9:05 PM Saturday22 - August 2026
ಬ್ರೇಕಿಂಗ್ ನ್ಯೂಸ್
ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್…

ಇತ್ತೀಚಿನ ಸುದ್ದಿ

ಭಯೋತ್ಪಾಕರ ಬಹಿಷ್ಕರಿಸಿ ಸಮುದಾಯದ ಎಲ್ಲ ಸವಲತ್ತುಗಳಿಂದ ದೂರ ಇಡಬೇಕು: ಶಾಸಕ ಡಾ.ಭರತ್ ಶೆಟ್ಟಿ

25/11/2022, 10:51

ಮಂಗಳೂರು(reporterkarnataka.com): ಮಂಗಳೂರಿನಲ್ಲಿ ನಡೆದ ಉಗ್ರರ ಕೃತ್ಯವನ್ನು ಮುಸ್ಲಿಂ ಜಮಾತ್ ಗಳು ,ಮುಸ್ಲಿಂ ಮುಖಂಡರು ಖಂಡಿಸುವ ಮತ್ತು
,ಇಂತಹ ಕೃತ್ಯಗಳಿಗಾಗಿ ಮುಸ್ಲಿಂ ಯುವಕರ ತಲೆಯಲ್ಲಿ ಮತಾಂಧತೆಯನ್ನು ತುಂಬಿಸಿ ಉಗ್ರ ಕೃತ್ಯ ನಡೆಸಲು ಹಣಕಾಸು ನೀಡುವ ,ಬೆಂಬಲ ನೀಡಿದ ಜನರನ್ನು ಹಾಗೂ ಸಂಘಟನೆಗಳನ್ನು ಬಹಿಷ್ಕರಿಸಿ ದೂರವಿಡುವ ಮೂಲಕ ದೇಶದ ಹಿತಕ್ಕಾಗಿ ಎನ್ ಐ ಎ ಜತೆ ಉಗ್ರ ನಿರ್ಮೂಲನಕ್ಕೆ ಸಹಕರಿಸಬೇಕಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಒತ್ತಾಯಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಸ್ಪೋಟಕ್ಕೆ ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್ ಹೊಣೆ ಹೊತ್ತಿದೆ. ಸರಕಾರ ಉಗ್ರ ನಿಗ್ರಹಕ್ಕೆ ಬೇಕಾದ ಕ್ರಮ ಕೈಗೊಳ್ಳುತ್ತದೆ.
ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಸಮುದಾಯದ ನಾಯಕರು ಗುರುತಿಸಿ ಮಾಹಿತಿ ನೀಡಿ ಇಂತಹ ಕೃತ್ಯ ಮುಂದೆ ನಡೆಯದಂತೆ ಎಚ್ಚೆತ್ತುಕೊಳ್ಳಬೇಕು.

“ಸಾಮರಸ್ಯ, ಭ್ರಾತೃತ್ವ ಕೇವಲ ಬಾಯಿ ಮಾತಾಗದಿರಲಿ. ಆಡಿದ್ದನ್ನು ಮಾಡಿ ತೋರಿಸುವ ಗುಣವೂ ಇರಬೇಕಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೆ ಜಿ ಹಳ್ಳಿ,ಡಿ ಜೆ ಹಳ್ಳಿ ಘಟನೆ ನಡೆದಾಗಲೇ ಎಚ್ಚೆತ್ತುಕೊಂಡು
ಮುಸ್ಲಿಂ ಮುಖಂಡರು ಸಮುದಾಯದಲ್ಲಿ ಮತಾಂಧತೆಯನ್ನು ಹೆಚ್ಚಿಸಿಕೊಂಡು ದಾರಿ ತಪ್ಪಿದ , ಭಯೋತ್ಪಾದನೆಯಲ್ಲಿ ನಿರತವಾಗಿರುವವರ ಗೌಪ್ಯ ಮಾಹಿತಿನ್ನು ಎನ್ ಐ ಎ ಗೆ ನೀಡಬೇಕಿತ್ತು.
ಇದನ್ನು ಸಮುದಾಯ ನಿರ್ಲಕ್ಷಿಸಿದ್ದರಿಂದಲೇ ಮಂಗಳೂರು ಘಟನೆ ನಡೆಯಲು ಕಾರಣವಾಗಿದೆ.

ದೇಶ, ವಿದೇಶದಿಂದ ಹಣ ಪಡೆದು, ಭಯೋತ್ಪಾದನೆಯನ್ನು ನಡೆಸುತ್ತಿರುವುದರ ಘಟನೆಗಳನ್ನು ಸಮುದಾಯದ ನಾಯಕರು ಗಂಭೀರವಾಗಿ ಪರಿಗಣಿಸದೆ ಇದ್ದ ಪರಿಣಾಮ ಮಂಗಳೂರಿನಲ್ಲಿ ಭಾರೀ ಅನಾಹುತದ ಸಂಚು ರೂಪಿತವಾಗಿದೆ ಎಂದು ಡಾ.ಭರತ್ ಶೆಟ್ಟಿ ವೈ ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು