ಇತ್ತೀಚಿನ ಸುದ್ದಿ
ಹೊಸ ವರ್ಷಾಚರಣೆ: ಶೃಂಗೇರಿ, ಹೊರನಾಡು ಕ್ಷೇತ್ರದಲ್ಲಿ ಭಾರೀ ಭಕ್ತಸಾಗರ; ಹೋಮ್ ಸ್ಟೇ, ರೆಸಾರ್ಟ್ ಫುಲ್
02/01/2023, 01:11

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಶೃಂಗೇರಿ ಶಾರದಾಂಭೆ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಜನಸಾಗರ ತುಂಬಿತ್ತು. ಹೊಸ ವರ್ಷ ಆಚರಿಸಿ ಪ್ರವಾಸಿಗರು ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಪ್ರವಾಸಿಗರು ಕಳೆದ ಮೂರು ದಿನಗಳಿಂದ ಕಾಫಿನಾಡಲ್ಲೇ ಬೀಡು ಬಿಟ್ಟಿದ್ದಾರೆ.ನಿನ್ನೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಹೋಂಸ್ಟೇ, ರೆಸಾರ್ಟ್ ನಲ್ಲಿ ಹೊಸ ವರ್ಷ ಆಚರಣೆ ಮಾಡಿದ್ದಾರೆ.
ಇಂದು ಧಾರ್ಮಿಕ ಕ್ಷೇತ್ರ ಶೃಂಗೇರಿ, ಹೊರನಾಡು, ಕಳಸಕ್ಕೆ ಭೇಟಿ ನೀಡಿದ್ದಾರೆ.
ಕಳೆದ ಮೂರು ದಿನಗಳಿಂದ ಕಾಫಿನಾಡಲ್ಲಿ ಲಕ್ಷಾಂತರ ಪ್ರವಾಸಿಗರ ಜಮಾವಣೆಯಾಗಿದ್ದಾರೆ.800ಕ್ಕೂ ಅಧಿಕ ಹೋಂ ಸ್ಟೇ, 40ಕ್ಕೂ ಅಧಿಕ ರೆಸಾರ್ಟ್ ಫುಲ್ ಆಗಿದ್ದವು. ಇಂದು ಧಾರ್ಮಿಕ ಕ್ಷೇತ್ರಗಳ ಪ್ರವಾಸ ಮುಗಿಸಿ ಪ್ರವಾಸಿಗರು ಹಿಂತಿರುಗುತ್ತಿದ್ದಾರೆ.