9:00 PM Monday30 - March 2026
ಬ್ರೇಕಿಂಗ್ ನ್ಯೂಸ್
ಕೌಟುಂಬಿಕ ಕಲಹ: ಭದ್ರಾ ಬಲದಂಡೆ ನಾಲೆ ಬ್ರಿಡ್ಜ್ ನಿಂದ ಹಾರಿ ಸೂಪರ್ ವೈಸರ್… ಗ್ಯಾಸ್ ಸಿಲಿಂಡರ್ ಗೆ ರೆಗ್ಯುಲೇಟರಿ ಅಳವಡಿಸುವಾಗ ಏಕಾಏಕಿ ಸ್ಫೋಟ: ಮನೆ ಛಿದ್ರಛಿದ್ರ; 4… ಭಕ್ತ ಸಾಗರದ ಹರ್ಷೋದ್ಗಾರದೊಂದಿಗೆ ನಡೆದ ನಂಜನಗೂಡಿನ ದೊಡ್ಡ ಜಾತ್ರೆ: ಶ್ರೀ ಗೌತಮ ಪಂಚ… ನಿಯಂತ್ರಣ ತಪ್ಪಿದ ಸರಕಾರಿ ಬಸ್: ಮಡಿಕೇರಿ ಬಸ್ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ Madikeri | ಕೊಡಗು ಜಿಲ್ಲೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಎಂ.… Kodagu | ಶನಿವಾರಸಂತೆ: ಟ್ರ್ಯಾಕ್ಟರ್ -ಕಾರು ಅಪಘಾತ; ಟ್ರ್ಯಾಕ್ಟರ್ ಚಾಲಕ ಸಾವು ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ… ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರಕಾರಿ ಶುಶ್ರೂಷಾ ಕಾಲೇಜು 2ನೇ ಘಟಿಕೋತ್ಸವ ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ… ಕೈ ನಾಯಕರ ಸಂಧಾನ ಯಶಸ್ವಿ: ದಾವಣಗೆರೆ ದಕ್ಷಿಣ ಬಂಡಾಯ ಅಭ್ಯರ್ಥಿ ಪೈಲ್ವಾನ್ ಸ್ಪರ್ಧೆಯಿಂದ…

ಇತ್ತೀಚಿನ ಸುದ್ದಿ

ಉಡುಪಿ: ಹೊಮ್ ನರ್ಸ್ ನಿಂದ ವೃದ್ಧೆಯ 1.45 ಲಕ್ಷ ರೂ ಮೌಲ್ಯದ ಚಿನ್ನದ ಸರ ಕಳವು

26/11/2022, 17:33

ಉಡುಪಿ(reporterkarnataka.com): ವಯೋವೃದ್ಧರೊಬ್ಬರ ನೋಡಿಕೊಳ್ಳಲು ನೇಮಿಸಿದ್ದ ಹೋಮ್ ನರ್ಸ್ ವೋರ್ವಳು, ವೃದ್ಧೆಯ ಕುತ್ತಿಗೆಯಲ್ಲಿದ್ದ 1.45 ಲಕ್ಷ ಮೌಲ್ಯದ ಚಿನ್ನದ ಸರ ಕಳವು ಮಾಡಿಕೊಂಡು ಪರಾರಿಯಾದ ಘಟನೆ ಉಡುಪಿ ತಾಲೂಕಿನ ಆತ್ರಾಡಿ ಗ್ರಾಮದ ಮದಗ ಎಂಬಲ್ಲಿ ನಡೆದಿದೆ.

ಮದಗದ ಚೆನ್ನಿಬೆಟ್ಟು ನಿವಾಸಿ ವಸಂತ ಶೆಟ್ಟಿ ಅವರು ತಮ್ಮ 98 ವರ್ಷದ ತಾಯಿ ಸರಸ್ವತಿ ಅವರ ಆರೈಕೆ ಮಾಡಿ ನೋಡಿಕೊಳ್ಳಲು ಉಡುಪಿ ಉಷಾ ಮ್ಯಾರೇಜ್ ಬ್ಯುರೋ & ಜಾಬ್ ಲಿಂಕ್ಸ್ ಏಜೆನ್ಸಿ ಮುಖಾಂತರ ರೇಖಾ ಹೆಬ್ಬಳ್ಳಿ ಎಂಬಾಕೆಯನ್ನು ಹೋಂ ನರ್ಸ್ ಆಗಿ ನೇಮಿಸಿದ್ದರು.

ಅಕ್ಟೋಬರ್ 20 ರಿಂದ ರೇಖಾ ಹೆಬ್ಬಳ್ಳಿ, ಸರಸ್ವತಿ ಅವರ ಆರೈಕೆ ಮಾಡಿ ನೋಡಿಕೊಂಡಿದ್ದರು. ನ.21 ರಂದು ಸಂಜೆ ವೇಳೆ ರೇಖಾ ಹೆಬ್ಬಳ್ಳಿ ಯಾರಿಗೂ ಹೇಳದೇ ಮನೆಯಿಂದ ಹೋಗಿದ್ದಳು. ಬಳಿಕ ವಸಂತ ಶೆಟ್ಟಿ ಅವರು ತಾಯಿಯ ಬಳಿ ಹೋಗಿ ನೋಡಿದಾಗ ಅವರ ಕುತ್ತಿಗೆಯಲ್ಲಿದ್ದ 1,45, ಲಕ್ಷ ರೂ. ಮೌಲ್ಯದ ಚಿನ್ನದ ಚೈನ್ ಕಂಡು ಬಂದಿಲ್ಲ. ಈ ಬಗ್ಗೆ ರೇಖಾಳಿಗೆ ಫೋನ್ ಮಾಡಿದಾಗ ಆಕೆಯು ಫೋನ್ ಸ್ವೀಕರಿಸುತ್ತಿರಲಿಲ್ಲ. ತಾಯಿ ಚೈನ್ ಅನ್ನು ರೇಖಾ ಅವರೇ ಕಳವು ಮಾಡಿಕೊಂಡು ಹೋಗಿರುವ ಸಂಶಯ ಇದೆ ಎಂದು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು