ಇತ್ತೀಚಿನ ಸುದ್ದಿ
ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರೇಲರ್ ಗೆ ಬೆಂಕಿ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಬಾರಿ ಅನಾಹುತ
19/11/2022, 20:23

ರಾಹುಲ್ ಅಥಣಿ ಬೆಳಗಾವಿ
info.reporter Karnataka@gmail.com
ಚಾಲಕನ ಸಮಯ ಪ್ರಜ್ಞೆಯಿಂದ ಬಾರಿ ಅಗ್ನಿ ಅವಘಡ ತಪ್ಪಿದಂತಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲುಗಬಾಳಿ ಗ್ರಾಮದಿಂದ ಉಗಾರ್ ಸಕ್ಕರೆ ಕಾರ್ಖಾನೆ ಕಬ್ಬು ಸಾಗಾಟದ ಸಮಯದಲ್ಲಿ ಕಾರ್ತಾಳ ಗ್ರಾಮದ ಹೊರವಲಯದಲ್ಲಿ ಆಕಸ್ಮಿಕವಾಗಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರೇಲರ್ ಗೆ ಬೆಂಕಿ ಬಿದ್ದ ಪರಿಣಾಮವಾಗಿ ದಟ್ಟವಾದ ಹೊಗೆ ಬೆಂಕಿ ಕಾಣಿಸಿಕೊಂಡು ದಾರಿ ಉದ್ದಕ್ಕೂ ವಾಹನ ಸವಾರರಿಗೆ ಕೆಲವು ಕಾಲ ಆತಂಕಕ್ಕೆ ಕಾರಣವಾಗಿತ್ತು. ಟ್ರಾಕ್ಟರ್ ಚಾಲಕನ ಸಮಯ ಪ್ರಜ್ಞೆಯಿಂದ ಬಯಲು ಪ್ರದೇಶದಲ್ಲಿ ಬೆಂಕಿ ತಗುಲಿದ ಟ್ರೇಲರ್ ಕೆಳಗೆ ಕೆಡವಿ ಟ್ರಾಕ್ಟರ್ ರಕ್ಷಣೆ ಮಾಡಿಕೊಂಡಿದ್ದಾನೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.