ಇತ್ತೀಚಿನ ಸುದ್ದಿ
ಶಾಲೆಗೆ ಲೆಗಿನ್ಸ್ ಧರಿಸಿಕೊಂಡು ಬಂದ ಶಿಕ್ಷಕಿಗೆ ಅವಮಾನ: ಮುಖ್ಯ ಶಿಕ್ಷಕಿ ವಿರುದ್ಧ ಶಿಕ್ಷಣಾಧಿಕಾರಿಗೆ ದೂರು
02/12/2022, 13:23

ಮಲಪ್ಪುರಂ(reporter Karnataka.com): ಲೆಗ್ಗಿನ್ಸ್ ಧರಿಸಿಕೊಂಡು ಶಾಲೆಗೆ ಬಂದ ಶಿಕ್ಷಕಿಯೊಬ್ಬರನ್ನು ಮುಖ್ಯ ಶಿಕ್ಷಕಿ ನಿಂದಿಸಿ ಅನುಚಿತವಾಗಿ ವರ್ತಿಸಿದ ಘಟನೆ ಮಲಪ್ಪುರಂ ಜಿಲ್ಲೆಯ ಎಡಪಟ್ಟದಲ್ಲಿ ನಡೆದಿದ್ದು, ನಿಂದನೆಗೊಳಗಾದ ಶಿಕ್ಷಕಿ ದೂರು ನೀಡಿದ್ದಾರೆ.
ಶಿಕ್ಷಕಿ ಸರಿತಾ ಅವರು 13 ವರ್ಷಗಳಿಂದ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಅವರು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸರಿತಾ ಅವರು ಮಿಸಸ್ ಕೇರಳ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ.
ಅವರು ಹಾಕಿದ ವಸ್ತ್ರ ನೋಡಿ ಮುಖ್ಯ ಶಿಕ್ಷಕಿ ರಾಮಲತಾ ‘ಶಿಕ್ಷಕಿ ಆಗಿ ಸರಿತಾ ಅವರೇ ಇಂತಹ ಬಟ್ಟೆ ಧರಿಸಿ ಶಾಲೆಗೆ ಬರುವಾಗ ಮಕ್ಕಳಿಗೆ ಶಿಸ್ತಿನ ಉಡುಪು ಧರಿಸಿ ಶಾಲೆಗೆ ಬನ್ನಿ ಎಂದು ಹೇಳುವುದು ಹೇಗೆ?’ ಎಂದು ಪ್ರಶ್ನಿಸಿದ್ದಾರೆ. ಮೊದಲಿಗೆ ಇದನ್ನು ತಮಾಷೆಯಾಗಿ ತೆಗೆದುಕೊಂಡ ಶಿಕ್ಷಕಿ ‘ಶಿಕ್ಷಕರಿಗೆ ಸಮವಸ್ತ್ರ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ರಾಮಲತಾ ‘ನಮ್ಮ ಶಾಲೆಯ ಹೆಣ್ಣು ಮಕ್ಕಳು ಕೂಡ ಇಂತಹ ಬಟ್ಟೆ ಧರಿಸಿ ಶಾಲೆಗೆ ಬರೋದಿಲ್ಲ. ಅವರ ಸಂಸ್ಕೃತಿ ಅವರು ಹಾಕಿರೋ ಪ್ಯಾಂಟಿನಿಂದಲೇ ಗೊತ್ತಾಗುತ್ತೆ’ ಎಂದಿದ್ದಾರೆ.
ಇದಕ್ಕೆ ಉತ್ತರಿಸಿದ ಸರಿತಾ ಸ ಅವರು ನಾನು ಸಭ್ಯವಾಗಿ ಬಟ್ಟೆ ಧರಿಸಿದ್ದೆ. ಇವರ ಆ ವರ್ತನೆ ನನ್ನನ್ನು ಮಾನಸಿಕ ಯಾತನೆಗೆ ದೂಡಿದೆ. ನಾನು ಹಾಕಿದ್ದ ಡ್ರೆಸ್ ನ ಫೋಟೋ ಸಮೇತ ದೂರು ನೀಡಿದ್ದೇನೆ. ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.