1:28 AM Sunday2 - August 2026
ಬ್ರೇಕಿಂಗ್ ನ್ಯೂಸ್
ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ ಕಾವೇರಿ ನೀರು ಹಂಚಿಕೆ ವಿವಾದ | ಕಾನೂನು ತಜ್ಞರು, ಪ್ರತಿಪಕ್ಷಗಳ ಸಲಹೆ ಬಳಿಕ… ಮಂಗಳೂರು ಪೊಲೀಸರಿಂದ ಸುಮಾರು 82 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 157… ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!! ಅಸ್ಸಾಂ ಪ್ರವಾಹ ಕೊಂಚ ಇಳಿಮುಖ: 70ಕ್ಕೂ ಅಧಿಕ ಸಾವು; 4.45 ಲಕ್ಷಕ್ಕೂ ಹೆಚ್ಚು… Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು… Bangalore | ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಸತೀಶ್ ಬೈಕಂಪಾಡಿ ಸೇರಿ 4 ಮಂದಿ ಆರೋಪಿಗಳಿಗೆ…

ಇತ್ತೀಚಿನ ಸುದ್ದಿ

ಜನರ ರಕ್ಷಣೆ, ಸಮಾಜದಲ್ಲಿನ ಬೇಕು ಬೇಡಗಳಿಗೆ ಪೋಲೀಸ್ ಇಲಾಖೆ ದಕ್ಷತೆಯಿಂದ ಶ್ರಮಿಸುತ್ತಿದೆ: ಎಸಿಪಿ ನಟರಾಜ್

04/07/2021, 21:36

ಸುರತ್ಕಲ್(reporterkarnataka news): ಸರಕಾರಿ ಇಲಾಖೆಯಲ್ಲಿ ಅತಿ ಪಾರದರ್ಶಕತೆ ಹಾಗೂ ನೇಮಕಾತಿಯಲ್ಲಿ ಪೋಲೀಸ್ ಇಲಾಖೆಯು ಅತ್ಯಂತ ನಿಷ್ಠೆ, ಪ್ರಾಮಾಣಿಕತೆಯ ಇಲಾಖೆಯಾಗಿದೆ. ಜನರ ರಕ್ಷಣೆ ಮಾತ್ರವಲ್ಲದೇ ಸಮಾಜದಲ್ಲಿನ ಬೇಕುಬೇಡಗಳನ್ನು ಕೂಡಾ ಸರಿದೂಗಿಸುವಲ್ಲಿ ಪೋಲೀಸ್ ಇಲಾಖೆಯು ಅತ್ಯಂತ ದಕ್ಷವಾಗಿ ಶ್ರಮವಹಿಸುತ್ತಿವೆ ಎಂದು ಮಂಗಳೂರು ನಗರ ಸಂಚಾರಿ ವಿಭಾಗದ ಸಹಾಯಕ ಆಯುಕ್ತ ಎಮ್.ಎ ನಟರಾಜ್  ಹೇಳಿದರು. 

ಅವರು ಕಾಟಿಪಳ್ಳ ಅಭ್ಯುದಯ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಮಂಗಳಪೇಟೆ ಶ್ರೀಶಾರದಾ ಭಜನಾ ಮಂದಿರದಲ್ಲಿ ಆದಿತ್ಯವಾರದಂದು ಜರುಗಿದ ೧೯ ವರ್ಷದಿಂದ ೨೭ ವರ್ಷದ ಒಳಗಿನ ಯುವಕ- ಯುವತಿಯರಿಗೆ ನಾಗರಿಕ ಪೋಲೀಸ್ ಕಾನ್ಸ್ ಸ್ಟೇಬಲ್ ನೇಮಕಾತಿ ಉದ್ಯೋಗದ ಮಾಹಿತಿ ಶಿಬಿರವನ್ನು 

ಉದ್ಘಾಟಿಸಿ ಪೋಲೀಸ್ ಅಕಾಂಕ್ಷಿ ಅಭ್ಯರ್ಥಿಗಳಿಗೆ ಮಾಹಿತಿ ನೀಡುತ್ತಾ, ಪೋಲೀಸ್ ಇಲಾಖೆಯ ಎಸ್ ಐ, ಪಿಸಿ ಹುದ್ದೆಗಳಿಗೆ ಸೇರಲು ಈಗಾಗಲೇ  ರಾಜದಾದ್ಯಂತ ನೇಮಕಾತಿಗಳು ನಡೆಯುತ್ತಿದ್ದು ಯುವಜನಾಂಗಕ್ಕೆ ಇದು ಪೂರಕವಾಗಿದ್ದು ತಮ್ಮ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಮಾಜದಲ್ಲಿ ಅತ್ಯುನ್ನತ ಹುದ್ದೆಯನ್ನು ಪಡೆಯಲು ಸಾಧ್ಯವಾಗುವುದು ಪೋಲೀಸ್ ಇಲಾಖೆಯಲ್ಲಿ ಮಾತ್ರ ಎಂದು ಪೋಲೀಸ್ ಅಕಾಂಕ್ಷಿ ಯುವಸಮೂಹಕ್ಕೆ ನೇಮಕಾತಿಯ ಕುರಿತು ಮಾಹಿತಿ ನೀಡಿದರು. ಶಿಬಿರದಲ್ಲಿ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ವಾದಿರಾಜ್, ಗಣೇಶಪುರ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ಮನಪಾ ಸದಸ್ಯ ಲೋಕೇಶ್ ಬೊಳ್ಳಾಜೆ, ಸುರತ್ಕಲ್ ಪೊಲೀಸ್ ಠಾಣಾ ಎಸ್ ಐ ಚಂದ್ರಶೇಖರ್ ಉಪಸ್ಥಿತರಿದ್ದರು.

ಪೋಲೀಸ್ ನಾಗರಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನೇಮಕಗೊಂಡ ಸಿಬ್ಬಂದಿಗಳಾದ ಸುನೀಲ್, ವೆಂಕಟೇಶ್‌ ಮಾಹಿತಿ ಶಿಬಿರದಲ್ಲಿ ನೇಮಕಾತಿಯ ಕುರಿತು ಮಾಹಿತಿ ನೀಡಿದರು. ದೀಕ್ಷಿತ್‌ ಕುಲಾಲ್ ಸ್ವಾಗತಿಸಿದರು. ವಿಕಾಸ್ ಶೆಟ್ಟಿ ವಂದಿಸಿದರು.
ಭರತ್ ರಾಜ್ ಕುತ್ತೆತ್ತೂರು‌ ಕಾರ್ಯಕ್ರಮ ನಿರೂಪಿಸಿದರು

ಇತ್ತೀಚಿನ ಸುದ್ದಿ

ಜಾಹೀರಾತು