ಇತ್ತೀಚಿನ ಸುದ್ದಿ
ದಲ್ಲಾಳಿಗಳ ಕಾಟ: ಅಧಿಕಾರಿಗಳು ಮೌನ; ಸಾವಿರಾರು ಬೆಲೆಯ ರಸಗೊಬ್ಬರ ಖರೀದಿಸಿದರೆ ಮಾತ್ರ ಯೂರಿಯಾ!!
26/11/2022, 19:32

ರಾಹುಲ್ ಅಥಣಿ ಬೆಳಗಾವಿ
info.reporterkarnataka@gamil.com
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನದಿ ಇಂಗಳಗಾವ
ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ರಸಗೊಬ್ಬರ ಖರೀದಿಸಿದರೆ ಮಾತ್ರ ಯೂರಿಯಾ ನೀಡುತ್ತಿದ್ದಾರೆ ಎಂದು ರೈತರು ಅಳಲು ವ್ಯಕ್ತಪಡಿಸಿದ್ದಾರೆ.
ನಮಗೆ ಯೂರಿಯಾ ತರಲು ದುಡ್ಡು ಇಲ್ಲ ಸ್ವಾಮಿ!ಅದರ ಜೊತೆ ಸಾವಿರಾರು ರೂ ಬೆಲೆ ಬಾಳುವ ಕಳಪೆ ಗೊಬ್ಬರ ಖರೀದಿಸಬೇಕು. ಇಲ್ಲಂದ್ರೆ ಯೂರಿಯಾ ಕೊಡಲ್ಲ ಎಂದು ರೈತರು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.
ಯೂರಿಯಾ ಗೊಬ್ಬರ ಜೊತೆ ಕಳಪೆ ಗುಣಮಟ್ಟದ ರಾಸಾಯನಿಕ ಲಿಂಕ್ ಕಡ್ಡಾಯವಾಗಿದೆ. ದಲ್ಲಾಳಿಗಳ ಅಟ್ಟಹಾಸದಿಂದ
ರೈತರಿಗೆ ಪ್ರಾಣ ಸಂಕಟ ಉಂಟಾಗಿದೆ. ಇದರಿಂದ ನದಿ ಇಂಗಳಗಾವ ಗ್ರಾಮದಲ್ಲಿ ರೈತರಿಗೆ ಭಾರಿ ಅನ್ಯಾಯವಾಗಿದೆ.
ಅಥಣಿ ಪಟ್ಟಣ ಸೇರಿ ತಾಲೂಕಿನ ಹಲವು ಗ್ರಾಮಗಳಲ್ಲಿ ಇದೆ ಸಮಸ್ಯೆ ಇದೆ. ಅಧಿಕಾರಿಗಳೇ ಇಂತಹ ಹಣಧಾಹಿ ದಲ್ಲಾಳಿ ಹಾಗೂ ಕಂಪನಿಗಳಿಗೆ ಮುಗುದಾರ ಯಾವಾಗ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.