1:37 PM Tuesday2 - June 2026
ಬ್ರೇಕಿಂಗ್ ನ್ಯೂಸ್
ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ ಅಣ್ಣಾಮಲೈ ನಡೆ; ಬಿಜೆಪಿಗೆ ಶುರುವಾಯ್ತು ಢವ ಢವ ನಾವು ಪಕ್ಷನಿಷ್ಠರು, ಜಮೀರ್‌ ವಿರುದ್ದ ಬೃಹತ್‌ ಷಡ್ಯಂತ್ರ: ವೈರಲ್‌ ಆಡಿಯೋ ಬಗ್ಗೆ ಸಿರಾಜ್‌… ಪಕ್ಷ ವಿರೋಧಿ ಕೃತ್ಯಕ್ಕೆ ಸಿಕ್ತು ಸಾಕ್ಷ್ಯ: ಜಮೀರ್ ಅಹ್ಮದ್ ಸ್ಫೋಟಕ ಆಡಿಯೋ ವೈರಲ್ ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಇದ್ದೊಬ್ಬ ಒಬಿಸಿ ಸಿಎಂ ಕೆಳಗಿಳಿಸಿ ಅಪಮಾನ: ಮಂಗಳೂರಿನಲ್ಲಿ ಕೇಂದ್ರ… Kodagu | ಕುಶಾಲನಗರ: 15 ದಿನದೊಳಗೆ ದುಷ್ಕರ್ಮಿಗಳ ಗುಂಡೇಟಿಗೆ 2 ಕಾಡು ಕೋಣಗಳು… ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: ಭಾರತಕ್ಕೆ ಸಿಹಿಸುದ್ದಿ ಕೊಟ್ಟ ಇರಾನ್; 10 ಇಂಡಿಯನ್ ನಾವಿಕರ… Kerala | ಮಾಜಿ ಸಿಎಂ ಪಿಣರಾಯಿ ಮನೆ ಎದುರು ಇ.ಡಿ ವಾಹನಗಳ ಮೇಲೆ… Bangalore | ಐಪಿಎಲ್ ಬೆಟ್ಟಿಂಗ್ ವಿರುದ್ಧ ಸಿಸಿಬಿ ಭರ್ಜರಿ ಕಾರ್ಯಾಚರಣೆ: 23 ಜನ… ಕಾಂಗ್ರೆಸ್‌ ಹೈಡ್ರಾಮಾಕ್ಕೆ ವಿಜಯೇಂದ್ರ ವ್ಯಂಗ್ಯ: ಸಿದ್ದರಾಮಯ್ಯ ಬಿಟ್ಟು ಯಾರೇ ಸಿಎಂ ಆದ್ರೂ ಅದು… ಬೆಂಗಳೂರಿಗೆ ಮಹಾಮಾರಿ ಎಬೋಲಾ ಎಂಟ್ರಿ?: ಉಗಾಂಡದ ಮಹಿಳೆ ಐಸೋಲೇಷನ್‌ನಲ್ಲಿ..!

ಇತ್ತೀಚಿನ ಸುದ್ದಿ

ಬಿಜೆಪಿ ಸಖ್ಯಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಗುಡ್ ಬೈ: ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಸ್ಥಾಪನೆ

25/12/2022, 14:17

ಬೆಂಗಳೂರು(reporterkarnataka.com): ಮಾಜಿ ಸಚಿವ, ಗಣಿ ದೊರೆ ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಸ್ಥಾಪನೆಯ ಬಗ್ಗೆ ಘೋಷಿಸಿದ್ದಾರೆ. ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ಅವರು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ಎಂಬ ಹೊಸ ಪಕ್ಷವನ್ನು ಆರಂಭಿಸಲಾಗುವುದು ಎಂದು ಪ್ರಕಟಿಸಿದ್ದಾರೆ.

ಹಲವು ತಿಂಗಳಿನಿಂದ ಬಿಜೆಪಿ ಒಡನಾಟದಿಂದ ಬಹಳ ದೂರವೇ ಉಳಿದಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಬಿಜೆಪಿ ತ್ಯಜಿಸುತ್ತಾರೆ ಎಂದು ಈ ಹಿಂದೆಯೇ ರಾಜಕೀಯ ವೀಕ್ಷಕರು ಲೆಕ್ಕಾಚಾರ ಹಾಕಿದ್ದರು. ಹಾಗಾಗಿ ಇದು ಬಿಜೆಪಿ ಪಾಲಿಗೆ ಅಚ್ಚರಿಯ ವಿಷಯವಾಗಿ ಉಳಿದಿರಲಿಲ್ಲ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ
ಅವರು, ಬಿಜೆಪಿಗಾಗಿ ಸಾಕಷ್ಟು ದುಡಿಮೇ ಮಾಡಿದ್ದೇನೆ. ಕಷ್ಟದ ದಿನಗಳಲ್ಲಿ ನನ್ನ ಬೆಂಬಲಕ್ಕೆ ಯಾರೂ ಕೂಡ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಮೊದಲ ಬಾರಿಗೆ ಜೆಡಿಎಸ್– ಬಿಜೆಪಿ ಸಮಿಶ್ರ ಸರ್ಕಾರ ತರುವುದರಲ್ಲಿ ನನ್ನದೇ ಹೆಚ್ಚು ಪಾತ್ರ ಇತ್ತು. ಆದರೆ ಜೈಲಿಗೆ ಹೋದಾಗ ಯಾರೂ ಕೂಡ ನನ್ನ ಬೆಂಬಲಕ್ಕೆ ಬಾರದೇ ಇರುವುದು ತೀವ್ರ ನೋವು ತಂದಿದೆ ಎಂದರು.

ಶ್ರೀರಾಮುಲು ನನ್ನ ಸಹೋದರ ಸಮಾನರು. ಈಗ ಬಿಜೆಪಿಯಲ್ಲಿ ಇದ್ದಾರೆ. ನಮ್ಮ ಹೊಸ ಪಕ್ಷಕ್ಕೆ ಬರುವಂತೆ ಅವರ ಮೇಲೆ ಎಂದಿಗೂ ಒತ್ತಡ ಹಾಕಲ್ಲ. ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಅವರಿಗೆ ಇದೆ. ಜನಾರ್ದನ ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಂಧವೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡಿದ್ದಾರೆ. ಅವರು ಯಾಕೇ ಹೀಗೆ ಹೇಳಿದರೂ ಎಂದು ನನಗೆ ಗೊತ್ತಿಲ್ಲ. ಅವರ ಹೇಳಿಕೆಯಿಂದ ನನ್ನ ಮನಸ್ಸಿಗೆ ತುಂಬಾ ಘಾಸಿಯಾಯಿತು. ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಅನ್ಯಾಯವಾಗಿದೆ. ಕಷ್ಟದ ಜತೆಗೆ ನನ್ನ ಜತೆಗೆ ಇದ್ದ ಪತ್ನಿ ಲಕ್ಷ್ಮಿ ಅರುಣಾ ಹೊಸ ಪಕ್ಷ ಮುನ್ನಡೆಸುವಲ್ಲಿ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ಇದೆ. ಶೀಘ್ರವೇ ಹೊಸ ಪಕ್ಷದ ಚಿಹ್ನೆ ಹಾಗೂ ಬಾವುಟವನ್ನು ಅಂತಿಮಗೊಳಿಸಲಾಗುತ್ತದೆ ಎಂದು ಜನಾರ್ದನ ರೆಡ್ಡಿ ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು