ಇತ್ತೀಚಿನ ಸುದ್ದಿ
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಆಧಾರ್ ಕಡ್ಡಾಯ ಮಾಡಿದರೆ ದೂರು ದಾಖಲಿಸುವೆ: ಖಾದರ್ ಎಚ್ಚರಿಕೆ
16/11/2022, 18:57

ಮಂಗಳೂರು(reporterkarnataka.com): ಮತದಾರರ ಪಟ್ಟಿಗೆ ಹೆಸರು ಸೇರಿಸಲು ಆಧಾರ್ ಕಾರ್ಡ್ ಕಡ್ಡಾಾಯವಲ್ಲ ಎಂದು ಚುನಾವಣಾ ಆಯೋಗದ ಸ್ಪಷ್ಟ ನಿಯಮವಿದ್ದರೂ ತಳ ಮಟ್ಟದ ಅಧಿಕಾರಿಗಳು ಈ ಸೂಚನೆ ಪಾಲಿಸುತ್ತಿಲ್ಲ. ಆಧಾರ್ ಕಾರ್ಡ್ ನೀಡಲೇಬೇಕು ಎಂದು ಜನರಿಗೆ ಒತ್ತಡ ಹಾಕುತ್ತಿದ್ದಾಾರೆ. ಇದು ಮತದಾನದಿಂದ ಜನರನ್ನು ವಂಚಿಸುವ ಕೆಲಸ ಎಂದು
ಎಂದು ಪ್ರತಿಪಕ್ಷ ಉಪ ನಾಯಕ ಯು.ಟಿ.ಖಾದರ್ ಖೇದ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಿಷ್ಠ 6 ತಿಂಗಳು ಒಂದು ಕಡೆ ವಾಸ ಮಾಡುವ ನಿಗದಿತ ವಯೋಮಾನದ ವ್ಯಕ್ತಿಯನ್ನು ಚುನಾವಣಾ ಪಟ್ಟಿಯಲ್ಲಿ ಸೇರ್ಪಡೆ ಮಾಡಬಹುದು.
ಮುಂದೆಯೂ ಇದೇ ರೀತಿ ಆಧಾರ್ ಕಡ್ಡಾಾಯ ಎಂದು ಬಲವಂತ ಮಾಡಿದರೆ ಈ ಬಗ್ಗೆೆ ದೂರು ದಾಖಲಿಸಲಾಗುವುದು. ಅಧಿಕಾರಿಗಳು ಇರುವುದು ಮತದಾನದ ಹಕ್ಕನ್ನು ಕಸಿಯಲು ಅಲ್ಲ ಎಂದು ಎಚ್ಚರಿಸಿದರು.
ಸುರತ್ಕಲ್ ಟೋಲ್ ಗೇಟ್‌ನ್ನು ಹೆಜಮಾಡಿಗೆ ವಿಲೀನ ಮಾಡುವ ಬದಲು ರದ್ದು ಮಾಡಬಹುದಿತ್ತು. ಆದರೆ ಬಿಜೆಪಿ ನಾಯಕರಿಗೆ ಅದು ಸಾಧ್ಯವಾಗಿಲ್ಲ. ಆದರೆ ಇನ್ಮುಂದೆ ಹೆಜಮಾಡಿಯಲ್ಲಿ ಕೆಎ-೧೯ ವಾಹನಗಳಿಗೆ ಸುಂಕ ವಿನಾಯಿತಿ ನೀಡಲಿ. ಮಾತ್ರವಲ್ಲ, ಸುಂಕವನ್ನೂ ಕಡಿಮೆ ಮಾಡಲಿ ಎಂದು ಖಾದರ್ ಆಗ್ರಹಿಸಿದರು.
ಸುರತ್ಕಲ್ ಟೋಲ್‌ಗೇಟ್ ವಿಲೀನ ಆಗಿದ್ದರಿಂದ ಸ್ಥಳೀಯರಿಗೆ ಅನ್ಯಾಯವಾಗಿದೆ. ಸಂಬಂಧಿಸಿದ ಜನಪ್ರತಿನಿಧಿಗಳು ಕೇಂದ್ರ ಹೆದ್ದಾಾರಿ ಸಚಿವರಿಗೆ ಮನದಟ್ಟು ಮಾಡಿರುತ್ತಿದ್ದರೆ ಈ ಟೋಲ್ ರದ್ದೇ ಮಾಡಬಹುದಿತ್ತು. ಆದರೂ ವಿಲೀನ ನಿರ್ಧಾರ ಆಗಿರುವುದು ಮಂಗಳೂರು ಜನತೆಯ ಗೆಲುವು. ಆದರೆ ತಾವೇ ಮಾಡಿದ್ದೇವೆ ಎಂದು ಬಿಜೆಪಿ ಮುಖಂಡರು ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಹಾಲಿನ ದರವನ್ನು ೩ ರು. ಏರಿಸುವ ಕೆಎಂಎಫ್ ತೀರ್ಮಾನವನ್ನು ಮುಖ್ಯಮಂತ್ರಿ ಬೊಮ್ಮಾಾಯಿ ಮುಂದೂಡಿಕೆ ಮಾಡಿದ್ದಾರೆಯೇ ಹೊರತು ಹಾಲು ದರ ಏರಿಕೆ ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿಲ್ಲ. ಹಾಲಿನ ದರ ಏರಿಸುವುದಿಲ್ಲ ಎಂಬ ಸ್ಪಷ್ಟ ತೀರ್ಮಾನವನ್ನು ಸರ್ಕಾರ ಪ್ರಕಟಿಸಲಿ ಎಂದು ಆಗ್ರಹಿಸಿದರು.
ಹಾಲಿನ ದರ ಹೆಚ್ಚಳಕ್ಕೆೆ ಕಾಂಗ್ರೆೆಸ್‌ನ ಸ್ಪಷ್ಟ ವಿರೋಧವಿದೆ. ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಾಗ ಹೈನುಗಾರರಿಗೆ ೧ ಲೀಟರ್ ಹಾಲಿಗೆ ಸಬ್ಸಿಡಿ ಸೇರಿ ೩೮ ರು. ಸಿಗುತ್ತಿತ್ತು. ಜನರಿಗೆ ೩೮ ರು.ಗೆ ಹಾಲು ಸಿಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಹೈನುಗಾರರಿಗೆ ನಯಾಪೈಸೆ ಉಪಯೋಗವಾಗಿಲ್ಲ. ಆದರೆ ೧ ಲೀ.ಹಾಲಿನ ದರ ೪೮ ರು.ಗೆ ಏರಿಕೆಯಾಗಿದೆ. ಈ ಹೆಚ್ಚುವರಿ ೮ ರೂ. ಅಂದರೆ ತಿಂಗಳಿಗೆ ಸುಮಾರು ೩೦ ಕೋಟಿ ರೂ. ಎಲ್ಲಿಗೆ ಹೋಗುತ್ತಿದೆ ಎಂದು ಖಾದರ್ ಪ್ರಶ್ನಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಮಮತಾ ಗಟ್ಟಿ, ಕಾಂಗ್ರೆೆಸ್ ಮುಖಂಡ ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.