2:32 AM Sunday25 - January 2026
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ…

ಇತ್ತೀಚಿನ ಸುದ್ದಿ

ಕೋಸ್ಟಾ ಕಾಫಿಯ 100ನೇ ಸ್ಟೋರ್ ಆರಂಭ: ಭಾರತದಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ವಿಸ್ತರಿಸುತ್ತಿದೆ ಕೋಕಾ-ಕೋಲಾ ಕಂಪನಿ

14/01/2023, 22:33

ಹೊಸದಿಲ್ಲಿ(reporterkarnataka.com): ಭಾರತದಲ್ಲಿ ವಾಣಿಜ್ಯ ಪಾನೀಯಗಳ ವಿಭಾಗದಲ್ಲಿ ಕೋಕಾ-ಕೋಲಾದ ಪ್ರಮುಖ ಕಾಫಿ ಬ್ರ್ಯಾಂಡ್ ಆಗಿರುವ ಕೋಸ್ಟಾ ಕಾಫಿ, ಭಾರತದಲ್ಲಿ 100ನೇ ಸ್ಟೋರ್ ಆರಂಭಿಸಿದ್ದು ,ಈ ಮೂಲಕ ದೇಶದಲ್ಲಿ ತನ್ನ ಪಯಣದಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದ ಸಂಭ್ರಮದಲ್ಲಿದೆ. ಕೋಸ್ಟಾ ಕಾಫಿಯ 100ನೇ ಸ್ಟೋರ್ ನವದೆಹಲಿಯ ಖಾನ್ ಮಾರುಕಟ್ಟೆಯಲ್ಲಿ ಡಿಸೆಂಬರ್ 2022ರಲ್ಲಿ ಉದ್ಘಾಟನೆಯಾಯಿತು.

ದೇವಯಾನಿ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಸಹಭಾಗಿತ್ವದಲ್ಲಿ [ಡಿಐಎಲ್], ಕೋಸ್ಟಾ ಕಾಫಿಯು 30 ನಗರಗಳಲ್ಲಿ ತನ್ನ ರಿಟೇಲ್ ಮಳಿಗೆಗಳನ್ನು ಸ್ಥಾಪಿಸಿದ್ದು, ಭಾರತದಲ್ಲಿ ಅತ್ಯಂತ ಪ್ರೀತಿಯ ಕಾಫಿ ಬ್ರಾಂಡ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಕಾಫಿ ಪ್ರಿಯರಿಗೆ ಉತ್ಕೃಷ್ಟ ಸ್ವಾದವನ್ನು ನೀಡುವ ಗುರಿಯೊಂದಿಗೆ, ಕೋಸ್ಟಾ ಕಾಫಿ ಭಾರತದ ಹೈ ಸ್ಟ್ರೀಟ್‌ಗಳು, ಮಾಲ್‌ಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ತನ್ನ ಕೆಫೆ ಹೆಜ್ಜೆಗುರುತುಗಳನ್ನು ವಿಸ್ತರಿಸುವತ್ತ ಗಮನಹರಿಸಿದೆ. ಕಾಫಿಯ ಹೊಸ ಅನುಭವಗಳನ್ನು ಬಯಸುವ ಗ್ರಾಹಕರಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೋಸ್ಟಾ ಕಾಫಿ ತನ್ನ ರಿಟೇಲ್ ಅಸ್ತಿತ್ವವನ್ನು ಶ್ರೇಣಿ 1 ಮತ್ತು ಶ್ರೇಣಿ 2 ಮಾರುಕಟ್ಟೆಗಳಲ್ಲಿ ವಿಸ್ತರಿಸುತ್ತಿದೆ.

ಈ ಸಾಧನೆಯ ಕುರಿತು ಕೋಸ್ಟಾ ಕಾಫಿಯ ಇಂಡಿಯಾ ಅಂಡ್ ಎಮರ್ಜಿಂಗ್ ಮಾರ್ಕೆಟ್ಸ್ ಜನರಲ್ ಮ್ಯಾನೇಜರ್ ವಿನಯ್ ನಾಯರ್ ಪ್ರತಿಕ್ರಿಯಿಸಿ, “ನಾವು 100ನೇ ಸ್ಟೋರ್ ಸ್ಥಾಪನೆಯ ಮೈಲಿಗಲ್ಲನ್ನು ಆಚರಿಸಲು ಉತ್ಸುಕರಾಗಿದ್ದೇವೆ. ಏಕೆಂದರೆ, ಭಾರತವು ಕೋಸ್ಟಾ ಕಾಫಿಗೆ ಜಾಗತಿಕವಾಗಿ ಪ್ರಮುಖ ಮಾರುಕಟ್ಟೆಯಾಗಿದೆ. ಭಾರತದಲ್ಲಿ ಕಾಫಿ ಪ್ರಿಯರ ಸಮುದಾಯವು ನಿರಂತರವಾಗಿ ಬೆಳೆಯುತ್ತಿದ್ದು, ಸಿಗ್ನೇಚರ್ ಪಾನೀಯವಾದ ಫ್ಲಾಟ್ ವೈಟ್‌ನಂತಹ ನಮ್ಮ ಕರಕುಶಲ ಕಾಫಿಗಳನ್ನು ಹೇಗೆ ಸ್ವೀಕರಿಸಿದೆ ಎಂಬುದಕ್ಕೆ 100ನೇ ಸ್ಟೋರ್ ಸ್ಥಾಪನೆಯ ಈ ಮೈಲಿಗಲ್ಲು ನಿದರ್ಶನವಾಗಿದೆ. ಕೋಸ್ಟಾ ಕಾಫಿಯು ನಮ್ಮ ಗ್ರಾಹಕರಿಗೆ ಸ್ಮರಣೀಯ ಕಾಫಿ ಅನುಭವವನ್ನು ರೂಪಿಸಲು ಮತ್ತು ರಾಷ್ಟ್ರವ್ಯಾಪಿಯಾಗಿ ಹೆಚ್ಚಿನ ಕಾಫಿ ಪ್ರಿಯರಿಗೆ ಅದನ್ನು ವಿಸ್ತರಿಸಲು ನಾವು ಬದ್ಧರಾಗಿದ್ದೇವೆ” ಎಂದರು.

ಕಾಫಿಯನ್ನು ಅದರ ಬೆಸ್ಪೋಕ್ ಪಾನೀಯಗಳು ಮತ್ತು ವಿಭಿನ್ನ ರಿಟೇಲ್ ಮಾರಾಟ ಮಳಿಗೆಗಳ ಮೂಲಕ ಸಂತೋಷದಾಯಕ ಅನುಭವವನ್ನಾಗಿ ಮಾಡಲು ಪ್ರಸಿದ್ಧವಾಗಿರುವ ಕೋಸ್ಟಾ ಕಾಫಿ, ಅತ್ಯಂತ ಪ್ರೀತಿಯ ಕಾಫಿ ಬ್ರಾಂಡ್ ಆಗುವ ಗುರಿಯನ್ನು ಹೊಂದಿದೆ. ನವದೆಹಲಿಯ ಖಾನ್ ಮಾರ್ಕೆಟ್‌ನಲ್ಲಿರುವ 100ನೇ ಮಳಿಗೆಯು ಕೋಸ್ಟಾ ಕಾಫಿಯ ಕಲಾತ್ಮಕ ಮತ್ತು ನಾವೀವ್ಯಕ್ಕೆ ಅನುಗುಣವಾದ ಆಕರ್ಷಕ ವಿನ್ಯಾಸವನ್ನು ಹೊಂದಿದೆ.
ಕೋಸ್ಟಾ ಕಾಫಿಯ ಸಿಗ್ನೇಚರ್ ಕಾಫಿಗಳಾದ ಫ್ಲಾಟ್ ವೈಟ್, ಕ್ಲಾಸಿಕ್ ಕಾರ್ಟೊ, ಕೆಫೆ ಕ್ಯಾರಮೆಲಾ, ಇತ್ಯಾದಿಗಳನ್ನು ವಿಶೇಷವಾಗಿ ಸ್ಥಳೀಯ ಮೂಲದ ಕಾಫಿ ಬೀಜಗಳಿಂದ ಕೌಶಲಪೂರ್ಣವಾಗಿ ತಯಾರಿಸಲಾಗುತ್ತದೆ. ಪ್ರತಿ ಸರ್ವಿಂಗ್ ಜೊತೆಗೆ, ಕೋಸ್ಟಾ ಕಾಫಿಯು ಉತ್ತಮ ಕಾಫಿಯನ್ನು ಪ್ರೀತಿಸಲು ಜಗತ್ತನ್ನು ಪ್ರೇರೇಪಿಸುತ್ತದೆ. ಈ ಬೀಜಗಳನ್ನು ಸ್ಥಳೀಯ ರೈತರು ಉತ್ಪಾದಿಸುತ್ತಾರೆ ಮತ್ತು ದೇಶಾದ್ಯಂತ ಇರುವ ಕೆಲವು ಅತ್ಯುತ್ತಮ ಬ್ಯಾರಿಸ್ಟಾಗಳಿಂದ ತಯಾರಿಸಲಾಗುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು