ಇತ್ತೀಚಿನ ಸುದ್ದಿ
ಮೂಡಿಗೆರೆ: ಬೃಹದಾಕಾರದ ಮರ ಬಿದ್ದು ಮನೆ ಸಂಪೂರ್ಣ ನಾಶ; ಮನೆ ಮಂದಿ ಪ್ರಾಣಾಪಯದಿಂದ ಪಾರು
14/12/2022, 11:36

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporter Karnataka@gmail.com
ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದ ಅರೆಕೊಡಿಗೆ ಸುಕಲಮಕ್ಕಿ ನರೇಂದ್ರ ಗೌಡ ರವರ ಮನೆಗೆ ರಾತ್ರಿ 12:30 ಸಮಯದಲ್ಲಿ ಬೃಹದಾಕಾರದ ಮರ ಒಂದು ಮನೆ ಮೇಲೆ ಬಿದ್ದು ಪರಿಣಾಮ ಮನೆ ಸಂಪೂರ್ಣ ನಗುಜ್ಜಾಗಿದೆ.
ಮನೆಯಲ್ಲಿದ್ದವರು ಅದೃಷ್ಟವಶಾತ್ ಸಾವಿನದವಡೆಯಿಂದ ಪಾರಾಗಿದ್ದಾರೆ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮಲೆನಾಡಿನದ್ಯಂತ ಜನಜೀವನ ಹಸ್ತವ್ಯಸ್ತವಾಗಿದೆ ಕಾಫಿ ಬತ್ತ ಮೊದಲಾದ ಬೆಳೆಗಳು ನೆಲಕೆಚ್ಚಿ ಹೋಗಿದ್ದು ರೈತರು ಕಂಗಾಲಾಗಿ ಹೋಗಿದ್ದಾರೆ ನಿರಂತರವಾಗಿ ಮಳೆಯಾಗುತ್ತಿದ್ದು ಇಂದು ಸುರಿದ ಮಳೆಗೆ ಮರ ಬಿದ್ದು ಈ ದುರಂತ ಸಂಭವಿಸಿದೆ