ಇತ್ತೀಚಿನ ಸುದ್ದಿ
ಮಂಗಳೂರು ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಯುಡಿಎಫ್ ಶುಲ್ಕ ಏರಿಕೆ ಬಿಸಿ: ಏಪ್ರಿಲ್ ನಿಂದ ಹೆಚ್ಚಳ
15/01/2023, 15:13

ಮಂಗಳೂರು(reporter Karnataka.com): ಮಂಗಳೂರು ವಿಮಾನ ನಿಲ್ದಾಣ ದಲ್ಲಿ ಪ್ರಯಾಣಿಕರಿಗೆ ಯುಡಿಎಫ್ ಶುಲ್ಕ ಏರಿಗೆ ಬಿಸಿ ಮುಟ್ಟಲಿದೆ. ಪ್ರಸ್ತುತ ದೇಶೀಯ ಪ್ರಯಾಣಿಕರಿಗೆ ವಿಧಿಸಲಾಗುವ ಶುಲ್ 150 ರೂ. ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರು 825 ರೂ. ಪಾವತಿಸಬೇಕಿದೆ. ಏಪ್ರಿಲ್‌ನಿಂದ ದೇಶೀಯ ನಿರ್ಗಮನ ಪ್ರಯಾಣಿಕರು 150 ರೂ. ಬದಲು 560 ರೂ. ಪಾವತಿಸಬೇಕು.
ಈ ಶುಲ್ಕ ಪ್ರತೀ ವರ್ಷ ಏರಲಿದೆ. ಅಂ.ರಾ. ನಿರ್ಗಮನ ಪ್ರಯಾಣಿಕರು ಈಗ 825 ಪಾವತಿಸುತ್ತಿದ್ದರೆ, ಈ ಶುಲ್ಕ ಏಪ್ರಿಲ್‌ನಿಂದ 1,015 ಆಗಲಿದ್ದು, ಮುಂದಿನ ವರ್ಷ ಮತ್ತೆ ಏರಲಿದೆ. ಆಗಮನ ದೇಶೀಯ ಪ್ರಯಾಣಿಕರು ಏಪ್ರಿಲ್‌ನಿಂದ ಮೊದಲ ಬಾರಿಗೆ 150 ರೂ. ಶುಲ್ಕ ಪಾವತಿಸಲಿದ್ದು ಮುಂದಿನ ವರ್ಷ ಮಾರ್ಚ್ ಬಳಿಕ 240 ಪಾವತಿಸಬೇಕಾಗಿದೆ.