ಇತ್ತೀಚಿನ ಸುದ್ದಿ
ಬೆಳಗಾವಿ ಜೈಲಿನಲ್ಲಿದ್ದುಕೊಂಡು ಕೇಂದ್ರ ಸಚಿವರ ಕಚೇರಿಗೆ ಬೆದರಿಕೆ ಕರೆ: ಪುತ್ತೂರಿನ ಕೈದಿಯ ಕೃತ್ಯ ಬೆಳಕಿಗೆ
15/01/2023, 14:32

ಬೆಳಗಾವಿ(reporterkarnataka.com):
ಪುತ್ತೂರಿನ ಕೈದಿಯೊಬ್ಬ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ ಬೆದರಿಕೆಯೊಡ್ಡಿದ ಘಟನೆ ಶನಿವಾರ ನಡೆದಿದೆ.
ಬೆಳಗಾವಿ ಹಿಂಡಾಲಗ ಜೈಲಿನಲ್ಲಿರುವ ಕೈದಿ ದಕ್ಷಿಣ ಕನ್ನಡ ಪುತ್ತೂರು ಮೂಲದ ಜಯೇಶ್ ಕುಮಾರ್ ಎಂದು ತಿಳಿದು ಬಂದಿದೆ.
ಜಯೇಶ್ ಕುಮಾರ್ ಪುತ್ತೂರಿನ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಪಟ್ಟಿದ್ದಾನೆ. ಈ ಹಿಂದೆ ಜೈಲಿನಲ್ಲೇ ಇದ್ದುಕೊಂಡು ಎಡಿಜಿಪಿ ಅಲೋಕ್ ಕುಮಾರ್ ಅವರಿಗೂ ಜೀವ ಬೆದರಿಕೆ ಕರೆಯನ್ನು ಮಾಡಿದ್ದ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.