ಇತ್ತೀಚಿನ ಸುದ್ದಿ
ಗಂಗಾ ನದಿಯಲ್ಲಿ ರಾಶಿ ರಾಶಿ ಶವಪತ್ತೆ: ಕೋವಿಡ್ ರೋಗಿಗಳದ್ದು ಎಂಬ ಶಂಕೆ
12/05/2021, 17:56
ಫಾಜಿಪುರ
: ಉತ್ತರ ಪ್ರದೇಶದ ಘಾಜಿಪುರದ ಪವಿತ್ರ ಗಂಗಾ ನದಿ ತೀರದಲ್ಲಿ ರಾಶಿ ರಾಶಿ ಮೃತದೇಹಗಳು ಎರಡನೇ ದಿನವೂ ಪತ್ತೆಯಾಗಿದೆ.ಮಂಗಳವಾರ ಬಿಹಾರದ ಬಕ್ಸಾರ್ ನಿಂದ 55 ಕಿಮೀ. ದೂರದಲ್ಲಿ ರಾಶಿ-ರಾಶಿ ಮೃತದೇಹಗಳು ಪತ್ತೆಯಾಗಿತ್ತು. ಮೃತದೇಹಗಳು ಉತ್ತರ ಪ್ರದೇಶದಿಂದ ಬಂದಿದೆ ಎಂದು ನಿನ್ನೆ ಬಿಹಾರದ ಅಧಿಕಾರಿಗಳು ಹೇಳಿದ್ದರು.
ಕೋವಿಡ್ ಉತ್ತರ ಭಾರತದ ಗ್ರಾಮೀಣ ಭಾಗಗಳಲ್ಲಿ ವೇಗವಾಗಿ ಹರಡುತ್ತಿರುವುದರಿಂದ, ನದಿಯಲ್ಲಿರುವ ಶವಗಳು ಕೋವಿಡ್ ರೋಗಿಗಳದೆಂದು ಶಂಕಿಸಲಾಗಿದೆ. ಗ್ರಾಮೀಣ ಶವಾಗಾರಗಳಲ್ಲಿ ಯಾವುದೇ ಕೋವಿಡ್ ಪ್ರೋಟೋಕಾಲ್ ಗಳ ವ್ಯವಸ್ಥೆ ಇಲ್ಲ. ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಇಲ್ಲ. ಇದರಿಂದ ಗ್ರಾಮೀಣ ಜನ ಮೃತದೇಹಗಳನ್ನು ನದಿಗೆ ಎಸೆಯುತ್ತಿದ್ದಾರೆ ಎನ್ನಲಾಗಿದೆ.