3:10 AM Sunday11 - January 2026
ಬ್ರೇಕಿಂಗ್ ನ್ಯೂಸ್
ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್: ಎಎಪಿ ಯುವ ಘಟಕದಿಂದ ಸಹಿ ಸಂಗ್ರಹಣ…

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ ಸ್ಪರ್ಧೆ: ಮೈತ್ರಿ ಮಾದಗುಂಡಿ ಮತ್ತು ಹಾರ್ದಿಕಾ ಜೂನ್ ತಿಂಗಳ ಟಾಪರ್

02/07/2021, 08:06

ಮಂಗಳೂರು(reporterkarnataka news): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜೂನ್  ತಿಂಗಳ ಟಾಪರ್ ಆಗಿ ಬಾಲಪ್ರತಿಭೆ ಮೈತ್ರಿ ಎಸ್. ಮಾದಗುಂಡಿ ಹಾಗೂ ಹಾರ್ದಿಕಾ ಆಯ್ಕೆಗೊಂಡಿದ್ದಾರೆ.

ಬೇಲೂರಿನ ನಾಟ್ಯ ಶಾಂತಲೆ ಎಂದೇ ಖ್ಯಾತಳಾದ ಮೈತ್ರಿ ಎಸ್. ಮಾದಗುಂಡಿ ಡಾ.ಶಿವಕುಮಾರ ಮಾದಗುಂಡಿ ಹಾಗೂ ಶೃತಿ ಶಿವಕುಮಾರ ದಂಪತಿ ಪುತ್ರಿ. ನೃತ್ಯಾಂಜಲಿ ಕಲಾ ನಿಕೇತನ ನೃತ್ಯ ಶಾಲೆಯ ಶೈಲಜಾ ಕುಮಾರ್ ಅವರ ಬಳಿ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾಳೆ. ಹಾಗೆಯೇ  ಶ್ರೀವಿದ್ಯಾಅವರ ಬಳಿ ಸಂಗೀತ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಈಕೆ ಈಗಾಗಲೇ ವಿಶೇಷ ಸಾಧಕಿಯಾಗಿ ಗುರುತಿಸಿಕೊಂಡಿದ್ದಾಳೆ. ಬಹುಮುಖ ಪ್ರತಿಭೆಯಾದ ಈ ಪುಟ್ಟ ಪೋರಿ ನೃತ್ಯ ಮಾತ್ರವಲ್ಲದೆ ಸಂಗೀತ, ನಟನೆ, ನಿರೂಪಣೆಗೂ ಸೈ. 7ರ ಹರೆಯದ ಈ ಪೋರಿ ಜೂನಿಯರ್ ಬೇಬಿ ಶ್ಯಾಮಿಲಿ ಎಂದೇ ಖ್ಯಾತಿ ಪಡೆದಿದ್ದಾಳೆ. ಈಗಾಗಲೇ ಸುಮಾರು 187 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಕೊಟ್ಟಿರುವ ಅಪೂರ್ವ ಬಾಲ ಪ್ರತಿಭೆ. ರಾಜ್ಯ ಮಟ್ಟದಲ್ಲೂ, ರಾಷ್ಟ್ರೀಯ ಮಟ್ಟದಲ್ಲೂ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ.

 ಮೈತ್ರಿ  ಭರತನಾಟ್ಯ, ಪಾಶ್ಚಾತ್ಯ ನೃತ್ಯ, ಜಾನಪದ ನೃತ್ಯ ಮತ್ತು ಸಂಗೀತ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಆಯುಷ್ಯ ಟಿವಿ ಮತ್ತು ಶಂಕರ್ ಟಿವಿ ಆನ್‌ಲೈನ್‌ ಆಡಿಷನ್ ನಲ್ಲೂ ಭಾಗವಹಿಸಿದ್ದಾಳೆ. ದೂರದರ್ಶನದಲ್ಲಿ ಜಾನಪದ ಗೀತೆ ಪ್ರಸಾರಗೊಂಡಿದೆ. ವಾಯ್ಸ್ ಆಫ್ ಆರಾಧನಾ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಪೇಸ್ ಬುಕ್ ಲೈವ್ ನಲ್ಲಿ ಅನೇಕ ಬಾರಿ ಭಾಗವಹಿಸಿದ್ದಾಳೆ.


ನೃತ್ಯಕ್ಕೆ ಆಕೆಗೆ ಹಲವು ಪ್ರಶಸ್ತಿ- ಪುರಸ್ಕಾರಗಳ ಸಂದಾಯವಾಗಿದೆ. ಕರ್ನಾಟಕ  ಅಚಿವರ್ಸ್ ಬುಕ್ ಆಫ್ ರೆಕಾರ್ಡ್  ಈ ಪಟ್ಟಿಗೆ ಸೇರಿದ ಜಿಲ್ಲೆಯ ಪ್ರಪ್ರಥಮ ಭರತನಾಟ್ಯ ಕಲಾವಿದೆ ಈಕೆ ಆಗಿದ್ದಾಳೆ.

ಪದ್ಮಶ್ರೀ ಭಟ್ ಅವರಿಂದ ಸ್ಥಾಪನೆಗೊಂಡ ವಾಯ್ಸ್ ಆಫ್ ಆರಾಧನಾ ಸಂಸ್ಥೆ ಪರಿಚಯವಾಗಿ ಸುಮಾರು ಎರಡು ವರ್ಷಗಳ ಕಾಲ ಪ್ರತಿದಿನ ವಿವಿಧ ವಿಭಿನ್ನವಾದ ಟಾಸ್ಕ್ ಗಳಲ್ಲಿ ತಪ್ಪದೇ ಭಾಗವಹಿಸುತ್ತಾ ಬಂದಿದ್ದಾಳೆ.

ಮಂಗಳೂರಿನ ಹರೇಕಳದ ಹಾರ್ದಿಕಾ ಮಂಗಳೂರಿನ ರಾಮಕೃಷ್ಣ ಹೈಸ್ಕೂಲಿನ 10ನೇ ತರಗತಿ ವಿದ್ಯಾರ್ಥಿನಿ. ಭವನ್ ಕುಮಾರ್ ಹಾಗೂ ಸ್ಫೂರ್ತಿ ದಂಪತಿಯ ಪುತ್ರಿ. ಬಾಲ ಪ್ರತಿಭೆಯಾದ ಈಕೆ ಕೂಡ ಸಂಗೀತ ನೃತ್ಯ ಮತ್ತು ಚಿತ್ರಕಲೆಯಲ್ಲಿ ಎತ್ತಿದ ಕೈ.

ಇತ್ತೀಚಿನ ಸುದ್ದಿ

ಜಾಹೀರಾತು