9:36 AM Friday2 - January 2026
ಬ್ರೇಕಿಂಗ್ ನ್ಯೂಸ್
6322 ಪರಿಶಿಷ್ಟ ಕುಟುಂಬಗಳಿಗೆ ಕೊಳವೆಬಾವಿ ಭಾಗ್ಯ: ಕಾಮಗಾರಿ ಚುರುಕುಗೊಳಿಸಲು ನೀರಾವರಿ ಸಚಿವರ ಖಡಕ್… Kodagu | ಸೋಮವಾರಪೇಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆ: ಕೋವಿ ಸಹಿತ ಮೂವರ… ಕೋವಿಡ್ ಸಾವು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ: ಸರಕಾರಕ್ಕೆ ಅಂತಿಮ ವರದಿ… ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ… ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇತ್ತೀಚಿನ ಸುದ್ದಿ

ಬಿಗ್ ಬಾಸ್ ಮನೆಗೆ ಹುಲಿವೇಷದ ತಂಡ ಎಂಟ್ರಿ!: ಟೈಗರ್ ಡ್ಯಾನ್ಸ್ ಮಾಡುತ್ತಾ ಸ್ವಾಗತಿಸಿದ ನಟ ರೂಪೇಶ್ ಶೆಟ್ಟಿ!!

28/12/2022, 17:12

ಮಂಗಳೂರು(reporterkarnataka.com): ಬಿಗ್​ ಬಾಸ್​ ಸೀಸನ್​ 9 ಸೀಸನ್ ರ ಫಿನಾಲೆಗೆ ಇನ್ನು ಕೆಲವೇ ಕೆಲವು ದಿನಗಳು ಉಳಿದಿರುವಾಗ ಬಿಗ್ ಬಾಸ್ ಮತ್ತಷ್ಟು ಜನರ ಮನಗೆಲ್ಲಲಾರಂಭಿಸಿದೆ. ಇದರ ನಡುವೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಫಿನಾಲೆಗೆ ಇನ್ನೂ ಕೆಲ ದಿನಗಳು ಬಾಕಿ ಇರುವಾಗಲೇ ಸ್ಪರ್ಧಿಗಳಿಗೆ ಹೊಸ ಹೊಸ ಟ್ವಿಸ್ಟ್ ಸಿಗ್ತಾ ಇದೆ. ತಮ್ಮ ಅಚ್ಚುಮೆಚ್ಚಿನವರು ದೊಡ್ಮೆಗೆ ಎಂಟ್ರಿ ಆಗ್ತಾ ಇರುವ ಹೊತ್ತಿನಲ್ಲಿ ಬಿಗ್ ಬಾಸ್ ಮನೆಗೆ ತುಳುನಾಡಿನ ಹುಲಿಕುಣಿತ ತಂಡವು ಪ್ರವೇಶ ಆಗಿರುವುದು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡ್ತಾ ಇದೆ. ಹುಲಿಕುಣಿತ ತಂಡದ ಹುಲಿವೇಷಧಾರಿಗಳು ಎಂಟ್ರಿ ಆಗ್ತಾ ಇದ್ದಂತೆ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ಕುಣಿಯುತ್ತಲೇ ಬಂದು ತಂಡವನ್ನು ಸ್ವಾಗತಿಸಿದರು. ರೂಪೇಶ್ ಶೆಟ್ಟಿ ಅವರಿಗೆ ಹುಲಿಕುಣಿತದ ತಂಡ ನೋಡಿ ಭರ್ಜರಿ ಸ್ಪೆಪ್ಸ್ ಹಾಕಿಯೇ ಬಿಟ್ಟರೂ ಉಳಿದ ಸ್ಪರ್ಧಿಗಳು ಕೂಡ ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿದ್ದು ಕಂಡು ಬಂತು.

ಕರಾವಳಿ ಭಾಗದಲ್ಲಿ ವಿಶಿಷ್ಟ ಛಾಪು ಮುಡಿಸಿರುವ ಹುಲಿವೇಷ ಕುಣಿತವು ತುಳುನಾಡಿನ ಹೆಮ್ಮೆಯೆಂದೆ ಹೇಳಬಹುದು. ಬಿಗ್ ಬಾಸ್ ಮನೆಯಲ್ಲಿ ಹುಲಿ ವೇಷಧಾರಿಗಳು ತಮ್ಮ ಕುಣಿತದ ಪಟ್ಟು, ಚಳಕ ತೋರಿಸಿದ್ದು ಕರಾವಳಿಯ ವೈಶಿಷ್ಟ್ಯವನ್ನು ಹೆಚ್ಚಿಸಿದಂತೆ ಆಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು