ಇತ್ತೀಚಿನ ಸುದ್ದಿ
ಕುಳಾಯಿ: 56 ಲಕ್ಷ ವೆಚ್ಚದಲ್ಲಿ ರಸ್ತೆ ಕಾಂಕ್ರೀಟಿಕರಣ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ಚಾಲನೆ
29/12/2022, 21:54

ಸುರತ್ಕಲ್(reporterkarnataka.com): ಸುಮಾರು 56 ಲಕ್ಷ ರೂಪಾಯಿ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬ್ರ 9 ಕುಳಾಯಿ ಯಲ್ಲಿ ರಸ್ತೆ ಕಾಂಕ್ರೀಟಿಕರಣ, ಚರಂಡಿ ರಚನೆ, ರಸ್ತೆ ಅಭಿವೃದ್ಧಿ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ವೈ. ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮೇಯರ್ ಜಯಾನಂದ ಅಂಚನ್, ಸ್ಥಳೀಯ ಮನಪಾ ಸದಸ್ಯೆ ವೇದಾವತಿ, ಸುಮಿತ್ರಾ ಕರಿಯಾ,ನಾರಾಯಣ ಗುರು ಸಂಘದ ಅಧ್ಯಕ್ಷರಾದ ಗೋಪಾಲ್ ಬಂಗೇರ,ಪ್ರಮುಖರಾದ ವಿಠ್ಠಲ್ ಸಾಲಿಯಾನ್, ಸುನಿಲ್ ಕುಳಾಯಿ, ಯೋಗೀಶ್ ಸನಿಲ್ ಕುಳಾಯಿ. ನಿಶಿತ್ ಕುಳಾಯಿ, ಹರ್ಷಿತ್, ದೇವರಾಜ್, ಯಶಪಾಲ್ ಸಾಲಿಯಾನ್, ರವಿ ಉಪಾಧ್ಯಾಯ, ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.