ಇತ್ತೀಚಿನ ಸುದ್ದಿ
ಪುತ್ತೂರು: ತಾಯಿ ತೋಟದ ಕೆಲಸದಲ್ಲಿದ್ದಾಗ ಚೂರಿ ಇರಿದು ಯುವತಿಯ ಭೀಕರ ಕೊಲೆ
17/01/2023, 20:45

ಪುತ್ತೂರು(reporterkarnataka.com): ಇಲ್ಲಿನ ಮುಂಡೂರು ಗ್ರಾಮದ ಕಂಪ ಸಮೀಪ ಯುವತಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಭಯಾನಕ ಘಟನೆ ನಡೆದಿದೆ.
ಮೃತಳನ್ನು ಇಲ್ಲಿನ ನಿವಾಸಿ ಗಿರಿಜಾ ಎಂಬುವರ ಪುತ್ರಿ ಜಯಶ್ರೀ (23) ಎಂದು ಗುರುತಿಸಲಾಗಿದೆ. ಜಯಶ್ರೀ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಮಗಳ ಬೊಬ್ಬೆ ಕೇಳಿ ತೋಟದಲ್ಲಿದ್ದ ಗಿರಿಜಾ ಓಡಿ ಬಂದು ನೋಡಿದಾಗ ಜಯಶ್ರೀ ರಕ್ತದ ಮಡುವಲ್ಲಿ ಬಿದ್ದಿದ್ದರು ಎನ್ನಲಾಗಿದೆ.
ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಜಯಶ್ರೀ ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.