ್ನು ತಿಳಿಸಿ ಬಿಜೆಪಿಗೆ ಗೆಲುವು ತರಲು ಶ್ರಮಿಸಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಉಮೇಶ್, ಫೈಟರ್ ರವಿ. ಡಾಕ್ಟರ್ ವಿಷ್ಣುಮೂರ್ತಿ ಭಟ್ ಉಪಸ್ಥಿತರಿದ್ದರು. ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದ ಇಂದ್ರೇಶ್, ಮದ್ದೂರು ಸ್ವಾಮಿ ಮುಂದಿನ ವಿಧಾನಸಭಾ ಅಭ್ಯರ್ಥಿ ಗಳು ಭಾಗವಹಿಸಿದ್ದರು .