3:43 PM Thursday15 - May 2025
ಬ್ರೇಕಿಂಗ್ ನ್ಯೂಸ್
ಲೋಕಾಯುಕ್ತ ಅಧಿಕಾರಿಗಳಿಂದ ಮತ್ತೆ ಭ್ರಷ್ಟರ ಭೇಟೆ: ಬೆಂಗಳೂರು, ಮಂಗಳೂರು ಸಹಿತ 7 ನಗರಗಳ… ಮಂಗಳೂರು: ಸರ್ವೆ ಇಲಾಖೆಯ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ;… Bangalore | ಗ್ರಾಹಕರ ದೂರು ನಿರ್ವಹಣೆಗೆ ಡಿಜಿಟಲ್ ಪೋರ್ಟಲ್: ಬೆಸ್ಕಾಂ ಎಂಡಿ ಡಾ.ಎನ್.… Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.…

ಇತ್ತೀಚಿನ ಸುದ್ದಿ

ಭಾರತದ ಪ್ರಪ್ರಥಮ ಹಸಿರು ಐಟಿಐ ಮಂಗಳೂರಿನಲ್ಲಿ!: ಸರಕಾರಿ ಮಹಿಳೆಯರ ಪಾಲಿಟೆಕ್ನಿಕಿಗೆ ಮಾನ್ಯತೆ!!

12/01/2023, 11:09

ಮಂಗಳೂರು(reporterkarnataka.com): ಕ್ವೆಸ್ಟ್ ಅಲಯನ್ಸ್ ಲಾಭರಹಿತ ಸಂಸ್ಥೆಯು ಭಾರತದಲ್ಲಿ ಮೂರು ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ಹಸಿರು ಐಟಿಐಗಳಾಗಿ ಅಭಿವೃದ್ಧಿ ಪಡಿಸಲಿದೆ. ದೇಶದ ಪ್ರಥಮ ಹಸಿರು ಐಟಿಐ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ.

ದೇಶದ ಪ್ರಥಮ ಹಸಿರು ಐಟಿಐ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಮಂಗಳೂರಿನ ಸರ್ಕಾರಿ ಮಹಿಳೆಯರ ಐಟಿಐನಲ್ಲಿ ಈ ತಿಂಗಳ ಆರಂಭದಲ್ಲಿ ಕೆಲಸ ಪ್ರಾರಂಭಿಸಿದೆ. ಈ ಪ್ರಾಯೋಗಿಕ ಯೋಜನೆಯು ಇನ್ನೆರಡು ಐಟಿಐಗಳಲ್ಲಿ ಸಹ ಆರಂಭವಾಗಲಿದ್ದು, ಗುಜರಾತಿನ ಹಾಲೋಲ್ ಹಾಗೂ ಅಸ್ಸಾಂನ ಸಿಲ್ಚಾರ್ ನ ಸ್ರಿಕೊನ ಐಟಿಐಗಳು ಸಹ ಹಸಿರು ಐಟಿಐಗಳಾಗಿ ಅಭಿವೃದ್ಧಿ ಹೊಂದಲಿವೆ.

ಈ ಪ್ರಾಯೋಗಿಕ ಯೋಜನೆಯ ಮೂಲಕ ಹಸಿರು ಐಟಿಐ ಸೃಷ್ಟಿಸಲು ಕ್ವೆಸ್ಟ್ ಅಲಯನ್ಸ್ ಸಂಸ್ಥೆಯು ಆಯ್ದ ಐಟಿಐಗಳ ಸಹಯೋಗದೊಂದಿಗೆ ಕೆಲಸ ಮಾಡಲಿದೆ. ಐಟಿಐಗಳ ಹಸಿರೀಕರಣ ಯೋಜನೆಯನ್ನು ಮೂರು ಹಂತಗಳಲ್ಲಿ ಕೈಗೊಳ್ಳಲಿದ್ದು – ಮೂಲಸೌಕರ್ಯ, ಜ್ಞಾನಗ್ರಹಣ ಹಾಗೂ ಹಸಿರು ವೃತ್ತಿಗಳಿಗಾಗಿ ವಿದ್ಯಾರ್ಥಿಗಳ ಸನ್ನದ್ಧತೆ – ಈ ಮೂರು ಹಂತಗಳನ್ನು ಒಳಗೊಂಡಿದೆ.

ಮೂಲಸೌಕರ್ಯ ಮಟ್ಟದಲ್ಲಿ ಈ ಐಟಿಐಗಳ ಕ್ಯಾಂಪಸ್ ಗಳನ್ನು ಇಂಗಾಲ ತಟಸ್ಥಗೊಳಿಸುವ ಉದ್ದೇಶದಿಂದ ಪರಿಸರ ಸ್ನೇಹಿ ಮಾಡಲಾಗುವುದು. ಕ್ವೆಸ್ಟ್ ಅಲಯನ್ಸ್ ಸಂಸ್ಥೆ ಈ ಐಟಿಯಗಳಲ್ಲಿ ಹಸಿರು ಆಡಿಟ್ ನಡೆಸಿ ಆಯಾ ಕಟ್ಟಡದ ಅವಶ್ಯಕತೆ ತಕ್ಕಂತೆ ಪ್ರತ್ಯೇಕ ಯೋಜನೆ ರೂಪಿಸಲಿದೆ. ಈ ಹಸಿರು ಯೋಜನೆಯು ಮಳೆ ನೀರು ಕೊಯ್ಲು, ಸೌರಶಕ್ತಿ, ತ್ಯಾಜ್ಯ ನಿರ್ವಹಣೆ ಹಾಗೂ ಸುಸ್ಥಿರ ಗಾರ್ಡನಿಂಗ್ ಮುಂತಾದ ಅಂಶಗಳನ್ನು ಒಳಗೊಳ್ಳಲಿದೆ.

ಮಂಗಳೂರಿನ ಸರ್ಕಾರಿ ಮಹಿಳೆಯರ ಐಟಿಐ ಕಾಲೇಜಿನ ಉಸ್ತುವಾರಿ ಪ್ರಾಂಶುಪಾಲರಾದ ಶಿವಕುಮಾರ್ ಎಸ್ ಅವರು, ” ನಮ್ಮ ಸಂಸ್ಥೆಯು ಹಸಿರು ಐಟಿಐ ಆಗಿ ಪರಿವರ್ತನೆಗೊಳ್ಳುವ ಮೂಲಕ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಹಸಿರು ವೃತ್ತಿಗಳನ್ನು ಆಯ್ದುಕೊಳ್ಳಲು ಪ್ರೇರಣೆ ನೀಡಲಿದೆ. ಇದರೊಂದಿಗೆ ವಿದ್ಯಾರ್ಥಿಗಳಲ್ಲಿ ಹಸಿರು ಮನೋಭಾವ ಬೆಳೆಸುವುದು ಸಹ ನಮ್ಮ ಉದ್ದೇಶವಾಗಿದೆ. ಮೊದಲಿಗೆ ನಾವು ಸಂಸ್ಥೆಯನ್ನು ಆಡಿಟ್ ಮಾಡಿಸಿ ನಂತರ ಇದನ್ನು ಹೇಗೆ ಹಸಿರು ಐಟಿಐ ಆಗಿ ಪರಿವರ್ತಿಸಬಹುದು ಎಂಬ ಬಗ್ಗೆ ಯೋಜನೆ ರೂಪಿಸುತ್ತೇವೆ.” ಎಂದು ಅಭಿಪ್ರಾಯಪಟ್ಟರು.

ಏರಡನೆಯದಾಗಿ, ಜ್ಞಾನಗ್ರಹಣ ಮಟ್ಟದಲ್ಲಿ, ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಒಳಗಿರುವ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಹಸಿರು ಪರಿಹಾರಗಳನ್ನು ರೂಪಿಸಲು ಪ್ರೋತ್ಸಾಹ ನೀಡಲಾಗುವುದು. ಹ್ಯಾಕಥಾನ್, ಕಾರ್ಯಾಗಾರಗಳು, ಸಂವೇದನೆ ರೂಪಿಸುವ ಕಾರ್ಯಕ್ರಮಗಳು ಮುಂತಾದ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಹಸಿರು ಮಾನಸಿಕತೆ ಬೆಳೆಸಲು ಈ ಯೋಜನೆ ಕಾರ್ಯನಿರ್ವಹಿಸಲಿದೆ.
ಮೂರನೆಯದಾಗಿ, ಹಸಿರು ವೃತ್ತಿಗಳಿಗಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲಾಗುವುದು. ಹೊರಹೊಮ್ಮುತ್ತಿರುವ ಹಸಿರು ರಂಗದಲ್ಲಿ ಪ್ರಸ್ತುತ ಇರುವ ಅವಕಾಶಗಳು ಹಾಗೂ ಸವಾಲುಗಳ ಬಗ್ಗೆ ಅತಿಥಿ ಉಪನ್ಯಾಸಗಳು ಹಾಗೂ ಸಂವಾದಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುವುದು. ಉದ್ಯಮದ ಜೊತೆ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ವೃತ್ತಿ ಬದುಕಿನ ಬಗ್ಗೆ ಮಾರ್ಗದರ್ಶನ, ಇಂಟರ್ನ್ಶಿಪ್ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಒದಗಿಸಲಾಗುವುದು.
“ಜಾಗತಿಕವಾಗಿ ಕಾಡುತ್ತಿರುವ ಹವಾಮಾನ ಬದಲಾವಣೆಯ ಬಿಕ್ಕಟ್ಟು ಭವಿಷ್ಯದಲ್ಲಿ ಹಸಿರು ವೃತ್ತಿಗಳ ಬೇಡಿಕೆ ಬಗ್ಗೆ ದಿಕ್ಸೂಚಿಯಾಗಿದೆ. ಈಗಿನ ಐಟಿಐ ವಿದ್ಯಾರ್ಥಿಗಳು ಪಾರಂಪರಿಕ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಹಸಿರು ಉದ್ದಿಮೆ ಭವಿಷ್ಯದ ಉದ್ದಿಮೆಯಾಗಲಿದೆ. ಯುವ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ತಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದಷ್ಟೇ ಅಲ್ಲದೆ ಬದಲಾಗುತ್ತಿರುವ ಭವಿಷ್ಯದ ವೃತ್ತಿ ಬದುಕಿಗೆ ಹೊಂದಿಕೊಳ್ಳುವ ಮತ್ತು ಜಗತ್ತಿನಲ್ಲಿ ಅರ್ಥಪೂರ್ಣ ಬದಲಾವಣೆ ತರುವ ನಿಟ್ಟಿನಲ್ಲಿ ತಮ್ಮ ಮನೋಭಾವನೆಯನ್ನು ರೂಪಿಸಿಕೊಳ್ಳಬೇಕು.

ಐಟಿಐಗಳೊಂದಿಗೆ ಕೈಜೋಡಿಸಿ ವಿದ್ಯಾರ್ಥಿಗಳನ್ನು ಹಸಿರು ಉದ್ದಿಮೆಗೆ ಸಿದ್ಧಪಡಿಸಲು ಸಹಕಾರ ನೀಡುವುದು ನಮ್ಮ ಉದ್ದೇಶ,” ಎಂದು ಕ್ವೆಸ್ಟ್ ಅಲಯನ್ಸ್ ನ ಸಿಇಒ ಆಕಾಶ್ ಸೇಥಿ ಅಭಿಪ್ರಾಯ ಪಟ್ಟರು.
ಈ ಐಟಿಐಗಳ ವಿದ್ಯಾರ್ಥಿಗಳು ಮುಂದೆ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಲಿದ್ದಾರೆ ಮತ್ತು ಉನ್ನತ ಸ್ಥಾನಗಳಿಗೆ ಏರಲಿದ್ದಾರೆ. ಆದ್ದರಿಂದ ಈ ವಿದ್ಯಾರ್ಥಿಗಳಲ್ಲಿ ಈಗಿನಿಂದಲೇ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಹೊಣೆಗಾರಿಕೆಯ ಅರಿವು ಮೂಡಿಸುವುದು ಬಹಳ ಮುಖ್ಯ, ಎಂದರು.

ಕ್ವೆಸ್ಟ್ ಅಲಯನ್ಸ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, 21ನೇ ಶತಮಾನದ ಯುವಕ ಯುವತಿಯರು ಸ್ವಯಂ-ಅಧ್ಯಯನದ ಮೂಲಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತಿದೆ. ಗುಣಮಟ್ಟದ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಯಲ್ಲಿರುವ ಕೊರತೆಗಳನ್ನು ನಿವಾರಿಸಲು ಸೂಕ್ತ ಪರಿಹಾರ ವಿನ್ಯಾಸಗೊಳಿಸುತ್ತಿದೆ. ಕಲಿಕಾ ಜಾಲಗಳು ಹಾಗೂ ಸಹಯೋಗಗಳನ್ನು ನಿರ್ಮಿಸುವ ಮೂಲಕ ಸಂಶೋಧನೆ ಮತ್ತು ಆವಿಷ್ಕಾರ ಪ್ರಣೀತ ಬದಲಾವಣೆಗಳನ್ನು ತರುವತ್ತ ಕಾರ್ಯ ನಿರ್ವಹಿಸುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು