8:24 AM Wednesday24 - September 2025
ಬ್ರೇಕಿಂಗ್ ನ್ಯೂಸ್
Kodagu | ವಿರಾಜಪೇಟೆ, ಕುಶಾಲನಗರ ಮತ್ತು ಹುದಿಕೇರಿ ಆಸ್ಪತ್ರೆ ಮೇಲ್ದರ್ಜೆಗೆ: ಆರೋಗ್ಯ ಸಚಿವ… ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಮಹಿಳೆಯರ ಬದುಕು ಸುಧಾರಣೆ: ಮಹಿಳಾ ದಸರಾ ಉದ್ಘಾಟಿಸಿ… ಪೊನ್ನಂಪೇಟೆ ಕೋಣಗೇರಿಯಲ್ಲಿ ಸೈನಿಕ ಪತಿಯಿಂದಲೇ ಪತ್ನಿಗೆ ಗುಂಡು: ಮೈಸೂರಿಗೆ ರವಾನೆ ಗೋಣಿಕೊಪ್ಪಲು ಬಿಟ್ಟಂಗಾಲ ಮುಖ್ಯರಸ್ತೆಯಲ್ಲಿ ಖಾಸಗಿ ಬಸ್ – ಜೀಪು ಅಪಘಾತ: ಅದೃಷ್ಟವಶಾತ್ ಎಲ್ಲರೂ… Kodagu | ಐತಿಹಾಸಿಕ ಮಡಿಕೇರಿ ದಸರಾಕ್ಕೆ ಚಾಲನೆ: 4 ಶಕ್ತಿ ದೇವತೆಗಳಿಗೆ ವಿಶೇಷ… ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಸರ್ಕಾರದಿಂದ 6 ಕೋಟಿ ನಗದು ಬಹುಮಾನ: ಮುಖ್ಯಮಂತ್ರಿ… ಜಿಎಸ್ ಟಿ ಜಾರಿ ಮಾಡಿದ್ದೂ ಮೋದಿ, ಜಿಎಸ್ ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ,… ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ

ಇತ್ತೀಚಿನ ಸುದ್ದಿ

ಸುರತ್ಕಲ್ ಟೋಲ್ ತೆರವಿಗೆ ಅಹೋರಾತ್ರಿ ಹೋರಾಟ ನಡೆದಾಗ ಶಾಸಕ ಭರತ್ ಶೆಟ್ಟಿ ಎಲ್ಲಿದ್ರು?: ಯು.ಟಿ. ಖಾದರ್

16/11/2022, 21:47

ಮಂಗಳೂರು(reporter Karnataka.com): ಕೇಂದ್ರದಲ್ಲಿ 8 ವರ್ಷಗಳಿಂದ ಬಿಜೆಪಿ ಸರಕಾರವಿದೆ. ದ.ಕ., ಉಡುಪಿಯಲ್ಲಿ ಅವರದ್ದೇ ಸಂಸದರಿದ್ದಾರೆ. ಸುರತ್ಕಲ್ ಟೋಲ್ ತೆರವಿಗೆ ಆಗ್ರಹಿಸಿ ಜನರು ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವಾಗ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಎಲ್ಲಿದ್ದರು ಎಂದು ಪ್ರತಿಪಕ್ಷದ ಉಪ ನಾಯಕ ಯು.ಟಿ. ಖಾದರ್ ಪ್ರಶ್ನಿಸಿದರು.

ಯು.ಟಿ. ಖಾದರ್ ಮಂತ್ರಿ ಆಗಿದ್ದಾಗ ಏನು ಮಾಡಿದ್ದಾರೆ ಎಂಬ ಶಾಸಕ ಭರತ್ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಖಾದರ್,ಪಾಪ ಭರತ್ ಶೆಟ್ಟಿ ಹೇಳಿಕೆಗೆ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ನೀಡಲ್ಲ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಮಾತನಾಡುವಾಗ ಆಲೋಚನೆ ಮಾಡಲಿ, ಇದರ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ನಾನೇ ಮಾತುಕತೆ ಮಾಡಿದ್ದೆ. ಎಂಟು ವರ್ಷ ಇವ್ರು ಏನು ಮಾಡಿದ್ದಾರೆ…? ಮಂಗಳೂರಿನ ಜನ ಅಹೋರಾತ್ರಿ ಹೋರಾಟ ಮಾಡುವಾಗ ಇವರು ಎಲ್ಲಿ ಇದ್ರು ಎಂದರು.

ಸುರತ್ಕಲ್ ಟೋಲ್‌ಗೇಟ್ ತೆರವು ಆಗಿಲ್ಲ. ಕೇವಲ ಶಿಫ್ಟ್ ಆಗಿದೆಯಷ್ಟೆ. ಇದು ಮಂಗಳೂರಿನ ಜನತೆಯ ಯಶಸ್ಸು ಆಗಿದೆ. ಅಲ್ಲೇ ಮಲಗಿದವರಿಗೆ, ರಾತ್ರಿ ಹಗಲು ಊಟ ನಿದ್ದೆ ಬಿಟ್ಟು ಪ್ರತಿಭಟನೆ ಮಾಡಿದವರಿಗೆ, ಕೆಲಸ ಬಿಟ್ಟು ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ನಾವು ವಿಶೇಷವಾದ ಮಹತ್ವವನ್ನು ಕೊಡಬೇಕಾಗುತ್ತದೆ. ಇನ್ನು ಈ ಬಗ್ಗೆ ಸಂಸತ್ತಿನಲ್ಲಿ ಟೋಲ್ ಬಗ್ಗೆ ಮಾತನಾಡದವರು ಈಗ ಇದರ ರಾಜಕೀಯ ಲಾಭ ಪಡಿತಿದ್ದಾರೆ ಎಂದು ಖಾದರ್ ವ್ಯಂಗ್ಯವಾಡಿದರು.
ಟೋಲ್‌ಗೇಟ್ ರದ್ದು ಕುರಿತು ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ‘ಕೇಂದ್ರ ಸರ್ಕಾರ ಕೇವಲ ನೋಟಿಷಿಕೇಶನ್ ನೀಡಿದೆ ಎಂದು ನುಡಿದರು.

ಈ ಯೋಜನೆ 75 ಕೇಂದ್ರ ಸರ್ಕಾರ ಮತ್ತು ಎನ್ಎಂಪಿಟಿ ಜಂಟಿಯಲ್ಲಿ ಆಗಿದೆ. 130 ಕೋಟಿ ಟೋಲ್ ಇನ್ನೂ ಕೂಡಾ ಬರಬೇಕಿದೆ ಎಂಬುದು ಟೋಲ್ ನವರ ವಾದ. ಯಾರೋ ಒಬ್ಬನಿಗೆ ಎಷ್ಟು ಕೋಟಿಗೆ ಇವು ಟೋಲ್ ಟೆಂಡರ್ ಕೊಟ್ರು. 2013ರಲ್ಲಿ ಎಂಪಿ ಯಾರು, ಉಡುಪಿ ಎಂಪಿ ಯಾರು..? ಯಾಕೆ ಆಗ ಅವು ಧ್ವನಿ ಎತ್ತಲಿಲ್ಲ. ಯಾಕೆ ಎಂಪಿ ಎಂಎಲ್‌ಎ ಡೆಲ್ಲಿಗೆ ಹೋಗಿ ಕೂತಿಲ್ಲ. ಅವ್ರದ್ದು ಜನರ ಮನಸ್ಸನ್ನು ಹೊಡೆಯುವ ಕೆಲಸ ಮಾಡ್ತಾ ಹೋಗ್ತಾರೆ. ನಾವು ಕಟ್ಟುತ್ತಾ ಹೋಗುತ್ತೇವೆ’ ಎಂದು ಟೀಕಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು